ರಚಿತಾ-ರಾಮ್

ಸೀಕ್ರೆಟ್ ಬಾಯ್ ಫ್ರೆಂಡ್ ಜೊತೆ ಫಿಕ್ಸ್ ಐತು ರಚಿತಾ ರಾಮ್ ಮದುವೆ,ಸಂಚಲನ ಮೂಡಿಸಿದ ಫೋಟೊ,ನೋಡಿ…

Today News / ಕನ್ನಡ ಸುದ್ದಿಗಳು

ಚಿತ್ರರಂಗದಲ್ಲಿ ಗುಲ್ಲುಗಳಿಗೆ ಕಡಿಮೆ ಇಲ್ಲ. ಅದರಲ್ಲಿಯೂ ನಟ, ನಟಿಯರ ಮದುವೆ ಸುದ್ದಿ ಯಾವಾಗಲೂ ಸಂಚಲನ ಸೃಷ್ಟಿಸುತ್ತಿರುತ್ತದೆ. ಈಗ ಸ್ಯಾಂಡಲ್ ವುಡ್‌ನಲ್ಲಿ ಮದುವೆಯ ಸುದ್ದಿಯೊಂದು ಇದ್ದಕ್ಕಿದ್ದಂತೆ ಹರಿದಾಡತೊಡಗಿದೆ. ಅದೂ ಕನ್ನಡದ ಮುಂಚೂಣಿಯ ನಟಿಯರಲ್ಲಿ ಒಬ್ಬರಾದ ರಚಿತಾ ರಾಮ್ ಅವರದ್ದು. ತೆಲುಗು ಟಿವಿ ಲೋಕದಲ್ಲಿ ದಾಖಲೆ ಬರೆದಿದ್ಯಂತೆ  ಗುಳಿಕೆನ್ನೆ ಸುಂದರಿ ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರ ಮದುವೆ ಸಂಗತಿ ಮುನ್ನೆಲೆಗೆ ಬಂದಿರುವುದು ಇದು ಮೊದಲ ಸಲವೇನಲ್ಲ.

‘ಬುಲ್ ಬುಲ್’ ಬೆಡಗಿಯ ಮದುವೆಯ ಸಂಗತಿ ಕೆಲವು ತಿಂಗಳ ಹಿಂದೆಯೂ ಮಾತುಗಳು ಕೇಳಿಬಂದಿದ್ದವು. ಶೃಂಗೇರಿಯಲ್ಲಿ ದೇವೇಗೌಡರ ಕುಟುಂಬ ನಡೆಸಿದ್ದ ಚಂಡಿಕಾಯಾಗದಲ್ಲಿ ರಚಿತಾ ಭಾಗವಹಿಸಿದ್ದು, ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ನಡುವೆ ಮದುವೆ ನಿಶ್ಚಯವಾಗಿದೆ ಎಂಬ ಗುಸು ಗುಸು ಹರಡಿಸಿತ್ತು. ಆದರೆ ಇದಕ್ಕೆ ರಚಿತಾ ಸ್ಪಷ್ಟನೆ ನೀಡಿದ್ದರು. ನಿಖಿಲ್ ಮತ್ತು ರೇವತಿ ವಿವಾಹ ನಿಶ್ಚಯವಾಗಿ ಲಾಕ್ ಡೌನ್ ನಡುವೆ ಮದುವೆಯೂ ನಡೆದಿದೆ.  ಆಟೋ ಡ್ರೈವರ್ ಅಭಿಮಾನಕ್ಕೆ ರಚಿತಾ ಭಾವುಕ: ಹೆಸರನ್ನು ಇನ್ಸ್ಟಾಗ್ರಾಮ್ ನಲ್ಲಿ ಟ್ಯಾಗ್ ಮಾಡಿ ಎಂದ ಡಿಂಪಲ್ ಕ್ವೀನ್ ಈಗ ಚಿತ್ರರಸಿಕರ ನೆಚ್ಚಿನ ನಟಿ ರಚಿತಾ ರಾಮ್ ಮದುವೆ ವಿಚಾರವಾಗಿ ಮತ್ತೊಂದು ಸುತ್ತಿನ ಗಾಳಿಸುದ್ದಿ ಹರಿದಾಡುತ್ತಿದೆ.

ರಚಿತಾ ರಾಮ್ Photos & Images # 5322 - Filmibeat Kannada

ಅದಕ್ಕೆ ಕಾರಣವಾಗಿರುವುದು ಒಂದು ಸೆಲ್ಫಿ ಫೋಟೊ. ಮುಂದೆ ಓದಿ… ಧನ್ವೀರ್ ಜತೆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳಿಂದ ಸೆಲ್ಫಿ ಫೋಟೊವೊಂದು ವೈರಲ್ ಆಗಿದೆ. ಅದರಲ್ಲಿ ರಚಿತಾ ರಾಮ್ ಮತ್ತು ನಟ ಧನ್ವೀರ್ ಗೌಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಮದುವೆಯ ಕುರಿತಾದ ವದಂತಿ ಹರಡಲು ಕಾರಣ. ಗೌಡರ ಹುಡುಗನೊಂದಿಗೆ ಮದುವೆ ತಾವು ಮದುವೆಯಾಗುವುದು ಗೌಡರ ಹುಡುಗನನ್ನೇ ಎಂದು ಡಿಂಪಲ್ ಕ್ವೀನ್ ಒಮ್ಮೆ ಹೇಳಿಕೊಂಡಿದ್ದರು. ಸದ್ಯಕ್ಕೀಗ ಮದುವೆ ವಿಚಾರವಿಲ್ಲ. ನಾನು ಯಾರನ್ನೂ ಲವ್ ಮಾಡುತ್ತಿಲ್ಲ ಎಂದು ಅವರು ಕಳೆದ ವರ್ಷ ತಿಳಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಅವರು ಮದುವೆಯಾಗುವ ಗೌಡರ ಹುಡುಗ ಯಾರಿರಬಹುದು ಎಂಬ ಗುಸುಗುಸು ಶುರುವಾಗಿತ್ತು.
ಧನ್ವೀರ್ ಜತೆ ಫೋಟೊ

ರಚಿತಾ ಯಾರ ಜತೆಗಾದರೂ ಫೋಟೊ ತೆಗೆಸಿಕೊಂಡಿದ್ದರೆ ಅವರು ಇಷ್ಟಪಟ್ಟ ಹುಡುಗ ಆತನೇ ಇರಬಹುದಾ ಎಂಬ ಊಹೆ ನಡೆಯುತ್ತಿತ್ತು. ಅದಕ್ಕೆ ಈಗ ಹೊಸ ಸೇರ್ಪಡೆಯಾಗಿದೆ. ‘ಕೆಲವು ಪಾತ್ರಗಳನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಚಿತಾ ಚರ್ಚೆ ಹುಟ್ಟಿಸಿದ ಫೋಟೊ ಧನ್ವೀರ್ ಗೌಡ ಮತ್ತು ರಚಿತಾ ರಾಮ್ ಅವರ ಈ ಸೆಲ್ಫಿ ಯಾವ ಸಮಯದ್ದು ಎನ್ನುವುದು ತಿಳಿದಿಲ್ಲ. ಆದರೆ ರಚಿತಾ ಮದುವೆ ವಿಚಾರದ ಬೆಂಕಿಗಂತೂ ಸಾಕಷ್ಟು ತುಪ್ಪ ಸುರಿದಿದೆ. ಸಿನಿಮಾ ಶೂಟಿಂಗ್‌ಗಳು ನಡೆಯದ ಈ ಸಂದರ್ಭದಲ್ಲಿ ಈ ಫೋಟೊ ವೈರಲ್ ಆಗಿರುವುದು ಸಹಜವಾಗಿಯೇ ಅನೇಕರಲ್ಲಿ ಕುತೂಹಲ ಮೂಡಿಸಿದೆ. ಸುದ್ದಿ ಸತ್ಯವೇ?

ಈ ಫೋಟೊ ಜತೆಗೆ ಹರಿದಾಡುತ್ತಿರುವ ಸುದ್ದಿ ಸತ್ಯವೇ? ಅಥವಾ ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ವದಂತಿಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ಬಗ್ಗೆ ಡಿಂಪಲ್ ಕ್ವೀನ್ ಅಥವಾ ಧನ್ವೀರ್ ಗೌಡ ಅವರಿಂದ ಅಧಿಕೃತ ವಿವರಣೆ ಹೊರಬರಬೇಕಿದೆ. ಕೊರೊನಾ ಆತಂಕದ ನಡುವೆಯೂ ಚಿತ್ರೀಕರಣಕ್ಕೆ ಹಾಜರಾದ ನಟಿ ರಚಿತಾ ರಾಮ್ ಬಂಪರ್ ಚಿತ್ರದಲ್ಲಿ ನಟನೆ ಕಳೆದ ವರ್ಷ ಬಿಡುಗಡೆಯಾದ ಸುನಿ ನಿರ್ದೇಶನದ ‘ಬಜಾರ್’ ಚಿತ್ರದ ಮೂಲಕ ಹೀರೋ ಆಗಿ ಪರಿಚಯವಾದ ಧನ್ವೀರ್ ಗೌಡ, ಹರಿ ಸಂತೋಷ್ ನಿರ್ದೇಶನದ ‘ಬಂಪರ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅತ್ತ ರಚಿತಾರಾಮ್ ಅವರ ಕೈಯಲ್ಲಿ ತೆಲುಗಿನ ‘ಸೂಪರ್ ಮಚ್ಚಿ’ ಸೇರಿದಂತೆ ಹಲವು ಚಿತ್ರಗಳಿವೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.