ಖ್ಯಾತ ಬಾಲಿವುಡ್ ನಟನೊಂದಿಗೆ ರಾಧಿಕಾ ಕುಮಾರ ಸ್ವಾಮಿ ರೋಮ್ಯಾನ್ಸ್ ; ಯಾರದು ನೋಡಿ

CINEMA/ಸಿನಿಮಾ Entertainment/ಮನರಂಜನೆ

ಕನ್ನಡದ ಖ್ಯಾತ ನಟಿಯಲ್ಲಿ ಒಬ್ಬರಾದ ರಾಧಿಕಾ ಕುಮಾರ ಸ್ವಾಮಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ . ಒಂದು ಕಾಲದಲ್ಲಿ ತುಂಬಾ ಪ್ರಸಿದ್ದಿ ಪಡೆದಿದ್ದ ನಟಿಯಾಗಿದ್ದರು . ಆದರೆ ಸುಮಾರು ಕೆಲವು ದಿನಗಳಿಂದ ಅವರ ಯಾವುದೇ ಚಿತ್ರವೂ ಹೇಳಿ ಕೊಳ್ಳುವ ಮಟ್ಟಿಗೆ ಓಡಿಲ್ಲ . ಈಗ ಅವರು ಹಿಂದಿ ಯಾ ಶ್ರೇಯಸ್ ತಲ್ಪಾಡೆ ಒಂದಿಗೆ ಅಜಾಗ್ರತಾ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ನೆಟ್ಟಿಗರು ಇದಕ್ಕೆ ಬೇರೆದೇ ರೀತಿ ಸಂಬಂಧ ಇವರ ಮದ್ಯೆ ಕಲ್ಪಿಸಿದ್ದಾರೆ .ಅಂತಹ ಸಂಬಂಧ ಯಾವುದೇ ಇಲ್ಲ .

ನಾವಿಬ್ಬರು ಒಟ್ಟಿಗೆ ನಟಿಸುತ್ತಿದ್ದೇವೆ ಅಂತ ರಾಧಿಕಾ ಕುಮಾರ ಸ್ವಾಮಿ ಹೇಳಿದ್ದಾರೆ ,ರಾಧಿಕಾ ರೊಮ್ಯಾನ್ಸ್ ಮಾಡುತ್ತಿರುವುದು ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಜೊತೆ. ಹೌದು ರಾಧಿಕಾ ಮತ್ತು ಶ್ರೇಯಸ್ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸಿನಿಮಾರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳ ರಾಧಿಕಾ ದಿಢೀರ್ ಸಿಹಿ ಸುದ್ದಿ ನೀಡಿದ್ದು ಅಭಿಮಾನಿಗಳಿಗೆ ಸಂತಸ ನೀಡಿದೆ. 
ರಾಧಿಕಾ ಮತ್ತು ಶ್ರೇಯಸ್ ಹೊಸ ಸಿನಿಮಾಗೆ ಅಜಾಗ್ರತ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಈಗಾಗಲೇ ಅದ್ದೂರಿ ಮುಹೂರ್ತ ಕೂಡ ನೆರವೇರಿದ್ದು ಚಿತ್ರೀಕರಣ ಪ್ರಾರಂಭವಾಗಿದೆ. ಮುಹೂರ್ತ ಫೋಟೋಗಳು ವೈರಲ್ ಆಗಿವೆ.

ಅಜಾಗ್ರತ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ರವಿರಾಜ್ ನಿರ್ಮಿಸುತ್ತಿದ್ದಾರೆ. ಎಂ.ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಶೇಷ ಎಂದರೆ ಏಳು ಭಾಷೆಗಳಲ್ಲೂ ಈ ಚಿತ್ರ ಬರಲಿದ್ದು ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯಲಿದೆ ಎಂದು ಸಿನಿಮಾತಂಡ ಬಹಿರಂಗ ಪಡಿಸಿದೆ
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.