ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟಿಯರು ಬಂದು ಹೋಗಿದ್ದಾರೆ. ಅನೇಕ ಕನ್ನಡದ ನಟಿಯರು ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡಿದ್ದಾರೆ. ಆದರೆ ಈ ಎಲ್ಲರಿಗಿಂತ ಭಿನ್ನ ಅನ್ನಿಸುವ ನಟಿ ಅಂದರೆ ಅದು ಡಿಂಪಲ್ ಕ್ವೀನ್ ರಚಿತಾ ರಾಮ್. ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಈ ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದರೆ ಎಲ್ಲರಿಗೂ ಇಷ್ಟ. ಮುದ್ದು ನಗುವಿನ ಗುಳಿ ಕೆನ್ನೆಯ ಚೆಲುವೆ ರಚಿತಾ ರಾಮ್ ಒಬ್ಬ ಅದ್ಭುತ ನಟಿ.
ಸಿನಿಮಾದಲ್ಲಿ ನೈಜವಾಗಿ ನಟಿಸಿ, ಟಾಪ್ ನಲ್ಲಿ ಶೈನ್ ಆಗುತ್ತಿದ್ದಾರೆ. ಇನ್ನು ಬೇರೆ ನಟಿಯರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ನಿರ್ದೇಶಕ ನಿರ್ಮಾಪಕರು ತಮ್ಮ ಹೊಸ ಸಿನಿಮಾಗಳಿಗೆ ರಚಿತಾ ರಾಮ್ ಅವರ ಬಳಿಯೇ ಮೊದಲು ಹೋಗುತ್ತಾರೆ. ರಚಿತಾ ರಾಮ್ ಅವರು ಇದೀಗ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದರೂ ಸ್ವಲ್ಪ ಕೂಡ ಅಹಂಕಾರ ಸ್ವಭಾವ ಎಲ್ಲಿಯೂ ತೋರಿಸುವುದಿಲ್ಲ. ಎಲ್ಲರೊಂದಿಗೆ ಜಾಲಿಯಾಗಿ ಮಿಂಗಲ್ ಆಗುವ ಅವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುವಂತದ್ದೇ.
ಪ್ರತಿಯೊಬ್ಬರ ಜೊತೆ ಪ್ರೀತಿಯಿಂದಲೇ ಮಾತನಾಡುತ್ತಾರೆ. ಹೀಗಾಗಿಯೇ ರಚಿತಾ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಎಲ್ಲೇ ಹೋಗಲಿ ಅಭಿಮಾನಿಗಳ ಜೊತೆ ಕಾಮನ್ ಮ್ಯಾನ್ ನಂತೆ ಮಾತನಾಡುತ್ತಾರೆ. ಅದೇ ರೀತಿ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ತುಂಬಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ರಚಿತಾ ರಾಮ್ ಅವರು ಮೊತ್ತ ಮೊದಲು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ಡಿ ಬಾಸ್ ದರ್ಶನ್ ಜೊತೆ ಬುಲ್ ಬುಲ್ ಸಿನಿಮಾದಲ್ಲಿ.
ಆ ಸಿನಿಮಾದಲ್ಲಿ ತನ್ನ ಗುಳಿ ಕೆನ್ನೆ ಹಾಗೂ ತನ್ನ ಕ್ಯೂಟ್ ಹಲ್ಲಿರುವ ಸ್ಮೈಲ್ ಮೂಲಕ ಎಲ್ಲರ ಮನಗೆದ್ದಿದ್ದರು. ಇವರು ಧಾರವಾಹಿಯಿಂದ ಸಿನಿಮಾ ಲೋಕಕ್ಕೆ ಬಂದವರು. ಜೀ ಕನ್ನಡದಲ್ಲಿ ಹತ್ತು ವರ್ಷಗಳ ಹಿಂದೆ ಪ್ರಸಾರ ಆಗುತ್ತಿದ್ದ ಅರಸಿ ಧಾರವಾಹಿಯಲ್ಲಿ ನಟಿಸಿದ್ದರು. ಆದಾದ ನಂತರ ಸಿನಿಮಾದಲ್ಲಿ ಅವಕಾಶ ಸಿಕ್ಕಿ ಅದರಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಇವರು ನಟಿಸಿದ್ದು ಎಲ್ಲಾ ಸ್ಟಾರ್ ನಟರ ಜೊತೆನೇ. ಕಿಚ್ಚ ಸುದೀಪ್, ಡಿ ಬಾಸ್ ದರ್ಶನ್, ಗಣೇಶ್, ಶ್ರೀ ಮುರಳಿ, ಶಿವರಾಜ್ ಕುಮಾರ್, ನಿನಾಸಂ ಸತೀಶ್ ಜೊತೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು, ಇವರು ನಟಿಸಿರುವ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಹೀಗಾಗಿ ರಚಿತಾ ರಾಮ್ ಒಬ್ಬ ಸಕ್ಸಸ್ ಫುಲ್ ನಟಿಯಾಗಿ ಮಿಂಚುತ್ತಿದ್ದಾರೆ. ಇನ್ನು ರಚಿತಾ ಅವರು ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲ ರಿಯಾಲಿಟಿ ಶೋ ಜಡ್ಜ್ ಆಗಿಯೂ ಕಾಣಿಸಿಕೊಂಡು ವೀಕ್ಷಕರಿಗೆ ಖುಷಿ ಕೊಟ್ಟಿದ್ದಾರೆ. ಹೌದು, ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದ ಮಜಾ ಭಾರತ ಕಾಮೆಡಿ ಶೋ ನಲ್ಲಿ ಜಡ್ಜ್ ಆಗಿ ಇದ್ದರು.
ಇದೀಗ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಡ್ರಾಮಾ ಜೂನಿಯರ್ಸ್ ಸೀಸನ್ 4 ಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ತೀರ್ಪು ಗಾರರಾಗಿದ್ದಾರೆ. ಇಂತಹ ರಚಿತಾ ರಾಮ್ ಅವರ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೀಕ್ಷಣೆ ಪಡೆಯುತ್ತಿದೆ. ಹೌದು, ಒಂದು ಕಾರ್ಯಕ್ರಮದಲ್ಲಿ ರಘು ದೀಕ್ಷಿತಾ ಅವರು ರಚಿತಾ ಅವರ ಸಿನಿಮಾದ ಚಾಂದಿನಿ ಅನ್ನುವ ಹಾಡು ಹಾಡುತ್ತಿದ್ದರು.
ಆಗ ವೇದಿಕೆ ಮೇಲೆ ಹೋದ ರಚಿತಾ ರಾಮ್ ಸಕತ್ ಆಗಿ ಟಪಾಂಗುಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಬಿಳಿ ಬಣ್ಣದ ಸೀರೆ ಉಟ್ಟು ಸಖತ್ ಹಾಟ್ ಆಗಿ ಕಾಣಿಸುತ್ತಿದ್ದ ರಚಿತಾ ರಾಮ್ ಅವರ ಈ ಡ್ಯಾನ್ಸ್ ನೋಡಿ ಅಭಿಮಾನಿಗಳು ಪುಲ್ ಖುಷಿ ಆಗಿದ್ದಾರೆ. ನಿಮಗೆ ರಚಿತಾ ರಾಮ್ ಎಷ್ಟು ಇಷ್ಟ, ಯಾಕೆ ಇಷ್ಟ, ಅವರ ಯಾವ ಸಿನಿಮಾ ಇಷ್ಟ ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.