Radhika

ಮತ್ತೊಂದು ಸಿಹಿಸುದ್ದಿ ಕೊಟ್ಟ ರಾಧಿಕಾ ಕುಮಾರಸ್ವಾಮಿ,ಮೊದಲ ಪತ್ನಿ ಶಾಕ್

CINEMA/ಸಿನಿಮಾ Entertainment/ಮನರಂಜನೆ

ತಮಗೆಲ್ಲರಿಗೂ ನೆನಪಿದೆ ಅಲ್ಲವೇ? 2002 ರಲ್ಲಿ ತೆರೆಕಂಡ ನಿನಗಾಗಿ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ನಟಿ ರಾಧಿಕಾ. ಇನ್ನು ರಾಧಿಕಾ ಮೂಲತಃ ಕಡಲ ತೀರ ಮಂಗಳೂರು ಜಿಲ್ಲೆಯವರಾಗಿದ್ದುಲ ನವೆಂಬರ್ 12 1986 ರಲ್ಲಿ ಜನಿಸುತ್ತಾರೆ. ಓದಿನಲ್ಲಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ರಾಧಿಕಾ ಮುಂದೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು ಎನ್ನುವ ಆಸೆ ಹೊಂದಿರುತ್ತಾರೆ. ಆದರೆ ಮನೆಯವರ ಒತ್ತಾಯದ ಮೇರಿಗೆ 14 ವರ್ಷದಲ್ಲಿದ್ದಾಗಲೇ ರತನ್ ಕುಮಾರ್ ಎನ್ನುವರ ಜೊತೆ ಬಾಲ್ಯ ವಿವಾಹವಾಗಿದ್ದು ಮದುವೆಯಾದ ಎರಡು ವರ್ಷಕ್ಕೆ ಅವರ ಪತಿ ಕೊನೆಯುಸಿರೆಳೆಯುತ್ತಾರೆ.

ಸದ್ಯ ಇದೀಗ 35ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಯ ಯಾವ ರೀತಿ ಆಚರಿಸಿಕೊಂಡಿದ್ದಾರೆ ಗೊತ್ತಾ? ಹುಟ್ಟು ಹಬ್ಬವನ್ನು ಆಚರಿಸಿಕೊಂಡು ರಾಧಿಕಾ ಕುಮಾರಸ್ವಾಮಿ ಅವರು ಅಭಿಮಾನಿಗಳಿಗೆ ಕೊಟ್ಟ ಗುಡ್ ನ್ಯೂಸ್ ಏನು ಗೊತ್ತಾ? ಇದರ ಜೊತೆ ಕುಮಾರಸ್ವಾಮಿ ಯವರು ರಾಧಿಕಾಗೆ ಕೊಟ್ಟ ಸ್ಪೆಷಲ್ ಉಡುಗೊರೆ ಏನು? ಮುಂದೇ ಓದಿ. ಹೌದು ‍ಆಟವಾಡ ಬೇಕಿದ್ದ ವಯಸ್ಸಿನಲ್ಲಿ ಮದವೆಯಾದ ರಾಧಿಕ ಸುಖವಾಗಿರ ಬೇಕದ ಸಮಯದಲ್ಲಿ ಗಂಡನನ್ನು ಕಳೆದುಕೊಂಡರು. ಆದರೆ ಅದೇ ವರುಷ ಅವರ ಅದೃಷ್ಟ ಕೂಡ ಬದಲಾಗಿದ್ದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದ ಅವರಿಗೆ ನೀಲ ಮೇಘ ಶ್ಯಾಮ ಎಂಬ ಕನ್ನಡ ಸಿನಿಮಾದಲ್ಲಿ ಅಭನಯಿಸುವ ಅವಕಾಶ ಸಿಗುತ್ತದೆ.

ಇನ್ನು ಮೊದಲ ಸಿನಿಮಾದಲ್ಲಿ ಉತ್ತಮವಾಗಿ ಅಭಿನಯಿಸಿದ್ದ ರಾಧಿಕಾ ಅವರಿಗೆ ನಂತರ ಹೆಚ್ಚಿನ ಅವಕಾಶಗಳು ಸಿಗಲು ಆರಂಭವಾಗಿದ್ದು ನಂತರ ವಿಜಯ್ ರಾಘವೇಂದ್ರ ಜೊತೆಗಿನ ನಿನಗಾಗಿ ಭರ್ಜರಿ ಹಿಟ್ ಆಗುತ್ತದೆ.ಬಳಿಕ ಹಲವಾರು ಸಿನಿಮಾಗಳಲ್ಲಿ ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದ ರಾಧಿಕಾ ಅದರಲ್ಲೂ ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರ ತಂಗಿಯಾಗಿ ತವರಿಗೆ ಬಾ ತಂಗಿ ಅಣ್ಣ ತಂಗಿ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯೆಶಸ್ಸು ಕಂಡಿತು. ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಸಹ ನಟಿಸಿ ಯಶಸ್ಸು ಪಡೆದರು ರಾಧಿಕಾ ರವರು.

ಇನ್ನು 2008 ರಿಂದ 2012 ರ ವರೆಗು ಕೂಡ ಚಿತ್ರರಂಗದಿಂದ ದೂರ ಉಳಿದಿದ್ದ ರಾಧಿಕ ನಂತರ 2012 ರಲ್ಲಿ ಲಕ್ಕಿ ಎಂಬ ಸೂಪರ್ ಹಿಟ್ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಹಿಂತಿರುಗುತ್ತಾರೆ. ಈ ಮಧ್ಯೆ 2010 ರಲ್ಲಿ ರಾಜಕಾರಣಿ ಕುಮಾರಸ್ವಾಮಿ ಅವರೊಡನೆ ಮದುವೆ ಆಗಿರುವುದಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು 2006 ರಲ್ಲಿ ಮದುವೆಯಾಗುವುದಾಗಿ ಹೇಳಿದ್ದರು ಸದ್ಯ ಇದೀಗ ರಾಧಿಕಾ ಅವರಿಗೆ ಮುದ್ದಾದ ಹೆಣ್ಣು ಮಗು ಇದ್ದು ಆ ಮಗುವಿನ ಹೆಸರು ಶಮಿಕಾ. ಹೌದು ಮಗು ಆದ ಸಮಯದಿಂದ ಕೂಡ ನಟನೆಯಿಂದ ಬ್ರೇಕ್ ತೆಗೆದುಕೊಂಡ ರಾಧಿಕಾ ನಿರ್ಮಾಪಕಿಯಾಗಿ ರೀ ಎಂಟ್ರಿ ತೆಗೆದುಕೊಂಡಿದ್ದು ಯಶ್ ಹಾಗೂ ರಮ್ಯಾ ಅವರನ್ನಾಕಿಕೊಂಡು ಲಕ್ಕಿ ಸಿನಿಮಾ ಪ್ರೊಡ್ಯುಸ್ ಮಾಡಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮದುವೆ ಆಗಿರುವ ವಿಚಾರ ತಿಳಿಸಿದ್ದು ಸ್ವಲ್ಪ ಗ್ಯಾಪ್ ನ ನಂತರ ಸ್ವೀಟಿ ಎಂಬ ಹೆಸರಿನ ಸಿನಿಮಾ ಮೂಲಕ ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡುತ್ತಾರೆ. ಹೌದು ಸ್ವೀಟಿ ನಂತರ ರುದ್ರತಾಂಡವ ಹಾಗೂ ದಮಯಂತಿ ಸಿನಿಮಾದಲ್ಲೂ ಕೂಡ ಅಭಿನಯಿಸಿದರು.ಸಧ್ಯಕ್ಕೆ ಹೊಸ ಸಿನಿಮಾ ಕೆಲಸಗಳಲ್ಲಿ ನಿರತರಾಗಿರುವ ರಾಧಿಕಾ ಅವರು ಇತ್ತೀಚೆಗೆ ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ಅಚರಿಸಿಕೊಂಡಿದ್ದು ಇನ್ನೂ ನಟಿ ರಾಧಿಕಾ ಕುಮಾರಸ್ವಾಮಿ ಅವರು ಕೊಟ್ಟ ಗುಡ್ ನ್ಯೂಸ್ ಏನಪ್ಪಾ ಅಂದರೆ ಅತೀ ಶೀಘ್ರದಲ್ಲೇ ಕನ್ನಡದ ದೊಡ್ಡ ನಟನ ಜೊತೆ ನಾಯಕಿ ಯಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಹೌದು ಆದರೆ ಆ ಸಿನಿಮಾ ಯಾವುದು ಆ ನಟ ಯಾರು ಎಂದು ಕಾದುನೋಡಬೇಕಿದೆ.

ಇನ್ನು ಕೆಂಪು ಬಣ್ಣದ ಗೌನ್ ಧರಿಸಿ ಕುಟುಂಬ ಮತ್ತು ಫ್ರೆಂಡ್ಸ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ. 35 ವರ್ಷವಾಗಿದ್ದರು ಈಗಲೂ ಕೂಡ 18ರ ಹರೆಯದ ಹುಡುಗಿಯ ಹಾಗೆ ಇರುವ ರಾಧಿಕಾ ಕುಮಾರಸ್ವಾಮಿ ಅವರಿಗೆ ದೊಡ್ಡ ಫ್ಯಾನ್ ಬೇಸ್ ಸಹ ಇದ್ದು ಲೇಖನಿಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಬರ್ತ್ ಡೇ ಪಾರ್ಟಿ ಫೋಟೋಸ್ ನೋಡಬಹುದು. ಇನ್ನು ಕುಮಾರಸ್ವಾಮಿ ಅವರು ಕಳುಹಿಸಿದ ಉಡಗೊರೆ ಏನೆಂದರೆ ರಾಧಿಕಾ ಅವರ ಬರ್ತ್ ಡೇ ಗೇ ಐಶಾರಾಮಿ ಕಾರೊಂದೊನು ಉಡುಗೊರೆಯಾಗಿ ನೀಡಿದ್ದು ಇದರ ಜೊತೆಗೆ ಕೇಕ್ ಕೂಡ ಕಳುಹಿಸಿಕೊಟ್ಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಒಟ್ಟಾರೆ ಈ ಬಾರಿಯ ಹುಟ್ಟುಹಬ್ಬ ರಾಧಿಕಾಗೆ ಬಹಳ ಸ್ಪೆಷಲ್ ಆಗಿತ್ತು ಎನ್ನಬಹುದು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...