ಸಾಮಾಜಿಕ ಜಾಲತಾಣಗಳು ಒಂದು ಪ್ರಬಲ ಮಾದ್ಯಮಗಳಾಗಿದ್ದು, ಪ್ರತಿಭಾವಂತರೆನಿಸಿದ ಸಾಮಾನ್ಯರು ಸಹಾ ಸೆಲೆಬ್ರಿಟಿಗಳಾಗಲು ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿದೆ. ಇನ್ನೊಂದು ಕಡೆ ಸೆಲೆಬ್ರಿಟಿಗಳು ಸಿನಿಮಾಗಳು ಮಾತ್ರವೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಕ್ರಿಯವಾಗಿದ್ದು, ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ತೆರೆಯ ಮೇಲೆ ರಂಜಿಸುವ ಕಲಾವಿದರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳು ತಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಿದ್ದಾರೆ.
ಹೊಸ ಹೊಸ ಅಪ್ಡೇಟ್ ಗಳ ಮೂಲಕ ಅಭಿಮಾನಿಗಳ ಜೊತೆಗೆ ತಮ್ಮ ಖುಷಿಯನ್ನು ಸಹಾ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಿನಿಮಾಗಳಿಂದ ದೂರ ಉಳಿದಿದ್ದರೂ ಸಹಾ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಅಂತಹ ಸಿನಿಮಾ ನಟಿಯರಲ್ಲಿ ಒಬ್ಬರು ರಾಗಿಣಿ ಪ್ರಜ್ವಲ್ ಅವರು.
ಹೌದು ನಟಿ ರಾಗಿಣಿ ಪ್ರಜ್ವಲ್ ಅವರು ಸ್ಯಾಂಡಲ್ವುಡ್ ನ ನಟ ಪ್ರಜ್ವಲ್ ದೇವರಾಜ್ ಅವರ ಜೊತೆ ಮದುವೆಯಾದ ನಂತರದಲ್ಲಿ ಸಿನಿಮಾಗಳಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಇತ್ತೀಚಿಗೆ ಅವರ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಿದ್ದು, ಮುಂದಿನ ದಿನಗಳಲ್ಲಿ ಹೊಸ ಸಿನಿಮಾಗಳನ್ನು ಮಾಡಬಹುದು ಎನ್ನುವ ನಿರೀಕ್ಷೆಗಳಿವೆ.
ರಾಗಿಣಿ ಅವರು ಸಿನಿಮಾದಿಂದ ದೂರವಿದ್ದ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಯೇ ಇದ್ದರು. ಅವರು ಹಾಗೂ ಪ್ರಜ್ವಲ್ ದೇವರಾಜ್ ಜೊತೆಯಾಗಿ ಡ್ಯಾನ್ಸ್ ಮಾಡುವ ವೀಡಿಯೋಗಳು, ರಾಗಿಣಿ ಅವರು ಒಬ್ಬರೇ ಹಾಡಿಗೆ ಹೆಜ್ಜೆಗಳನ್ನು ಹಾಕಿದ ವೀಡಿಯೋಗಳು, ಫಿಟ್ನೆಸ್ ಬಗ್ಗೆ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.
ರಾಗಿಣಿ ಅವರ ಡ್ಯಾನ್ಸ್ ವೀಡಿಯೋಗಳು ಭರ್ಜರಿ ವೈರಲ್ ಆಗುವುದು ಮಾತ್ರವೇ ಅಲ್ಲದೇ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆಗಳು ಸಹಾ ಹರಿದು ಬಂದು, ಕಾಮೆಂಟ್ ಗಳಲ್ಲಿ ಅವರನ್ನು ಅಭಿಮಾನಿಗಳು ಹಾಡಿ ಹೊಗಳುತ್ತಾರೆ. ಇದೀಗ ರಾಗಿಣಿ ಅವರು ಸೂಪರ್ ಹಿಟ್ ಸಿನಿಮಾ ಕಾಂತಾರದ ಅದ್ಭುತ ಹಾಗೂ ಅಪಾರ ಜನ ಮೆಚ್ಚುಗೆಯನ್ನು ಪಡೆದಿರುವ ಸಿಂಗಾರ ಸಿರಿಯೇ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಬಹಳ ಅದ್ಭುತವಾಗಿ ಡ್ಯಾನ್ಸ್ ಮಾಡಿರುವ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ. ನವಿಲನ್ನೂ ನಾಚಿಸುವ ಹಾಗೆ ಬಳಕುತ್ತಾ, ಭಾವಗಳನ್ನು ವ್ಯಕ್ತಪಡಿಸುತ್ತಾ ರಾಗಿಣಿ ಅವರು ಮಾಡಿರುವ ನೃತ್ಯವನ್ನು ಈಗಾಗಲೇ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಒಂದೂವರೆ ಲಕ್ಷ ದಾಟಿದ ಮೆಚ್ಚುಗೆಗಳು ಹರಿದು ಬಂದಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ ಮಾಡಿದವರಲ್ಲಿ ಅನೇಕರು ರಾಗಿಣಿ ಅವರ ಡ್ಯಾನ್ಸ್ ಗೆ ಸೂಪರ್, ಫೆಂಟಾಸ್ಟಿಕ್ ಎಂದೆಲ್ಲಾ ಮೆಚ್ಚುಗೆ ನೀಡಿದ್ದಾರೆ. ಅವರ ಡ್ಯಾನ್ಸ್ ವಿಭಿನ್ನವಾಗಿದ್ದು ಸಹಜವಾಗಿ ಎಂಬಂತೆ ಜನರಿಗೆ ಇಷ್ಟವಾಗಿದೆ. ಹೀಗಾಗಿ ವೈರಲ್ ಆಗುತ್ತಾ ಸಾಗಿದೆ.
ಆ ವಿಡಿಯೊ ಕೆಳಗಿದೆ ನೋಡಿ…