ಎದೆ ಹಾಲನ್ನು ದಾನ ಮಾಡಿ ರಾಧಿಕಾ ಪಂಡಿತ್ ಮಹತ್ವದ ನಿರ್ಧಾರ! ವಾವ್ ಗ್ರೇಟ್ ಕಣ್ರೀ ನೋಡಿ ವಿಡಿಯೋ!!

CINEMA/ಸಿನಿಮಾ Entertainment/ಮನರಂಜನೆ

ಈ‌ ಜಗತ್ತಿನಲ್ಲಿ ಶ್ರೇಷ್ಠವಾದ ಜನ್ಮ‌ ಅಂದರೆ ಅದು ಹೆಣ್ಣಿನ ಜನ್ಮ. ಹೆಣ್ಣಿನ ಬಾಳು ಸಾರ್ಥಕತೆ ಪಡೆಯುವುದೇ ತಾಯಿಯಾದ ಬಳಿಕ. ತನ್ನ ಗರ್ಭ ದಲ್ಲಿ ಮಗುವನ್ನು ಹೊತ್ತು ನಂತರ ಹೆರುವ ಹೆಣ್ಣು ತನ್ನ ಜೀವನದಲ್ಲಿ ಕಾಣುವ ಮಹತ್ವದ ಘಟ್ಟ. ಇನ್ನು ತನ್ನ ಗರ್ಭದಿಂದ ಬಂದ ಪುಟ್ಟ ಕಂದನಿಗೆ ತನ್ನ ಎದೆಹಾಲು ಅಮೃತದಂತೆ. ಎದೆಹಾಲಿನಲ್ಲಿ ಅನೇಕ ಪೋಷಕಾಂಶಗಳು ಇದ್ದು ಅದು ಮಗುವಿಗೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ತಾಯ ಎದೆಹಾಲಿನಲ್ಲೊ ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಗಳಂತಹ ಮಹಾಪೂರವೇ ಇದೆ. ಅದು ಎಳೆ ಮಗುವಿನ ಮಾನಸಿಕ, ಹಾಗೂ ದೈಹಿಕ ಬೆಳವಣಿಗೆಗೆ ಅದೇ ರೀತಿ ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಬಹಳ ಸಹಕಾರಿ ಆಗಿದೆ.

ಮಗು ಹುಟ್ಟಿದ ಕೂಡಲೇ ತಾಯಿ ಎದೆ ಹಾಲು ಉಣಿಸಿದರೆ ಅದಕ್ಕಿಂತ ದೊಡ್ಡ ಅಮೃತ ಬೇರೆ ಇಲ್ಲ. ಅದಕ್ಕಾಗಿ ತಾಯಿಯಲ್ಲಿ ಎದೆ ಹಾಲು ಉತ್ಪತ್ತಿಯಾಗಲೇ ಬೇಕು.‌‌ಇಲ್ಲವಾದರೆ ಮಗು ನಾನಾ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಆದರೆ ಹಲವಾರು ತಾಯಂದಿರ ಪರಿಸ್ಥಿತಿ ಹಾಗಿರುವುದಿಲ್ಲ. ಮಗು ಹುಟ್ಟಿ ಅದೆಷ್ಟೇ ದಿನಗಳಾದರೂ ಮಗುವಿಗೆ ಬೇಕಾದಷ್ಟು ಹಾಲು ಉತ್ಪತ್ತಿಯಾಗುವುದಿಲ್ಲ. ಅದಕ್ಕಾಗಿ ಮಗುವಿಗೆ ಲಾಕ್ಟೋಜನ್ ಪೌಡರ್ ಅನ್ನು ಹಾಲಿನ ರೂಪದಲ್ಲಿ ಕೊಡಲಾಗುತ್ತದೆ. ಆದರೆ ಇನ್ನು ಕೆಲ ತಾಯಂದಿರಿಗೆ ತನ್ನ‌ ಮಗುವಿಗೆ ಬೇಕಾದಷ್ಟು ಹಾಲು ಕೊಟ್ಟ ಮೇಲೂ ಹೆಚ್ಚಿನ ಹಾಲು ಉತ್ಪತ್ತಿಯಾಗಿ ಹಾಲು ತೆಗೆದು ಚೆಲ್ಲುತ್ತಾರೆ.

ಇಂತಹ ತಾಯಂದಿರಿಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮನವಿಯೊಂದನ್ನು ಮಾಡಿದ್ದಾರೆ. ಪ್ರತಿಯೊಂದು ಹಳ್ಳಿಯಲ್ಲಿಯೂ ಎದೆ ಹಾಲಿನ ಬ್ಯಾಂಕ್ ತೆರೆಯುವುದರ ಬಗ್ಗೆ ಹೇಳಿದ ರಾಧಿಕಾ ಪಂಡಿತ್ ಒಂದು ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ ಅನ್ನುವುದನ್ನು ಹೇಳುವುದರ ಜೊತೆ, ಎದೆ ಹಾಲು ಬ್ಯಾಂಕ್ ನಲ್ಲಿ ಮಗುವಿಗೆ ಹಾಲು ಕುಡಿಸಲು ಎದೆ ಹಾಲು ಕೊರತೆ ಇರುವವರು ಹಾಲು ಪಡೆದು ಮಗುವಿಗೆ ಕೊಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಅದೇ ರೀತಿ ಹೆಚ್ಚಿನ ಹಾಲು ಉತ್ಪತ್ಯಿಯಾಗುವವರು ಎದೆ ಹಾಲನ್ನು ದಾನ ಮಾಡುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಎದೆ ಹಾಲಿಲ್ಲದೆ ಅಪೌಷ್ಟಿಕತೆ ಕೊರತೆಯಿಂದ ಬಳಲುವ ಮಕ್ಕಳಿಗೆ ಹಾಲು ದಾನ ಮಾಡುವಂತೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಇನ್ನು ಮುಂದೆ ಪ್ರತಿಯೊಂದು ಹಳ್ಳಿ ಗಳಲ್ಲೂ ಎದೆ ಹಾಲಿನ ಬ್ಯಾಂಕ್ ಬರುತ್ತಿರುವುದು ತಾಯಂದಿರಿಗೆ ಸಿಹಿ ಸುದ್ದಿ ಆಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...