ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಿರಿಯಾನಿ ತಿನ್ನುವ ಸ್ಟೈಲ್ ನೋಡಿ ಹುಬ್ಬೇರಿಸಿದ ನೆಟ್ಟಿಗರು! ವಿಡಿಯೋ ನೋಡಿದ್ರೆ ಸೂಪರ್ ಅಂತೀರಾ!!

CINEMA/ಸಿನಿಮಾ Entertainment/ಮನರಂಜನೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ರಿಲೀಸ್ ಆದಾಗಿನಿಂದ ಅದರ ಡೈಲಾಗ್ ಗಳದ್ದೇ ಕಾರುಬಾರು.‌ಕೆ‌ಜಿ‌ಎಫ್ ಮೊದಲ ಭಾಗ ರಿಲೀಸ್ ಆಗಿದ್ದಾಗಲೂ ಅದರ ಡೈಲಾಗ್ ಗಳು ಪ್ರತಿ ಯುವಕರ ಬಾಯಲ್ಲಿ ರಾರಾಜಿಸುತ್ತಿತ್ತು.‌ “ಇನ್ ಮೇಲಿಂದ ಅವರಪ್ಪ, ನನ್ನ ಮಾವ…..ನಾನು ನಿಮ್ಮೆಲರಿಗೂ ಭಾವ. ನಿಮ್ಮಕ್ಕನ್ ಚೆನ್ನಾಗಿ ನೋಡ್ಕೊಳ್ರೋ….ಚೆನ್ನಾಗಿ ನೋಡ್ಕೊಳ್ಳಿ” ಈ ಡೈಲಾಗ್ ನ ಪಡ್ಡೆ ಹುಡುಗರು ಹೇಳಿದ್ದೇ ಹೇಳಿದ್ದು.

ಅದೇ ರೀತಿ‌ ಇನ್ನೊಂದು ಫೇಮಸ್ ಡೈಲಾಗ್ ಅಂದರೆ ” ಇಫ್ ಯು ಥಿಂಕ್ ಯು ಆರ್ ಬ್ಯಾಡ್.. ಐ ಯಾಮ್ ಯುವರ್ ಡ್ಯಾಡ್…”. ಈ ಡೈಲಾಗ್ ಅಂತೂ ಸಿಕ್ಕಾಪಟ್ಟೆ ಹಿಟ್ ಆಗಿತ್ತು.‌ ಇದೇ ಮೈನ್ ಡೈಲಾಗ್ ಅನ್ನಿಸಿಕೊಂಡಿತ್ತು.‌ ಇದೀಗ ಕೆ ಜೆ ಎಪ್ ಪಾರ್ಟ್ 2 ರಿಲೀಸ್ ಆಗಿ ದೊಡ್ಡ ದಾಖಲೆಯನ್ನೇ ಬರೆದಿದೆ. ಈ ಸಿನಿಮಾ ರಿಲೀಸ್ ಆದಾಗಿಂದ ಸೋಶಿಯಲ್ ಮೀಡಿಯಾಗಳಲ್ಲಿ, ಯುವಕ ಯುವತಿಯರ ಬಾಯಲ್ಲಿ, ರೀಲ್ಸ್ ಗಳಲ್ಲಿ ಒಂದೇ ಡೈಲಾಗ್ ಕೇಳಿ ಬರುತ್ತಿದೆ. ಅದುವೇ ವಾಯ್ಲೆನ್ಸ್ ಡೈಲಾಗ್.‌

ಹೌದು, ಈ ” ವಾಯ್ಲೆನ್ಸ್ ವಾಯ್ಲೆನ್ಸ್ ವಾಯ್ಲೆನ್ಸ್ , ಐ ಡೋಂಟ್ ಲೈಕ್ ಇಟ್.. ಐ ಅವಾಯ್ಡ್.. ಬಟ್ ವಾಯ್ಲೆನ್ಸ್ ಲೈಕ್ಸ್ ಮಿ…. ಐ ಕಾಂಟ್ ಅವಾಯ್ಡ್…” ಡೈಲಾಗ್ ಇದೀಗ ಎಲ್ಲರ ಫೆವರಿಟ್ ಅನ್ನಿಸಿಕೊಂಡಿದೆ.‌ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಡೈಲಾಗ್ ಹೇಳಿ ರೀಲ್ಸ್ ಮಾಡುತ್ತಿದ್ದಾರೆ. ಇದರ ಜೊತೆ ಸೇಮ್ ಡೈಲಾಗ್ ಟೋನ್ ಬಳಸಿ ಬೇರೆ ಬೇರೆ ಡೈಲಾಗ್ ಕ್ರಿಯೇಟ್ ಮಾಡಲು ಶುರು ಮಾಡಿದ್ದಾರೆ.‌ ಸ್ಕೂಲ್ ಬಗ್ಗೆ, ಎಕ್ಸಾಂ ಬಗ್ಗೆ ಹೀಗೆ ಬೇರೆ ಬೇರೆ ಡೈಲಾಗ್ ಗಳು ಬಂದಿದೆ.




ಇದೀಗ ಸ್ಯಾಂಡಲ್ ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯವರ ಹೊಸ ರೀಲ್ಸ್ ವೈರಲ್ ಆಗಿದ್ದು ಇದರಲ್ಲಿ ಕೆ ಜಿ ಎಪ್ 2 ನ ವಾಯ್ಲೆನ್ಸ್ ಡೈಲಾಗ್ ನ ಹೊಸ ವರ್ಸನ್ ಇದೆ. ಹೌದು, ಒಂದು ರೆಸ್ಟೋರೆಂಟ್ ಒಂದರಲ್ಲಿ ಬಿರಿಯಾನಿ ತಿನ್ನುತ್ತಾ ಒಂದು ಡೈಲಾಗ್ ಗೆ ರೀಲ್ಸ್ ಮಾಡಿದ್ದಾರೆ. “ಬಿರಿಯಾನಿ ಬಿರಿಯಾನಿ ಬಿರಿಯಾನಿ ಐ ಡೋಂಟ್ ಲೈಕ್ ಇಟ್, ಐ ಅವಾಯ್ಡ್, ಬಟ್ ಬಿರಿಯಾನಿ ಲೈಕ್ಸ್ ಮಿ, ಐ ಕಾಂಟ್ ಅವಾಯ್ಡ್ ಎಂದು ಬಿರಿಯಾನಿ ಸವಿಯುತ್ತಲೇ ರೀಲ್ಸ್ ಮಾಡಿದ್ದು ಆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ ರಾಗಿಣಿ ದ್ವಿವೇದಿ.

ಈ ವಿಡಿಯೋ ನೋಡಲು ಮಾದಕ ದಂತೆ ಕಂಡಿದೆ, ಅಭಿಮಾನಿಗಳು, ನೆಟ್ಟಿಗರು ವಿಡಿಯೋ ನೋಡಿ ವಾವ್ ಎಂದಿದ್ದಾರೆ. ಮದಕರಿ ಸಿನಿಮಾ ಮೂಲಕ ಕಿಚ್ಚ ಸುದೀಪ್ ಜೊತೆ ನಟಿಸಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಪಂಜಾಬಿ ಚೆಲುವೆ ಈ ರಾಗಿಣಿ ದ್ವಿವೇದಿ. ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದ ರಾಗಿಣಿ ದ್ವಿವೇದಿ ಇದೀಗ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದ್ದರೂ, ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

ಆಗಾಗ್ಗೆ ರೆಸಿಪಿ ವಿಡಿಯೋ, ವರ್ಕೌಟ್ ವಿಡಿಯೋ, ಡ್ಯಾನ್ಸ್ ವಿಡಿಯೋ, ಟೂರ್ ವಿಡಿಯೋ ಗಳನ್ನು ಶೇರ್ ಮಾಡುತ್ತಿರುತ್ತಾರೆ‌. ಅದೇ ರೀತಿ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿರುತ್ತಾರೆ. ಇದೀಗ ಬಿರಿಯಾನಿ ಡೈಲಾಗ್ ವಿಡಿಯೋ ಮಾಡಿದ್ದು, ರಾಗಿಣಿ ಅವರ ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಏನು ಅನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.