ಸ್ನೇಹಿತರೆ, 2007ರಲ್ಲಿ ತೆರೆಕಂಡ ಚೆಲುವಿನ ಚಿತ್ತಾರ ಸಿನಿಮಾ ಸಾಕಷ್ಟು ಸದ್ದು ಮಾಡಿತು ಅಂತನೇ ಹೇಳಬಹುದು. ಅದರಲ್ಲೂ ಈ ಚಿತ್ರದಲ್ಲಿ ಗಣೇಶ್ ಹಾಗೂ ಅಮೂಲ್ಯ ಜೋಡಿ ಮೋಡಿ ಮಾಡಿತ್ತು. ಅಲ್ಲದೆ ಒಳ್ಳೆಯ ಕಥಾಹಂದರ ಹೊಂದಿದ್ದ ಚಿತ್ರ ಕೂಡ ಯಶಸ್ವಿಯಾಯಿತು. ಇನ್ನು ಚಿತ್ರದಲ್ಲಿ ಅಷ್ಟೇ ಮುಖ್ಯವಾದ ಒಂದು ಪಾತ್ರ ಇದೆ ಅದು ಕೂಡ ಬುಲ್ಲಿ ಪಾತ್ರ. ಇನ್ನು ಈ ಪಾತ್ರ ಬಾಲ ನಟರಾಗಿದ್ದ ರಾಕೇಶ್ ಅವರಿಗೆ ಅದೆಷ್ಟು ಹೆಸರು ತಂದುಕೊಟ್ಟಿದ್ದು,
ಅಂದರೆ ಎಲ್ಲಿ ಸಿಕ್ಕರು ಅವರನ್ನು ಎಲ್ಲರೂ ಬುಲ್ಲಿ ಬುಲ್ಲಿ ಎಂದೇ ಕರೆಯುತ್ತಿದ್ದರು ಅಷ್ಟರಮಟ್ಟಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಇನ್ನು ಈ ಚಿತ್ರದಲ್ಲಿ ಬುಲ್ಲಿ ಪಾತ್ರದಲ್ಲಿ ನಡೆಸಿದ್ದ ರಾಕೇಶ್ ಯಶಸ್ಸು ಕಂಡ ನಂತರ ಮುಂದೆ ಅನೇಕ ಚಿತ್ರಗಳಲ್ಲಿ ಕೂಡ ಅಭಿನಯಿಸಿದರು. ಅಲ್ಲದೆ ಬಾಲನಟನಾಗಿ ಬೇಡಿಕೆಯನ್ನು ಕಾಯ್ದುಕೊಂಡಿದ್ದ ರಾಕೇಶ್ ಇಂದು ನಮ್ಮೊಂದಿಗಿಲ್ಲ. ಹೌದು 2017ರಲ್ಲಿ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಅಕಾಲಿಕ ಮರಣ ಹೊಂದಿದರು. ಇನ್ನು ಇವರಿಗೆ,
ಗ್ಯಾಂಗ್ರೀನ್ ಮತ್ತು ಕ್ಯಾನ್ಸರ್ ಇತ್ತು ಎಂಬಸುಳ್ಳುಗಳು ಮಾಧ್ಯಮಗಳಲ್ಲಿ ಹಬ್ಬಿದ್ದವು, ಆದರೆ ನಿಜಕ್ಕೂ ನಡೆದಿದ್ದೆ ಬೇರೆ. ಇನ್ನು ರಾಕೇಶ್ ಅವರ ಅಕಾಲಿಕ ಮರಣದ ಕುರಿತು ಸಂದರ್ಶನವೊಂದರಲ್ಲಿ ಭಾವುಕರಾಗಿ ಮಾತನಾಡಿದ್ದಾರೆ ಅವರ ತಾಯಿ ನಟಿ ಆಶಾರಾಣಿ. ಹೌದು ಬಾಲ ನಟರಾಗಿದ್ದ ರಾಕೇಶ್ ತಾಯಿ ನಟಿ ರಾಣಿ ಅವರು ಕೂಡ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವವರು.
ಅಲ್ಲದೆ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಅಮೂಲ್ಯ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಇನ್ನು ರಾಕೇಶ್ ಅವರು ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಅಚಾನಕ್ಕಾಗಿ ತಾಯಿ ಮನೆಯಲ್ಲಿ ಏನು ಮರೆತಿದ್ದರಿಂದ ಅದನ್ನು ಕೊಡಲು ಸಿನಿಮಾ ಶೆಟ್ಟಿಗೆ ಹೋದಾಗ ನಿರ್ದೇಶಕ ಎಸ್ ನಾರಾಯಣ್ ಅವರು ರಾಕೇಶನನ್ನು ನೋಡಿ ಬುಲಿ ಪಾತ್ರವನ್ನು ರಾಕೇಶ್ ಗೆ ನೀಡಲು ನಿರ್ಧರಿಸುತ್ತಾರೆ. ಇನ್ನು ಇದೇ ರೀತಿ ಚೆಲುವಿನ ಚಿತ್ತಾರ ಸಿನಿಮಾದ ಬುಲ್ಲಿ ಪಾತ್ರದ ಪಪ್ಪುಸಿ ಡೈಲಾಗ್ ಇಂದಿಗೂ ಜನಪ್ರಿಯ.
ನಂತರ ಸಾಕಷ್ಟು ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ಕೂಡ ಗಿಟ್ಟಿಸಿಕೊಂಡರು ನಟ ರಾಕೇಶ್. ಇನ್ನು ಸಾಕಷ್ಟು ಚಿತ್ರಗಳು ಸೇರಿದಂತೆ ಅವರು ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ಅಷ್ಟಲ್ಲದೆ ಸ್ಯಾಂಡಲ್ವುಡ್ನಲ್ಲಿ ಹೀರೋ ಆಗಿ ಮಿಂಚುವ ದೊಡ್ಡ ಕನಸನ್ನು ಕೂಡ ಹೊಂದಿದ್ದರು, ಆದರೆ ವಿಧಿ ಕೈವಾಡ ಕನಸನ್ನು ನನಸಾಗಿಸುವ ಮುನ್ನವೇ ರಾಕೇಶ್ ಕಣ್ಮುಚ್ಚಿದರು.
ಹೀಗಿರುವಾಗ ಒಂದುದಿನ ರಾಕೇಶ್ ಆತಂಕದಿಂದ ಮನೆಗೆ ಬಂದು ಆರೋಗ್ಯದ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ಗಾಬರಿಗೊಂಡ ಅವರ ತಾಯಿ ಚಿಕಿತ್ಸೆ ಕೊಡಿಸಲು ಡಾಕ್ಟರ್ ಬಳಿ ಹೋಗ್ತಾರೆ. ಆಗ ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ರಾಕೇಶ್ ಗೆ ಪ್ಲೇಟ್ ಲೇಟ್ ಅಕೌಂಟ್ ಬಹಳ ಕಮ್ಮಿ ಇದೆ 75000 ಮಾತ್ರ ಇದೆ ಎನ್ನುವ ವಿಷಯ ತಿಳಿದು ಬರುತ್ತೆ. ಮುಂದಿನ ದಿನ ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ಅದು 45000ಕ್ಕೆ ಪುನಹ ಕಡಿಮೆಯಾಗುತ್ತದ.
ನಂತರ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಬೋನ್ ಮ್ಯಾರೋ ಮಾಡಿಸಿದ ನಂತರ ಆರೋಗ್ಯ ಸ್ವಲ್ಪ ಸುಧಾರಿಸುತ್ತದೆ. ಪುನಹ ಒಂದೆರಡು ದಿನಗಳ ನಂತರ ಮತ್ತೊಮ್ಮೆ ರಾಕೇಶ್ ಅವರಿಗೆ ಉಸಿರಾಡುತ್ತದ ಸಮಸ್ಯೆ ಉಂಟಾಗಿದೆ ಆಗ ಮತ್ತೊಮ್ಮೆ ಪರೀಕ್ಷೆ ಮಾಡಿಸಿದಾಗ ತಿಳಿದುಬಂದ ವಿಷಯ ಲ್ಯಾಪ್ರೋಸ್ಕೂಪಿ ಮಾಡುವ ಸಂದರ್ಭದಲ್ಲಿ ಅದಕ್ಕೆ ಬಳಸಿದ ಡಿವೈಸ್ ಒಂದು ರಾಕೇಶ್ ಅವರ ಕರುಳನ್ನೇ ಕ,ತ್ತರಿಸಿಕೊಂಡು ಹೋಗಿರುವುದು.
ಇನ್ನು ಹೀಗಾಗಿ ಕರುಳಿನ 80 ಭಾಗ ನಾ,ಶವಾಗಿತ್ತು 20 ಭಾಗ ಮಾತ್ರ ಕೆಲಸ ಮಾಡುತ್ತಿದೆ. ಹೀಗಾಗಿ ಆ ಸಮಯದಲ್ಲಿ ಆ ಹುಡುಗನ ದೇಹದಿಂದ ಪ್ರತಿದಿನ ಕರುಳನ್ನು ಹೊರತೆಗೆದು ಸ್ವಚ್ಛಗೊಳಿಸಿ ಮತ್ತೆ ಅದನ್ನು ದೇಹದ ಒಳಗೆ ಸೇರಿಸುತ್ತಿದ್ದರು ಈ ನೋವನ್ನು ತಾಳಲಾರದೆ ನನ್ನ ಮಗ ಮೃ,ತಪಟ್ಟ ಎಂದು ರಾಕೇಶ ತಾಯಿ ಆಶಾರಾಣಿ ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ. ಇಂತಹ ನೋವು ನಿಜಕ್ಕೂ ಯಾವ ತಾಯಿಗೂ ಬರೋದು ಬೇಡ…