ರಾಜು ತಾಳಿಕೋಟೆ

ಮುಸ್ಲಿಂ ಸಮುದಾಯದ ರಾಜು ತಾಳಿಕೋಟೆ,ಮದುವೆಯಾಗಿದ್ದು ಹಿಂದೂ ಮಹಿಳೆಯರನ್ನ! ಇವರ ಇಬ್ಬರು ಪತ್ನಿಯರು ಹೇಗಿದ್ದಾರೆ ಗೊತ್ತಾ?

Today News / ಕನ್ನಡ ಸುದ್ದಿಗಳು

ಕನ್ನಡದಲ್ಲಿ ಸಾಕಷ್ಟು ಕಲಾವಿದರು ರಂಗಭೂಮಿ ಹಿನ್ನೆಲೆಯನ್ನು ಹೊಂದಿರುವವರೆ. ಇನ್ನು ಹಾಸ್ಯ ಕಲಾವಿದರು ಸಹ ರಂಗಭೂಮಿ ನಂಟು ಹೊಂದಿರುವ ರಂಗಕರ್ಮಿಗಳು. ಅದರಲ್ಲಿ ನೂರಾರು ಕಲಾವಿದರು ಹಿರಿತೆರೆ ಅಥವಾ ಕಿರುತೆರೆಯಲ್ಲಿ ತಮ್ಮ ರಂಗಭೂಮಿಯ ಅನುಭವದ ಮೂಲಕ ಜನರ ಮೆಚ್ಚಿನ ಕಲಾವಿದರು ಎನಿಸಿದ್ದಾರೆ. ಇಂಥ ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದವರಲ್ಲಿ ಕನ್ನಡದ ಪ್ರಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಕೂಡ ಒಬ್ಬರು.

ಹಲವಾರು ಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ, ಪೋಷಕ ನಟರಾಗಿ ಕಾಣಿಸಿಕೊಂಡಿರುವ ರಾಜು ತಾಳಿಕೋಟೆ ಅವರ ಜೀವನದ ಬಗ್ಗೆ ಇಲ್ಲೊಂದು ಸಣ್ಣ ಮಾಹಿತಿ. ರಾಜು ತಾಳಿಕೋಟೆ ಹಿರಿತೆರೆ ಹಾಗೂ ಕಿರಿತೆರೆ ಎರಡರಲ್ಲೂ ಉತ್ತಮ ಕಲಾವಿದ ಎನಿಸಿದ್ದು, ರಂಗಭೂಮಿಯ ನಂಟನ್ನು ಇನ್ನೂ ಬಿಟ್ಟಿಲ್ಲ. ಇನ್ನು ಇವರ ಮಕ್ಕಳು ಯಾರೂ ರಂಗಭೂಮಿಯಲ್ಲಿ ಕೆಲಸ ಮಾಡದೇ ಇರುವುದೇ ವಿಶೇಷ.

ಇನ್ನು ರಾಜು ತಾಳಿಕೋಟೆಯವರು ಕನ್ನಡಿಗರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದು ಕನ್ನಡದ ದೊಡ್ಡ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಹೋಗುವುದರ ಮೂಲಕ. ಅಲ್ಲಿಯೂ ಉತ್ತಮ ಆಟವಾಡಿ ಹೊರಬಂದಿದ್ದರು ರಾಜು ತಾಳಿಕೋಟೆ. ರಾಜು ತಾಳಿಕೋಟೆ ಮೂಲತ: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರು. ಇವರ ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ಇನ್ನು ತಾಳಿಕೋಟೆಯಲ್ಲಿ ವಾಸವಾಗಿರುವ ಇವರು ಸ್ವಂತ ನಾಟಕ ಕಂಪನಿಯನ್ನು ಕೂಡ ಹೊಂದಿದ್ದಾರೆ.

ಇನ್ನು ರಾಜು ತಾಳಿಕೋಟೆ ಯವರ ಕುಟುಂಬದ ಬಗ್ಗೆ ಹೇಳುವುದಾದರೆ ರಾಜು ತಾಳಿಕೋಟೆ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಆದರೆ ಮದುವೆಯಾದದ್ದು ಮಾತ್ರ ಹಿಂದೂ ಹೆಣ್ಣುಮಕ್ಕಳನ್ನ. ಹೌದು ಸ್ನೇಹಿತರೇ, ರಾಜು ಅವರಿಗೆ ಪ್ರೇಮ ಮತ್ತು ಪ್ರೇಮ ಎಂಬ ಇಬ್ಬರು ಹೆಂಡತಿಯರು. ಇಬ್ಬರೂ ಒಟ್ಟಿಗೆ ರಾಜು ಅವರ ಜೊತೆ ಜೀವನಮಾಡುತ್ತಿರುವುದೇ ವಿಶೇಷ. ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ಮದುವೆಯಾಗಿ ಒಟ್ಟಿಗೆ ಧೀರ್ಘಕಾಲ ಬದುಕುವುದು ಅಸಾಧ್ಯವಾದ ಮಾತು. ಇದರ ನಡುವೆ ಇಷ್ಟು ವರ್ಷದಿಂದ ರಾಜು ಅವರ ಕುಟುಂಬ ಒಟ್ಟಿಗೆ ಇರುವುದು ವಿಭಿನ್ನವಾಗಿ ಕಾಣಿಸುತ್ತದೆ. ಇನ್ನು ರಾಜು ತಾಳಿಕೋಟೆ ಮಕ್ಕಳ ಮೇಲೆ ಮುನಿಸಿಕೊಂಡು ಅವರ ಬಳಿ ಮಾತನಾಡುತ್ತಾ ಇರಲಿಲ್ಲವಂತೆ. ಹೀಗಂತ ರಾಜಾ ರಾಣಿ ಶೋ ನಲ್ಲಿ ರಾಜು ತಾಳಿಕೋಟೆ ಹೇಳಿಕೊಂಡಿದ್ದರು. ಅನಂತರ ಅವರ ಮಗ ಭರತ್ ರಾಜಾ ರಾಣಿ ವೇದಿಕೆಗೆ ಬಂದು ಅಪ್ಪನ ಬಳಿ ಕ್ಷಮೆ ಕೇಳಿದ್ದು ರಾಜು ತಾಳಿಕೋಟೆ ಮಕ್ಕಳನ್ನು ಕ್ಷಮಿಸಿದ್ದಾರೆ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.