radhika-pandit-baby

ಮತ್ತೊಂದು ಮಗುವಿಗೆ ಜನ್ಮ ನೀಡಿದ ನಟಿ ರಾಧಿಕಾ ಪಂಡಿತ್,ಮಗು ಮುಖ ನೋಡಿ ಬೆಚ್ಚಿಬಿದ್ದ ರಾಕಿಂಗ್ ಸ್ಟಾರ್

CINEMA/ಸಿನಿಮಾ Entertainment/ಮನರಂಜನೆ

‘ರಾಕಿಂಗ್‌ ಸ್ಟಾರ್‌’ ಯಶ್‌ ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಹಾಕಿದ್ದ ಒಂದು ಪೋಸ್ಟ್‌ ಹಲವರ ಅನುಮಾನಕ್ಕೆ ಕಾರಣ ಆಗಿತ್ತು. ಮೂರನೇ ಬಾರಿಗೆ ರಾಧಿಕಾ ಪಂಡಿತ್‌ ಪ್ರೆಗ್ನೆಂಟ್‌ ಆಗಿದ್ದಾರಾ ಎಂಬ ಪ್ರಶ್ನೆ ನೆಟ್ಟಿಗರ ಮನದಲ್ಲಿ ಮೂಡಿತ್ತು.

ನಟ ಯಶ್‌ ಈಗ ಫ್ಯಾಮಿಲಿಗಾಗಿ ಹೆಚ್ಚು ಸಮಯ ನೀಡುತ್ತಿದ್ದಾರೆ. ಪತ್ನಿ ರಾಧಿಕಾ ಪಂಡಿತ್‌, ಮಕ್ಕಳು ಮತ್ತು ತಂದೆ-ತಾಯಿ ಜೊತೆ ಕಾಲ ಕಳೆಯುತ್ತ ಹಾಯಾಗಿ ಇದ್ದಾರೆ. ಇತ್ತೀಚೆಗೆ ಅವರು ಲಾಕ್‌ಡೌನ್‌ ಬಗ್ಗೆ ಒಂದು ಪೋಸ್ಟ್‌ ಮಾಡಿದ್ದರು. ಅದು ಸಖತ್‌ ವೈರಲ್‌ ಕೂಡ ಆಗಿತ್ತು. ಜೊತೆಗೆ ಅನೇಕರಿಗೆ ಅನುಮಾನ ಮೂಡಲು ಕಾರಣ ಆಗಿತ್ತು.ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿ ಆಗಿದ್ದ ರಾಧಿಕಾ ಪಂಡಿತ್‌ ಈಗ ಸಂಸಾರದ ಕಡೆಗೆ ಹೆಚ್ಚು ಗಮನ ನೀಡಿದ್ದಾರೆ. ಮದುವೆ ಬಳಿಕ ಅವರು ನಟಿಸಿದ ಕೊನೇ ಸಿನಿಮಾ ‘ಆದಿ ಲಕ್ಷ್ಮೀ ಪುರಾಣ’. ನಂತರ ಅವರು ಬಣ್ಣ ಹಚ್ಚಿಲ್ಲ. ಎರಡು ಮುದ್ದಾದ ಮಕ್ಕಳ ತಾಯಿ ಆಗಿರುವ ಅವರು, ಈಗ ಮಕ್ಕಳ ಆರೈಕೆಯಲ್ಲೇ ತೊಡಗಿಕೊಂಡಿದ್ದಾರೆ. ಮತ್ತೆ ಅವರನ್ನು ತೆರೆಮೇಲೆ ನೋಡಬೇಕು ಎಂದು ಅಭಿಮಾನಿಗಳು ಆಸೆ ಇಟ್ಟಕೊಂಡಿದ್ದಾರೆ.

ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ನಟಿಸುತ್ತೇನೆ ಎಂದು ರಾಧಿಕಾ ಕೂಡ ಭರವಸೆ ನೀಡಿದ್ದಾರೆ. ಅಷ್ಟರಲ್ಲಾಗಲೇ ಅವರು ಮೂರನೇ ಬಾರಿಗೆ ಪ್ರೆಗ್ನೆಂಟ್‌ ಎಂಬ ಅನುಮಾನ ಮೂಡಿದ್ದು ಅಚ್ಚರಿಯೇ ಸರಿ. ಸೋಶಿಯಲ್‌ ಮೀಡಿಯಾದಲ್ಲಿ ಯಶ್‌ ಮಾಡಿದ ಒಂದೇ ಒಂದು ಪೋಸ್ಟ್‌ ಇಷ್ಟಕ್ಕೆಲ್ಲ ಕಾರಣ ಆಗಿದೆ. ಕಡೆಗೂ ಅದಕ್ಕೆ ರಾಧಿಕಾ ಉತ್ತರ ನೀಡಿದ್ದಾರೆ.ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಸರ್ಕಾರ ಮಾಡುವ ಲಾಕ್‌ಡೌನ್‌ ರೂಲ್ಸ್‌ ಕೂಡ ಹೆಂಡತಿಯ ರೂಲ್ಸ್‌ ರೀತಿಯೇ ಇವೆ ಎಂಬರ್ಥದಲ್ಲಿ ಯಶ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ‘ಕರ್ನಾಟಕ ಸರ್ಕಾರ ಹೊಸ ಲಾಕ್‌ಡೌನ್ ರೂಲ್ಸ್‌ ಜಾರಿ ಮಾಡಿದೆ. ಅದೇಕೆ ಎಂಬುದು ಗೊತ್ತಿಲ್ಲ, ಇದಕ್ಕೂ ನನ್ನ ಹೆಂಡತಿ ರೂಲ್ಸ್‌ಗೂ ಏನಾದರೂ ಸಂಬಂಧ ಇರುವಂತೆ ತೋರುತ್ತದೆ. ಪ್ರತಿದಿನ ರಾತ್ರಿ 8 ಗಂಟೆಗೆ ಮನೆಗೆ ಹಿಂತಿರುಗಬೇಕು, ಭಾನುವಾರ ಸಂಪೂರ್ಣ ಲಾಕ್‌ಡೌನ್. ಅದೇನೇ ಇರಲಿ, ಈ ಪತ್ನಿ ಸ್ನೇಹಿ ನಿಯಮಗಳು ನಾವು ಸ್ವಾಸ್ಥ್ಯ ಹಾಗೂ ಸುರಕ್ಷತೆಯಿಂದ ಇರಲು ಸಹಾಯಕವಾಗಲಿವೆ’ ಎಂದು ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ನಲ್ಲಿ ಯಶ್‌ ಬರೆದುಕೊಂಡಿದ್ದರು.
ಪತ್ನಿ ರಾಧಿಕಾ ಪಂಡಿತ್‌ ಜೊತೆ ಇರುವ ಫೋಟೋವನ್ನು ಈ ಪೋಸ್ಟ್‌ನೊಂದಿಗೆ ಯಶ್‌ ಅಪ್‌ಲೋಡ್‌ ಮಾಡಿದ್ದರು. ಅಚ್ಚರಿ ಅಂದರೆ, ಆ ಫೋಟೋ ನೋಡುತ್ತಿದ್ದಂತೆಯೇ ಅನೇಕರು ಅನುಮಾನ ವ್ಯಕ್ತಪಡಿಸಲು ಆರಂಭಿಸಿದರು. ರಾಧಿಕಾ ಪಂಡಿತ್‌ ಮೂರನೇ ಬಾರಿಗೆ ಗರ್ಭಿಣಿ ಆಗಿರಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತು. ಅದನ್ನು ಕಾಮೆಂಟ್‌ಗಳ ಮೂಲಕ ಅನೇಕರು ನೇರವಾಗಿ ಕೇಳಿಯೇ ಬಿಟ್ಟರು. ಒಂದಲ್ಲ ಎರಡಲ್ಲ ಹಲವಾರು ಕಾಮೆಂಟ್‌ಗಳು ಈ ಕುರಿತಾಗಿಯೇ ಬಂದಿವೆ. ತಕ್ಷಣಕ್ಕೆ ಯಶ್‌-ರಾಧಿಕಾ ದಂಪತಿ ಆ ಯಾವ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ. ಹಾಗಾಗಿ ‘ಮೌನಂ ಸಮ್ಮತಿ ಲಕ್ಷಣಂ’ ಎಂದು ಲೆಕ್ಕಾಚಾರ ಹಾಕಲು ಶುರು ಮಾಡಿದರು ನೆಟ್ಟಿಗರು.

ಅಷ್ಟಕ್ಕೂ ನೆಟ್ಟಿಗರಿಗೆ ಇಂಥ ಅನುಮಾನ ಯಾಕೆ ಮೂಡಿತು? ಅದಕ್ಕೆಲ್ಲ ಕಾರಣ ಆಗಿದ್ದು ಯಶ್‌ ಪೋಸ್‌ ನೀಡಿದ ಪರಿ. ರಾಧಿಕಾ ಪಕ್ಕದಲ್ಲಿ ಕುಳಿತು, ಹಣೆಯ ಮೇಲೆ ಮೂರು ಬೆರಳುಗಳನ್ನು ಇಟ್ಟುಕೊಂಡಿದ್ದ ಯಶ್‌ ಅವರನ್ನು ನೋಡಿದರೆ ‘ಮೂರು’ ಎಂಬ ವಿಚಾರವನ್ನು ಒತ್ತಿ ಹೇಳುವಂತಿತ್ತು. ಅದನ್ನು ಕಂಡ ಅನೇಕರಿಗೆ ಇದು ಅವರ ಮೂರನೇ ಮಗುವಿನ ಆಗಮನದ ಸುಳಿವು ಇರಬಹುದು ಎಂದು ಅನುಮಾನ ಮೂಡಿತ್ತು. ಈ ಹಿಂದೆ ಕೂಡ ಯಶ್‌ ಅಚ್ಚರಿ ನೀಡಿದ್ದರು. ಮೊದಲು ಪುತ್ರಿ ಆಯ್ರಾ ಜನಿಸಿದ ಕೆಲವೇ ತಿಂಗಳುಗಳ ನಂತರ ತಾವು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂಬ ಸಿಹಿ ಸುದ್ದಿಯನ್ನು ರಾಧಿಕಾ-ಯಶ್‌ ದಂಪತಿ ನೀಡಿದ್ದರು.

ಹಣೆ ಮೇಲೆ ಯಶ್‌ ಮೂರು ಬೆರಳುಗಳನ್ನು ಇಟ್ಟುಕೊಂಡಿದ್ದನ್ನು ನೋಡಿ ಅಭಿಮಾನಿಗಳು ಏನೇನೋ ಕಲ್ಪನೆ ಮಾಡಿಕೊಂಡುಬಿಟ್ಟರು. ಮನದಲ್ಲಿ ಮೂಡಿದ ಅನುಮಾನವನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ವ್ಯಕ್ತಪಡಿಸಿದರು. ಅದು ರಾಧಿಕಾ ಪಂಡಿತ್‌ ಗಮನಕ್ಕೂ ಬಂದಿದೆ. ಯಶ್‌ ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ರಾಧಿಕಾ ಪಂಡಿತ್‌, ‘ನೋ… ನಾನು ಪ್ರೆಗ್ನೆಂಟ್‌ ಅಲ್ಲ’ ಎಂದು ಹೇಳಿದ್ದಾರೆ. ‘ಒಬ್ಬ ಜವಾಬ್ದಾರಿಯುತ ಪ್ರಜೆ ಆಗುವ ಮೂಲಕವಾದರೂ ಈಗ ನೀವು ನನ್ನ ರೂಲ್ಸ್‌ ಫಾಲೋ ಮಾಡುವಂತಾಗಿದೆ. ಅಂದಹಾಗೆ, ಇದನ್ನು ಒಂದು ಸಿಗ್ನಲ್‌ ಎಂದುಕೊಂಡಿರುವ ಎಲ್ಲರಿಗೂ ನಾನು ಹೇಳುವುದೇನೆಂದರೆ, ನೋ… ನಾನು ಪ್ರೆಗ್ನೆಂಟ್ ಅಲ್ಲ’ ಎಂದು ರಾಧಿಕಾ ಪಂಡಿತ್‌ ಕಾಮೆಂಟ್‌ ಮಾಡಿದ್ದಾರೆ. ಅಲ್ಲಿಗೆ ಎಲ್ಲ ಅನುಮಾನಗಳಿಗೂ ತೆರೆ ಬಿದ್ದಂತಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...