ಕನ್ನಡ ಚಿತ್ರರಂಗ ಕಂಡ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರು ರಾಧಿಕಾ ಕುಮಾರಸ್ವಾಮಿ, ಇವರಿಗೆ ಈಗ ವಯಸ್ಸು 35 ಆಗಿದ್ದರು, ಈಗಲೂ ಮದುವೆಯಾಗದ ಚಿಕ್ಕ ಹುಡುಗಿಯ ಹಾಗೆ ಕಾಣಿಸುತ್ತಾರೆ ರಾಧಿಕಾ ಕುಮಾರಸ್ವಾಮಿ. 2002ರಲ್ಲಿ ತೆರೆಕಂಡ ನಿನಗಾಗಿ ಸಿನಿಮಾ ಮೂಲಕ ರಾಧಿಕಾ ಕುಮಾರಸ್ವಾಮಿ ಮತ್ತು ನಟ ವಿಜಯ್ ರಾಘವೇಂದ್ರ ಇಬ್ಬರು ಸಹ ಚಂದನವನಕ್ಕೆ ನಾಯಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ಸೂಪರ್ ಹಿಟ್ ಆದ ನಂತರ ರಾಧಿಕಾ ಅವರಿಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗಲು ಶುರುವಾಯಿತು.

ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರು ರಾಧಿಕಾ ಕುಮಾರಸ್ವಾಮಿ, ಕನ್ನಡ ಮತ್ತು ತಮಿಳು ಎರಡು ಚಿತ್ರರಂಗದಲ್ಲಿ ಬ್ಯುಸಿಯಾದರು. ಕೆಲವು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ ಬಳಿಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮದುವೆಯಾದರು ರಾಧಿಕಾ. ಈ ದಂಪತಿಗೆ ಶಮಿಕಾ ಹೆಸರಿನ ಒಂದು ಮುದ್ದಾದ ಮಗು ಇದೆ. ಸಧ್ಯಕ್ಕೆ ರಾಧಿಕಾ ಅವರು ನಟನೆಯಿಂದ ಸ್ವಲ್ಪ ದೂರವೆ ಉಳಿದಿದ್ದಾರೆ. ಇನ್ನುಮುಂದೆ ಆದರೂ ಇವರು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ ಎನ್ನುವುದೇ ಅಭಿಮಾನಿಗಳ ಆಸೆ.

ಸಿನಿಮಾ ಇಂದ ಸ್ವಲ್ಪ ದೂರವೇ ಉಳಿದಿರುವ ರಾಧಿಕಾ ಕುಮಾರಸ್ವಾಮಿ ಕಿರುತೆರೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದರು ರಾಧಿಕಾ. ಇವರಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಆಗಾಗ ಸ್ಟೇಜ್ ಶೋ ಗಳನ್ನು ಸಹ ಕೊಡುತ್ತಾರೆ ರಾಧಿಕಾ. ಮೊನ್ನೆಯಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ವರ್ಷದ ವಿಶೇಷ ಕಾರ್ಯಕ್ರಮ ರಂಗು ರಂಗೋಲಿ ನಡೆಯಿತು. ಬಹಳ ಭರ್ಜರಿಯಾಗಿ ನಡೆಯಿತು ಈ ಶೋ..

ಈ ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್ ತಾರೆಯರು ಬಂದು ಪರ್ಫಾರ್ಮ್ ಮಾಡಿದರು. ಸಖತ್ ಮನರಂಜನೆ ನೀಡಿದ ಈ ಕಾರ್ಯಕ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಸಹ ಭರ್ಜರಿಯಾದ ಪರ್ಫಾರ್ಮೆನ್ಸ್ ನೀಡುವ ಮೂಲಕ ಎಲ್ಲರ ಹಾರ್ಟ್ ಬೀಟ್ಸ್ ಹೆಚ್ಚಿಸಿದ್ದರು. ಈ 10 ನಿಮಿಷದ ಡ್ಯಾನ್ಸ್ ಪರ್ಫಾರ್ಮೆನ್ಸ್ ಗೆ ನಟಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 4ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.