radhika-dance

ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದ ರಾಧಿಕಾ,ವಿಡಿಯೋ ನೋಡಿ ಕಣ್ಣೀರಿಟ್ಟ,ಕುಮಾರಣ್ಣ.

Entertainment/ಮನರಂಜನೆ

ಸಿನಿಮಾ ರಂಗದಿಂದ ಯಾಕೋ ಕೊಂಚ ದೂರವೇ ಉಳಿದಿರುವ ನಟಿ ರಾಧಿಕಾ ಕುಮಾರಸ್ವಾಮಿ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಇರುತ್ತಾರೆ. ಅದರಲ್ಲೂ ಡಾನ್ಸ್, ವರ್ಕೌಟ್ ಅನ್ನು ಯಾವತ್ತೂ ಅವರು ಮರೆಯುವುದಿಲ್ಲ. ಅದರಲ್ಲೂ ತಮ್ಮಿಷ್ಟದ ಹಾಡುಗಳಿಗೆ ಡಾನ್ಸ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ.

ಇದೀಗ ರಾಧಿಕಾ ಅವರು ಚಿತ್ರರಂಗದಿಂದ ಸಂಪೂರ್ಣ ದೂರಸರಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ.  ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ಡೇಟ್‌ಗಳನ್ನು ಕೊಡುತ್ತಾ ಇರುತ್ತಾರೆ. ಜೊತೆಗೆ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಇದೀಗ ರಾಧಿಕಾ ಅವರು ಡ್ಯಾನ್ಸ್ ಮಾಡುವಾಗ ಆಯ ತಪ್ಪಿ ಬಿದ್ದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

20 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಾಧಿಕಾ ಕುಮಾರಸ್ವಾಮಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. 2008ರಲ್ಲಿ ‘ನವಶಕ್ತಿ ವೈಭವ’ ಚಿತ್ರದಲ್ಲಿ ನಟಿಸಿದ್ದ ರಾಧಿಕಾ, ನಂತರ ಮದುವೆ, ಮಗು ಅಂತ ಚಿತ್ರರಂಗದಿಂದ ಬ್ರೇಕ್ ತಗೊಂಡಿದ್ದರು. 2012ರಲ್ಲಿ ‘ಲಕ್ಕಿ’ ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿ ಬಣ್ಣದ ಲೋಕಕ್ಕೆ ಮತ್ತೆ ಬಂದ ಚೆಲುವೆ ಮರುವರ್ಷವೇ ‘ಸ್ವೀಟಿ’ ಚಿತ್ರದಲ್ಲಿ ನಟಿಸಿ ಗೆದ್ದರು.

ನಂತರ ‘ಅವತಾರಂ’, ‘ರುದ್ರ ತಾಂಡವ’, ‘ದಮಯಂತಿ’, ‘ಕಾಂಟ್ರ್ಯಾಕ್ಟ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ರಾಧಿಕಾ ಈಗ ಸೈಲೆಂಟ್‌ ಆಗಿಬಿಟ್ಟಿದ್ದಾರೆ. 2017ರಲ್ಲಿ ಕಿರುತೆರೆಯ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದರು. ಕ್ರೇಜಿ ಡ್ಯಾನ್ಸ್‌ನಿಂದ ವೀಕ್ಷಕರನ್ನು ರಂಜಿಸಿದ್ದರು.

ಅಂದಹಾಗೆ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ 2 ಇನ್‌ಸ್ಟಾಗ್ರಾಂ ಖಾತೆಗಳಿದ್ದು, ಸಾಕಷ್ಟು ಜನ ಫಾಲೋ ಮಾಡುತ್ತಿದ್ದಾರೆ. ಈ ಖಾತೆಗಳಲ್ಲಿ ಸ್ವೀಟಿ ಫೋಟೊಗಳು, ವಿಡಿಯೋಗಳು ಹರಿದಾಡುತ್ತಿರುತ್ತದೆ. ಇದು ಆಕೆಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆ ಹೌದೋ ಅಲ್ಲವೋ ಗೊತ್ತಿಲ್ಲ. ಸದ್ಯ ರಾಧಿಕಾ ಡ್ಯಾನ್ಸ್ ಮಾಡಿರೋ ಹೊಸದೊಂದು ವಿಡಿಯೋ ಸಖತ್ ಸೌಂಡ್ ಮಾಡ್ತಿದೆ.

ಹೌದು ನಟಿ ರಾಧಿಕಾ ಕುಮಾರಸ್ವಾಮಿ ಅವರು ಡಾನ್ಸ್ ಮಾಡುವ ಸಮಯದಲ್ಲಿ ಮಿಸ್ ಆಗಿ ಬಿದ್ದಿದ್ದು ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಡಾನ್ಸ್ ಬಹಳ ಇಷ್ಟ ಮತ್ತು ಅವರು ಸದಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ಡಾನ್ಸ್ ಮಾಡಿದ ಹಲವು ವಿಡಿಯೋಗಳನ್ನ ಹಂಚಿಕೊಳ್ಳುತ್ತಾರೆ.

ಅದೇ ರೀತಿಯಲ್ಲಿ ಡಾನ್ಸ್ ಮಾಡುವ ಬಿದ್ದ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ರಾಧಿಕಾ ಕುಮಾರಸ್ವಾಮಿ ಅವರು ಸದ್ಯ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಅನೇಕ ವರ್ಷಗಳಿಂದ ಅವರ ಯಾವುದೇ ಸಿನಿಮಾಗಳಲ್ಲಿ ಅವರು ನಟಿಸಿಲ್ಲ.

ಆದರೂ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಅಭಿನಯ ಮಾತ್ರ ಅಲ್ಲ, ಅವರಿಗೆ ಡಾನ್ಸ್‌ನಲ್ಲೂ ಅಷ್ಟೇ ಹೆಚ್ಚಿನ ಆಸಕ್ತಿ ಇದೆ. ಇದೀಗ ಅರೆಯದ ಹುಡುಗಿರು ಕೂಡ ನಾಚುವಂತೆ ಡಾನ್ಸ್  ಮಾಡುತ್ತಾರೆ. ಅದರ ವಿಡಿಯೋಗಳನ್ನು ಇನ್ಸ್ಟಾಗ್ರಾಂ ಗಳಲ್ಲಿ ಹಂಚಿಕೊಳ್ಳುತ್ತಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.