ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಬಹಳ ಮನೋರಂಜನೆಯನ್ನು ನೀಡುತ್ತಿದ್ದಂತಹ ರಿಯಾಲಿಟಿ ಶೋ. ನಟ ಹಾಗೂ ನಿರುಪಕ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮ ಬಹಳ ಜನಪ್ರಿಯತೆಯನ್ನು ಗಳಿಸಿತ್ತು. ಈಗಾಗಲೇ ಹಲವು ಸೀಸನ್ ಹಾಗೂ ಸಾಕಷ್ಟು ಎಪಿಸೋಡ್ ಗಳನ್ನು ಪ್ರಸಾರ ಮಾಡಿರುವ ಮಜಾ ಟಾಕೀಸ್ ಮತ್ತೆ ಯಾವಾಗ ಆರಂಭವಾಗುತ್ತದೆ ಅನ್ನೋದು ಜನರಲ್ಲಿ ಮೂಡಿರುವ ಕುತೂಹಲ.
ಇನ್ನು ಮಜಾ ಟಾಕೀಸ್ ವೇದಿಕೆ ಮೇಲೆ ಸಾಕಷ್ಟು ಸೆಲೆಬ್ರಿಟಿಗಳು ಬಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮಜಾ ಟಾಕೀಸ್ ನ ಕಳೆದ ಸೀಸನ್ ನಲ್ಲಿ ರಾಗಿಣಿ ದ್ವಿವೇದಿ ಕೂಡ ಸೆಲೆಬ್ರಿಟಿ ಆಗಿ ಆಗಮಿಸಿದ್ದರು. 1990 ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದ ರಾಗಿಣಿ ದ್ವಿವೇದಿ ಸ್ಯಾಂಡಲ್ ವುಡ್ ನ ಫೇಮಸ್ ನಟಿ.
ಮಾಡೆಲ್ ಕೂಡ ಆಗಿರುವ ರಾಗಿಣಿ ದ್ವಿವೇದಿ ಇವರಿಗೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಅತ್ಯುತ್ತಮ ನಟಿ ಎನಿಸಿಕೊಂಡಿದ್ದಾರೆ. ನಟಿ ರಾಗಿಣಿ ದ್ವಿವೇದಿ ಅವರ ಸಿನಿಮಾ ಜರ್ನಿ ಆರಂಭವಾಗಿದ್ದು ವೀರ ಮದಕರಿ ಸಿನಿಮಾದ ಮೂಲಕ. ಸುದೀಪ್ ಅವರಿಗೆ ನಾಯಕಿ ನಟಿಯಾಗಿ ಆಯ್ಕೆಗೊಂಡ ರಾಗಿಣಿ ತಮ್ಮ ಮೊದಲ ಸಿನಿಮಾದಲ್ಲಿಯೇ ಇಂಪ್ರೆಶನ್ ಕ್ರಿಯೇಟ್ ಮಾಡಿದ್ದರು.
ಕೆಂಪೇಗೌಡ, ಶಿವ, ಬಂಗಾರಿ, ರಾಗಿಣಿ ಐಪಿಎಸ್ ಹೀಗೆ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ರಾಗಿಣಿ ಕರ್ನಾಟಕದ ಅತ್ಯಂತ ಇನ್ನಷ್ಟು ಫೇಮಸ್ ಆಗಿದ್ದು ಅವರ ತುಪ್ಪ ತುಪ್ಪ ಹಾಡಿನ ಮೂಲಕ. ಹೌದು ತುಪ್ಪ ಬೇಕಾ ತುಪ್ಪ ಅಂತ ಐಟಂ ಸಾಂಗ್ ಒಂದಕ್ಕೆ ಸೊಂಟ ಬದುಕಿಸಿದ ರಾಗಿಣಿ ವಿವೇದಿ ಇದೀಗ ತುಪ್ಪದ ಹುಡುಗಿ ಎಂದೆ ಫೇಮಸ್ ಆಗಿದ್ದಾರೆ. 2009ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟ ರಾಗಿಣಿ ದ್ವಿವೇದಿ ಕನ್ನಡ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಇವರಿಗೆ ಸುಮಾರು 25ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿ ಅವುಗಳ ಮೂಲಕ ಸಕ್ಸಸ್ ಕೂಡ ಕಂಡಿದ್ದಾರೆ. ಪಂಜಾಬಿ ಬೆಡಗಿ ರಾಗಿಣಿ ಅವರ ತಂದೆ ಸೈನ್ಯದಲ್ಲಿ ಕೆಲಸ ನಿರ್ವಹಿಸಿದವರು. ಅದೇ ಶಿಸ್ತನ್ನು ಕೂಡ ಮೈಗೂಡಿಸಿಕೊಂಡಿರುವ ರಾಗಿಣಿ ನೋಡುವುದಕ್ಕೆ ತುಂಬಾ ಫೀಟ್ ಆಗಿದ್ದಾರೆ. ಇದೀಗ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
2011ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾಗಿಯೂ ಕೂಡ ರಾಗಿಣಿ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ರಾಗಿಣಿ ದ್ವಿವೇದಿ ಗುಡ್ ಸೆನ್ಸ್ ಆಫ್ ಹ್ಯೂಮರ್ ಇರುವವರು ಅಂತ ಎಲ್ಲರಿಗೂ ಗೊತ್ತು ಯಾಕಂದ್ರೆ ಅವರು ಹಲವು ಸಂದರ್ಶನದ ವೇಳೆ ಹಾಸ್ಯ ಚಟಾಕಿಗಳನ್ನ ಹಾರಿಸುತ್ತಾರೆ. ಇನ್ನು ಮಜಾ ಟಾಕೀಸ್ ನಲ್ಲಿ ಒಮ್ಮೆ ಸೆಲಿಬ್ರಿಟಿ ಆಗಿ ಆಗಮಿಸಿದ ರಾಗಿಣಿ ದ್ವಿವೇದಿ ಅವರ ಹಾಸ್ಯ ಪ್ರಜೆಗೆ ಅಭಿಮಾನಿಗಳು ಬಿದ್ದು ಬಿದ್ದು ನಕ್ಕಿದ್ದರು.
ಮಜಾ ಟಾಕೀಸ್ ನಲ್ಲಿ ಗುಂಡು ಮಾಮ ಎನ್ನುವ ಕ್ಯಾರೆಕ್ಟರ್ ಬಹಳನೇ ಫೇಮಸ್ ಆಗಿದೆ. ಇನ್ನು ಸದಾ ಕುಡಿದು ತೂರಾಡುತ್ತಾ ಡೈಲಾಗ್ ಹೇಳುವ ಗುಂಡು ಮಾಮ ಹಾಗೂ ರಾಗಿಣಿ ದ್ವಿವೇದಿ ಅವರ ನಡುವಿನ ಸಂಭಾಷಣೆ ಬಹಳ ಮನೋರಂಜನೆಯನ್ನು ನೀಡಿತ್ತು. ಗುಂಡು ಮಾಮ ಮಾತನ್ನ ಆಡುವುದಕ್ಕೂ ಮೊದಲು ನೀವು ಮೊದಲು ನಿಮ್ಮ ಲುಂಗಿ ಸರಿ ಮಾಡಿಕೊಳ್ಳಿ ಅಂತ ರಾಗಿಣಿ ಹೇಳಿದ್ರು. ಅದಕ್ಕೆ ನನ್ನ ಚಡ್ಡಿ ನನ್ನ ಮೈ ಮೇಲೆ ಇದೆ ಅಂತ ಗುಂಡು ಮಾಮ ಕೌಂಟರ್ ಕೊಟ್ಟಿದ್ದರು. ಹೀಗೆ ಇವರಿಬ್ಬರ ಸಂಭಾಷಣೆ ಹೆಚ್ಚು ಹಾಸ್ಯಮಯವಾಗಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ತುಂಬಾನೇ ವೈರಲ್ ಆಗಿದೆ.