ನಟ-ರಾಕೇಶ್

ತಾಯಿ ತಲೆತಗ್ಗಿಸುವಂತಹ ಕೆಲಸ ಮಾಡಿದ್ದ ನಟ ರಾಕೇಶ್ ! ಮಾಡಿದ್ದ ಅ ‘ಶ್ಲೀಲ ಕೆಲಸ ಏನು…

CINEMA/ಸಿನಿಮಾ

ಜೋಶ್​’ ಸಿನಿಮಾ ಮೂಲಕ ಕರ್ನಾಟಕದಲ್ಲಿ ಮನೆ ಮಾತಾದ ನಟ ರಾಕೇಶ್​ ಅಡಿಗ  ಅವರು ಈಗ ಬಿಗ್​ ಬಾಸ್​  ಸ್ಪರ್ಧಿ. ಬಿಗ್ ಬಾಸ್ ಮನೆಯಲ್ಲಿ ಖಾಸಗಿ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ. ರಾಕೇಶ್​ ಅಡಿಗ ಬಾಲ್ಯದ ಕೆಲ ವಿಷಯಗಳನ್ನು ಮನ ಹೇಳಿಕೊಂಡಿದ್ದಾರೆ.ರಾಕೇಶ್​ ಅಡಿಗ ಅವರ ಬಾಲ್ಯದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಅವರಿಗೆ ಕದಿಯುವ ಗುಣ ಇತ್ತು. ಅಷ್ಟೇ ಅಲ್ಲ, ಹುಡುಗಿಯ ಬೆತ್ತಲೆ ಫೋಟೋವನ್ನು ನೋಟಿಸ್​ ಬೋರ್ಡ್​ನಲ್ಲಿ ಅವರು ಹಾಕಿದ್ದರು! ಹಾಗು ಅವರು ಮಾಡಿದ ಕಳ್ಳತನದಿಂದ ಉಂಟಾದ ಮುಜುಗರದ  ಘಟನೆಗಳ ಬಗ್ಗೆ ರಾಕೇಶ್​ ಅಡಿಗ ಅವರು ಬಾಯಿ ಬಿಟ್ಟಿದ್ದಾರೆ‌‌.

ತಾಯಿ ತಲೆತಗ್ಗಿಸುವಂತಹ ಕೆಲಸ ಮಾಡಿದ್ದ ನಟ ರಾಕೇಶ್ ! ಮಾಡಿದ್ದ ಅಶ್ಲೀಲ ಕೆಲಸ ಏನು

ನನಗೆ ಕಳ್ಳತನ ಮಾಡುವ ಚಟ ಇತ್ತು. ಏನೇ ಕಂಡರೂ ಅದನ್ನು ಕದಿಯುತ್ತಿದ್ದೆ. ಕಳ್ಳತನದಿಂದ ನನಗೆ ಮಜಾ ಸಿಗುತ್ತಿತ್ತು. ಒಮ್ಮೆ ಸಂಬಂಧಿಕರ ಮನೆಯಲ್ಲಿ ಚಿನ್ನದ ಸರ ಕಳ್ಳತನ ಆಯಿತು. ಆದರೆ ಅದನ್ನು ನಾನು ಕದ್ದಿರಲಿಲ್ಲ. ಆದರೂ ನನ್ನ ಮೇಲೆ ಆರೋಪ ಬಂತು. ಚೈನ್​ ಸಿಗಲಿ ಅಂತ ನಾನು ದೇವರಲ್ಲಿ ಬೇಡಿಕೊಂಡೆ. ನಾನೇ ಕದ್ದಿದ್ದೇನೆ ಅಂತ ಎಲ್ಲರೂ ಫಿಕ್ಸ್​ ಆಗಿದ್ದರು. ಅದೃಷ್ಟವಶಾತ್​ ಚೈನ್​ ಸಿಕ್ಕಿತು. ಒಮ್ಮೆ ಕಳ್ಳತನ ಮಾಡಿ ಸಿಕ್ಕಿಬಿದ್ದರೆ ಶಾಶ್ವತವಾಗಿ ಕಳಂಕ ಎದುರಾಗುತ್ತದೆ ಎಂಬುದನ್ನು ಅವರೆಲ್ಲ ನನಗೆ ತಿಳಿಸಿ ಹೇಳಿದರು’ ಎಂದಿದ್ದಾರೆ ರಾಕೇಶ್​ ಅಡಿಗ.

7ನೇ ಕ್ಲಾಸ್​ನಲ್ಲಿ ನನಗೆ ಒಂದು ಹುಡುಗಿ ಮೇಲೆ ಕ್ರಶ್​ ಇತ್ತು. ಅವಳು ನನಗೆ ಬೈಯ್ದಿದ್ದಳು ಅಂತ ಹುಡುಗರು ನನಗೆ ಏನೇನೋ ಹೇಳಿ ಪ್ರಚೋದಿಸಿದರು. ಆಕೆ ಮೇಲಿನ ಕೋಪಕ್ಕೆ ಮ್ಯಾಗಜಿನ್​ನಲ್ಲಿ ಇರುವ ಬೆತ್ತಲೆ ಫೋಟೋ ಮೇಲೆ ಅವಳ ಹೆಸರು ಬರೆದು ನೋಟಿಸ್​ ಬೋರ್ಡ್​ನಲ್ಲಿ ಅಂಟಿಸಿದೆ. ಅದರಿಂದ ಶಾಲೆಯಲ್ಲಿ ದೊಡ್ಡ ತನಿಖೆ ನಡೆಯಿತು. ನಾನು ಸಿಕ್ಕಿ ಹಾಕಿಕೊಂಡೆ. ನಮ್ಮ ಅಮ್ಮನನ್ನು ಶಾಲೆಗೆ ಕರೆಸಿದ್ದರು. ಪ್ರಿನ್ಸಿಪಾಲ್​ ಚೇಂಬರ್​​ನಲ್ಲಿ ಅಮ್ಮ ತಲೆ ತಗ್ಗಿಸಿಕೊಂಡು ಕೂತ್ತಿದ್ದರು. ಅಂದು ಇಡೀ ದಿನ ಅವರು ನನ್ನ ಬಳಿ ಮಾತನಾಡಲಿಲ್ಲ. ಕ್ಷಮೆ ಕೇಳಿದೆ. ಒಂದು ವೇಳೆ ನನಗೆ ಈ ರೀತಿ ಮಾಡಿದ್ದರೆ ಏನಾಗುತ್ತಿತ್ತು ಹೇಳು ಅಂತ ಅಮ್ಮ ಕೇಳಿದರು. ಆಗ ನನಗೆ ನನ್ನ ತಪ್ಪಿನ ಅರಿವಾಯಿತು’ ಎಂದು ರಾಕೇಶ್​ ಅಡಿಗ ಹೇಳಿದ್ದಾರೆ.

ತನ್ನ ಹಾಗೂ ನಟ ರಾಕೇಶ್‌ ನಡುವಿನ ಸಂಬಂಧದ ಬಗ್ಗೆ ಸತ್ಯ ಬಿಚ್ಚಿಟ್ಟ ದಿವ್ಯಾ ಸುರೇಶ್..

ಬಿಗ್ ಬಾಸ್ ಪ್ರತಿ ಸೀಸನ್ ನಲ್ಲಿಯೂ ಜೋಡಿಗಳು ಇರುವುದು ಕಾಮನ್‌.. ಪರಿಚಯವೇ ಇಲ್ಲದೇ ಬಿಗ್ ಬಾಸ್ ಮನೆಗೆ ಬಂದರೂ ಸಹ ಕೆಲವೇ ದಿನಗಳಲ್ಲಿ ಸ್ನೇಹವಾಗಿ ಆ ಸ್ನೇಹ ಪ್ರೀತಿಯಾಗಿಬಿಡುತ್ತದೆ.. ಇದು ಕೆಲವರ ವಿಚಾರದಲ್ಲಿ ಮಾತ್ರ ಸತ್ಯ.. ಇನ್ನು ಅಷ್ಟೇ ವೇಗವಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮಾತು ಸಹ ಆಡದಷ್ಟು ದೂರ ಇರುವ ಜೋಡಿಗಳನ್ನೂ ಸಹ ನಾವು ಕಳೆದ ಸೀಸನ್ ಗಳಲ್ಲಿ ನೋಡಿದ್ದೇವೆ.. ಇನ್ನು ಈ ಸೀಸನ್ ವಿಚಾರಕ್ಕೆ ಬಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವಿನ ಪ್ರೀತಿ ಬಹಳ ಗಟ್ಟಿಯಾಗಿ ಹೊರಗೆ ಬಂದ ನಂತರ ಮದುವೆಯಾಗ್ತಾರೆ ಅನ್ನೋ ಮಾತು ಸಹ ಕೇಳಿ ಬಂದಿತ್ತು.. ಇಬ್ಬರೂ ಸಹ ಪರಸ್ಪರ ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಇದೆ..

ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ದಿವ್ಯಾ ಉರುಡುಗ ಅರವಿಂದ್ ಅವರಿಗೆ ಉಂಗುರ ಕೊಟ್ಟಿದ್ದು ಇತ್ತ ಎರಡನೇ ಇನ್ನಿಂಗ್ಸ್ ನಲ್ಲಿ ಅರವಿಂದ್ ಖುದ್ದು ಡಿಸೈನರ್ ಅನ್ನು ನೇಮಿಸಿ ಇಬ್ಬರಿಗೂ ಹೋಲುವಂತಹ ಬಟ್ಟೆಗಳನ್ನು ಡಿಸೈನ್ ಮಾಡಿಸಿದ್ದು ಎಲ್ಲವೂ ಸಹ ಇಬ್ಬರ ನಡುವಿನ ಪ್ರೀತಿಯನ್ನು ತೋರುತಿತ್ತು.. ಆದರೆ ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಜೋಡಿ ಸಹ ಕಾಣಿಸಿಕೊಂಡಿತ್ತು.. ಮದುವೆ ವಿಚಾರದ ವರೆಗೂ ಹೋಗದಿದ್ದರೂ ಮನರಂಜನೆ ಹಾಗೂ ಬಿಗ್ ಬಾಸ್ ಮನೆಯಲ್ಲಿ ಉಳಿಯುವ ಸಲುವಾಗಿ ಜೋಡಿಯಾಗಿ ಇದ್ದರು.. ಕೆನೆಗೆ ಎರಡನೇ ಸೀಸನ್ ವೇಳೆ ಸ್ನೇಹಿತರು ಮಾತ್ರ ಎಂದೂ ಸಹ ತೋರಿಸಿಕೊಂಡರು.. ಆದರೆ ಜನರು ಮಾತ್ರ ಇವರನ್ನೂ ಸಹ ಬಿಗ್ ಬಾಸ್ ಜೋಡಿಯೆಂದೇ ಪರಿಗಣಿಸಿದ್ದು ಸತ್ಯ..

ಅವರೇ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್.. ಬಿಗ್ ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ಇವರಿಬ್ಬರು ಬಹಳ ಆತ್ಮೀಯವಾಗಿದ್ದದ್ದನ್ನು ನೋಡಿ ಚಕ್ರವರ್ತಿ ಚಂದ್ರಚೂಡ ಅವತು ತಾಳಿ ತಂದು ಕೊಡ್ಲಾ ಮದುವೆ ಆಗ್ತೀರಾ ಎಂದು ಪ್ರಶ್ನಿಸಿದ್ದೂ ಉಂಟು.. ಇದರ ಜೊತೆಗೆ ಸುದೀಪ್ ಅವರ ಮುಂದೆಯೇ ನುಗ್ಗೇಕಾಯಿ ಮಾವಿನ ಹಣ್ಣಿನ ಜೋಕ್ ಮಾಡ್ತಾನೆ ಮಂಜು.. ಇದಕ್ಕೆ ಏನು ಅರ್ಥ ಎಂದು ಮಂಜು ವಿರುದ್ಧ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದರು.. ಈ ರೀತಿ ಮಂಜು ಜೊತೆಗೆ ದಿವ್ಯಾ ಸುರೇಶ್ ಅವರ ಹೆಸರು ಕೇಳಿ ಬರುತ್ತಿದ್ದಂತೆಯೇ ಇತ್ತ ಹೊರಗೆ ದಿವ್ಯಾ ಸುರೇಶ್ ಬಗ್ಗೆ ಹೊಸ ವಿಚಾರವೊಂದು ಹೊರ ಬಂದಿತ್ತು.. ಹೌದು ಜೋಶ್ ಸಿನಿಮಾದ ನಟ ರಾಕೇಶ್ ಅಡಿಗ ಜೊತೆಗೆ ದಿವ್ಯಾ ಸುರೇಶ್ ಬಹಳ ಆತ್ಮೀಯವಾದ ಫೋಟೋಗಳು ಹರಿದಾಡಿದ್ದವು..

ಈ ಬಗ್ಗೆ ರಾಕೇಶ್ ಅಡಿಗ ಅವರನ್ನು ಪ್ರಶ್ನಿಸಲಾಗಿ ನಾನು ದಿವ್ಯಾ ಒಟ್ಟಿಗೆ ಇದ್ವಿ.. ಆದರೆ ಈಗ ಇಲ್ಲ.. ಅವಳಿಗೆ ದೊಡ್ಡ ವೇದಿಕೆ ಸಿಕ್ಕಿದೆ.. ಅವಳು ಏನು ಸಾಧನೆ ಮಾಡಲು ಹೊರಟಿದ್ದಾಳೋ ಅದಕ್ಕೆ ನನಗೆ ಖುಷಿ ಇದೆ ಎಂದಿದ್ದರು.. ಆದರೀಗ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ದಿವ್ಯಾ ಸುರೇಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..‌ ಹೌದು ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಿದ್ದ ದಿವ್ಯಾ ಸುರೇಶ್ ರಾಕೇಶ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.. “ರಾಕೇಶ್ ಅಡಿಗ.. ಎಲ್ರಿಗೂ ಗೊತ್ತಿರೋ ಹಾಗೆ ನಾನು ರಾಕೇಶ್ ಕಳೆದ ನಾಲ್ಕು ವರ್ಷದಿಂದ ಲಿವ್ ಇನ್ ಟುಗೆದರ್ ನಲ್ಲಿದ್ದೆವು.. ಆತ ನನಗೆ ಒಳ್ಳೆ ಫ್ರೆಂಡ್.. ನನ್ನ ಏಳು ಬೀಳುಗಳಲ್ಲಿ ಜೊತೆಯಲ್ಲಿದ್ದರು.. ಈಗಲೂ ಜೊತೆಯಲ್ಲಿದ್ದಾರೆ ಕೂಡ.. ನನ್ನ ಹೃದಯಕ್ಕೆ ರಾಕೇಶ್ ಬಹಳ ಹತ್ತಿರ..

ನಾವು ಮೂರ್ನಾಲ್ಕು ವರ್ಷಗಳಿಂದ ಜೊತೆಯಲಿದ್ವಿ.. ನನಗೆ ರಾಕೇಶ್ ಗ್ರೇಟ್ ಫ್ರೆಂಡ್.. ನನ್ನ ಕಷ್ಟ ಸುಖಗಳಲ್ಲಿ ನನ್ನ ಜೊತೆ ಇದ್ರು.. ಒಳ್ಳೆಯ ಜೊತೆಗಾರ ಅಂತ ಹೇಳಿದ್ರೆ ತಪ್ಪಾಗಲ್ಲಾ.. ತುಂಬಾ ಒಳ್ಳೆ ಫ್ರೆಂಡ್ ನನಗೆ ರಾಕಿ.. ಖುಷಿಯಾಗತ್ತೆ ಅವನ ಬಗ್ಗೆ.. ಹೊರಗೆ ಜನ ಈ ರೀತಿ ಮಾತನಾಡಿದ್ದು ಸ್ವಲ್ಪ ಬೇಜಾರ್ ಆಯಿತು.. ರಾಕಿ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದ್ದಾರೆ.. ರಾಕೇಶ್ ಜೊತೆ ಇದ್ದ ಪ್ರತಿ ಕ್ಷಣವೂ ನನಗೆ ಬೆಸ್ಟ್ ಆಗಿತ್ತು.. ಪ್ರತಿ ದಿನವೂ ಅತ್ಯದ್ಭುತ ಕ್ಷಣವಾಗಿತ್ತು.. ನನ್ನ ಜೀವನದ ಅತಿ ಒಳ್ಳೆಯ ದಿನಗಳನ್ನು ರಾಕೇಶ್ ಜೊತೆ ನಾನು ಕಳೆದಿದ್ದೇನೆ.. ಇವಾಗ ನಾವು ಒಳ್ಳೆ ಸ್ನೇಹಿತರಾಗಿದ್ದೇವೆ.‌ ಖುಷಿಯಾಗತ್ತೆ ನನಗೆ ಅವನ ಬಗ್ಗೆ.. ನನ್ನ ಜೀವನದಲ್ಲಿ ಯಾರನ್ನಾದರೂ ವಿಶೇಷ ಅಂತ ಪರಿಗಣಿಸೋದಾದರೆ ಅದು ರಾಕಿ ಆಗಿರ್ತಾನೆ.. ಎಂದಿದ್ದಾರೆ..




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.