ಸ್ಯಾಂಡಲ್ ವುಡ್ ನಟಿ ರಾಧಿಕಾ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಎರಡನೇ ಪತ್ನಿ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ಕೊರೊನಾ ಸಂಕಷ್ಟದಲ್ಲಿ ನಟಿ ರಾಧಿಕಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಬಡವರಿಗೆ ಸಹಾಯ ಮಾಡಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಧಿಕಾ ಕುಮಾರಸ್ವಾಮಿ ಸುಮಾರು 1200 ಮನೆಗಳಿಗೆ ದಿನಸಿ ಹಂಚಿದ್ದರು. ಬೆಂಗಳೂರು ನಗರದ ಕೆಂಗೇರಿ, ಮಾಗಡಿ ರೋಡ್, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ನೀಡಿದ್ದರು
ಇದೀಗ ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ ಒಳ್ಳೆಯ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಸದ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಕಲರ್ಸ್ ಕನ್ನಡ ಮನರಂಜನಾ ಖಾಸಗಿ ವಾಹಿನಿಯ ಮಜಾ ಟಾಕೀಸ್ ಶೋಗೆ ಬಂದಿದ್ದ ರಾಧಿಕಾ ಕುಮಾರಸ್ವಾಮಿ ಅವರು ಕೆಂಗುಲಾಬಿ ಸೀರೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಗುಲಾಬಿ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸೀರೆಯಲ್ಲಿ ಡ್ಯಾನ್ಸ್ ಮಾಡಿದ್ದು, ಪಡ್ಡೆ ಹುಡುಗರನ್ನು ನಿದ್ದೆಗೆಡಿಸುವಂತಿದೆ. ಹುಡುಗರು ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. ಇನ್ನು ರಾಧಿಕಾ ಕುಮಾರಸ್ವಾಮಿಗೆ 35 ವರ್ಷ ವಯಸ್ಸು ಎಂದರೆ ಯಾರೂ ನಂಬುವುದಿಲ್ಲ. ಅಲ್ಲದೇ ಅವರಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ರಾಧಿಕಾ ಅವರಿನ್ನು ಸ್ವೀಟ್ ಸಿಕ್ಸ್ ಟೀನ್ ಎಂದೇ ಹೇಳುತ್ತಾರೆ.