ರಾಧಿಕಾ-ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ ಅವರ ಬರ್ತ್ ಡೇ ಸೆಲೆಬ್ರೇಷನ್ ವಿಡಿಯೋ ನೋಡಿ…

CINEMA/ಸಿನಿಮಾ

2002 ರಲ್ಲಿ ತೆರೆಕಂಡ ನಿನಗಾಗಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟವರು ನಟಿ ರಾಧಿಕಾ. ರಾಧಿಕಾ ಮೂಲತಃ ಮಂಗಳೂರು ಜಿಲ್ಲೆಯವರು. ಹುಟ್ಟಿದ್ದು ನವೆಂಬರ್ 12, 1986 ರಲ್ಲಿ. ಓದಿನಲ್ಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ರಾಧಿಕಾ ಅವರು ಮುಂದೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ 14 ವರ್ಷದಲ್ಲಿದ್ದಾಗ ರತನ್ ಕುಮಾರ್ ಎನ್ನುವರ ಜೊತೆ ಇವರಿಗೆ ಬಾಲ್ಯ ವಿವಾಹ ಆಗುತ್ತದೆ. ಮದುವೆಯಾದ ಎರಡು ವರ್ಷಕ್ಕೆ ಅವರ ಪತಿ ಹೃದಯಾಘಾತದಿಂದ ನಿಧನರಾಗುತ್ತಾರೆ. ಈ ವರ್ಷ ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ಯಾವ ರೀತಿ ಆಚರಿಸಿಕೊಂಡಿದ್ದಾರೆ ಗೊತ್ತಾ

ಸಂತೋಷವಾಗಿರಬೇಕಿದ್ದ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಳ್ಳುತ್ತಾರೆ ರಾಧಿಕಾ, ಆದರೆ ಅದೇ ವರ್ಷ ಅವರ ಅದೃಷ್ಟ ಕೂಡ ಬದಲಾಗುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದ ರಾಧಿಕಾ ಅವರಿಗೆ ನೀಲ ಮೇಘ ಶ್ಯಾಮ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಮೊದಲ ಸಿನಿಮಾದಲ್ಲಿ ಉತ್ತಮವಾಗಿ ಅಭಿನಯಿಸಿದ್ದ ರಾಧಿಕಾ ಅವರಿಗೆ ಅಲ್ಲಿಂದ ಹೆಚ್ಚಿನ ಅವಕಾಶಗಳು ಸಿಗಲು ಆರಂಭವಾದವು. ಎರಡನೇ ಸಿನಿಮಾ ನಿನಗಾಗಿ ಭರ್ಜರಿ ಹಿಟ್ ಆಯಿತು. ನಂತರ ಹಲವಾರು ಸಿನಿಮಾಗಳಲ್ಲಿ ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದರು. ಅದರಲ್ಲೂ ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರ ತಂಗಿಯಾಗಿ ಅಭಿನಯಿಸಿದ ತವರಿಗೆ ಬಾ ತಂಗಿ, ಅಣ್ಣ ತಂಗಿ ಸಿನಿಮಾಗಳು ಸೂಪರ್ ಹಿಟ್ ಆದವು.

ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲೂ ಸಹ ನಟಿಸಿ ಯಶಸ್ಸು ಪಡೆದರು ರಾಧಿಕಾ. 2008 ರಿಂದ 2012 ರ ವರೆಗು ಚಿತ್ರರಂಗದಿಂದ ದೂರ ಉಳಿದಿದ್ದರು ರಾಧಿಕಾ. 2012 ರಲ್ಲಿ ಲಕ್ಕಿ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ವಾಪಸ್ ಬರುತ್ತಾರೆ. ಮುಂದಿನ ವರ್ಷ 2013 ರಲ್ಲಿ ನಂತರ 2010 ರಲ್ಲಿ ರಾಜಕಾರಣಿ ಕುಮಾರಸ್ವಾಮಿ ಅವರೊಡನೆ ಮದುವೆ ಆಗಿರುವುದಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. 2006 ರಲ್ಲಿ ಮದುವೆಯಾಗುವುದಾಗಿ ಹೇಳಿದ್ದರು ರಾಧಕಾ. ರಾಧಿಕಾ ಅವರಿಗೆ ಮುದ್ದಾದ ಹೆಣ್ಣು ಮಗು ಇದ್ದು, ಆ ಮಗುವಿನ ಹೆಸರು ಶಮಿಕಾ.

ಮಗು ಹುಟ್ಟಿದ ಸಮಯದಿಂದ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ರಾಧಿಕಾ, ಫಿಲ್ಮ್ ಪ್ರೊಡ್ಯೂಸರ್ ಆಗಿ ರೀ ಎಂಟ್ರಿ ತೆಗೆದುಕೊಂಡರು. ಲಕ್ಕಿ ಸಿನಿಮಾ ಪ್ರೊಡ್ಯುಸ್ ಮಾಡಿದರು. 2011ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮದುವೆ ಆಗಿರುವ ವಿಚಾರ ತಿಳಿಸಿದರು. ಸ್ವಲ್ಪ ಗ್ಯಾಪ್ ನ ನಂತರ, ಸ್ವೀಟಿ ಎಂಬ ಹೆಸರಿನ ಸಿನಿಮಾ ಮೂಲಕ ನಟನೆಗೆ ಕಮ್ ಬ್ಯಾಕ್ ಮಾಡಿದರು. ಸ್ವೀಟಿ ನಂತರ ರುದ್ರತಾಂಡವ ಹಾಗೂ ದಮಯಂತಿ ಸಿನಿಮಾದಲ್ಲಿ ನಟಿಸಿದರು.

ಸಧ್ಯಕ್ಕೆ ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ರಾಧಿಕಾ ಅವರು, ಇತ್ತೀಚೆಗೆ ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ಅಚರಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಗೌನ್ ಧರಿಸಿ, ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ. 35 ವರ್ಷವಾಗಿದ್ದರು, ಈಗಲೂ 18ರ ಹರೆಯದ ಹುಡುಗಿಯ ಹಾಗೆ ಇರುವ ರಾಧಿಕಾ ಕುಮಾರಸ್ವಾಮಿ ಅವರಿಗೆ ದೊಡ್ಡ ಫ್ಯಾನ್ ಬೇಸ್ ಸಹ ಇದೆ. ರಾಧಿಕಾ ಕುಮಾರಸ್ವಾಮಿ ಅವರ ಬರ್ತ್ ಡೇ ಪಾರ್ಟಿ ಫೋಟೋಸ್ ನೋಡಿ..







ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...