radhika-kumaraswamy

Radhika Kumaraswamy : ಕುಮಾರಸ್ವಾಮಿಯವರ ಆಸೆಯಂತೆ ಲಂಗ ದಾವಣಿ ತೊಟ್ಟು ವಿಡಿಯೋ ಮಾಡಿದ ಎವರ್ ಗ್ರೀನ್ ನಟಿ ರಾಧಿಕಾ ಕುಮಾರಸ್ವಾಮಿ,ಫಿದಾ ಆದ ಫ್ಯಾನ್ಸ್!!

CINEMA/ಸಿನಿಮಾ Entertainment/ಮನರಂಜನೆ

Radhika Kumaraswamy : ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswami) ಯವರು ಎವರ್ ಗ್ರೀನ್ ನಟಿಯರಲ್ಲಿ ಒಬ್ಬರು. ನಟಿ ಕಮ್ ನಿರ್ಮಾಪಕಿಯಾಗಿರುವ ರಾಧಿಕಾರವರು, ಅದ್ಭುತ ಡಾನ್ಸರ್ (Dancer) ಕೂಡ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ಎರಡು ಇನ್‌ಸ್ಟಾಗ್ರಾಂ ಖಾತೆಗಳಿದೆ. ಅದಲ್ಲದೆ, ನಟಿಯನ್ನು ಸಾಕಷ್ಟು ಜನ ಫಾಲೋ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಾಧಿಕಾ ಕುಮಾರಸ್ವಾಮಿ ಫೋಟೊಗಳು, ವಿಡಿಯೋಗಳು ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಮತ್ತೆ ಸುದ್ದಿಯಾಗಿದ್ದಾರೆ.

ಚಂದನವನದ ನಟಿ ರಾಧಿಕಾ ಕುಮಾರಸ್ವಾಮಿಯವರು ಅಜಾಗ್ರತ (Ajagrata) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಏಳು ಭಾಷೆಯಲ್ಲಿ ಸಿದ್ದವಾಗುತ್ತಿರುವ ಸಿನಿಮಾದಲ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಕೂಡ ನಟಿಯೂ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಂಪು ಹಾಗೂ ಹಳದಿ ಬಣ್ಣದ ಲಂಗ ದಾವಣಿ ತೊಟ್ಟು ಮಾಡಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಕುಮಾರಸ್ವಾಮಿಯವರು ಉಡುಗೆ ತಕ್ಕಂತೆ ಒಡವೆಗಳನ್ನು ಹಾಕಿದ್ದಾರೆ. ಈ ವಿಡಿಯೋಗೆ ಸಿಂಗಾರ ಸಿರಿಯೇ ಹಾಡನ್ನು ಬ್ಯಾಕ್ ಗ್ರೌಂಡ್ ಆಗಿ ಹಾಕಲಾಗಿದೆ ನಟಿಯ ವಿಡಿಯೋಗೆ ಲೈಕ್ಸ್ ಹಾಗೂ ಮೆಚ್ಚುಗೆ ವ್ಯಕ್ತವಾಗಿವೆ.

ರಾಧಿಕಾ ಕುಮಾರಸ್ವಾಮಿಯವರು2008ರಲ್ಲಿ ‘ನವಶಕ್ತಿ ವೈಭವ’ (Navashakthi Vaibhava) ನಟಿಸಿದ್ದರು. ಆದರೆ ವೈಯುಕ್ತಿಕ ಜೀವನದ ಕಾರಣ ನಟನೆಯಿಂದ ಬ್ರೇಕ್ ತಗೊಂಡಿದ್ದರು. 2012ರಲ್ಲಿ ‘ಲಕ್ಕಿ’ (Lucky) ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿ ಬಣ್ಣದ ಲೋಕಕ್ಕೆ ಮತ್ತೆ ಬಂದ ಚೆಲುವೆ ಮರುವರ್ಷವೇ ಸ್ವೀಟಿ (Sweety) ಚಿತ್ರದಲ್ಲಿ ನಟಿಸಿ ಗೆದ್ದರು. ನಂತರ ಅವತಾರಂ (Avatharam) , ರುದ್ರ ತಾಂಡವ (Rudra Tandava), ದಮಯಂತಿ (Damayanthi) , ಕಾಂಟ್ರ್ಯಾಕ್ಟ್ (Contract) ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

2017ರಲ್ಲಿ ಕಿರುತೆರೆಯ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ರವಿಚಂದ್ರನ್ (Ravichandran) ಅವರ ರವಿ ಬೋಪಣ್ಣ (RaviBopanna) ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ. ಇದೀಗ ಅಜಾಗತ್ರ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈ ಸಿನಿಮಾದಲ್ಲಿ ನಟಿಯಾಗಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಳ್ಳುತ್ತಿದ್ದು, ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ (Shreyas Talpade) ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಏಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇತ್ತ ರಾಧಿಕಾ ಕುಮಾರಸ್ವಾಮಿಯ ಶಮಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾದ ʼಭೈರಾದೇವಿʼ (Bhairaadevi) ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

 

View this post on Instagram

 

A post shared by Radhika kumaraswamy official (@radhika_kumarswamy)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.