ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ (Rachitaa Ram) ಅವರಿಗೆ ಎಲ್ಲಿಲ್ಲದ ಬೇಡಿಕೆಯಿದ್ದು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ (Dimple Queen Rachitaa Ram) ಕನ್ನಡ ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟವರು. ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರಚಿತಾ ರಾಮ್ ಅವರ ಕಾಲ್ ಶೀಟ್ ಗಾಗಿ ಕಾಯುವ ಕಾಲವು ಬಂದಿದೆ. ಕೈ ತುಂಬಾ ಆಫರ್‌ಗಳಿದೆ ಶೂಟಿಂಗ್ ಮಾಡಲು ಸಮಯವಿಲ್ಲದ ನಟಿ ತನ್ನ ನಟನೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದುಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ 2013 ರಿಂದ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. `ಬೆಂಕಿಯಲ್ಲಿ ಅರಳಿದ ಹೂವು’ (Benkiyali Aralida Hoovu) ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಬುಲ್‌ಬುಲ್ (Bul Bul) ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ನಟಿಯು ತನ್ನ ಸೌಂದರ್ಯದಿಂದಲೇ ಮೋಡಿ ಮಾಡುವ ಇವರು ಇದೀಗ ಕೆಂಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಸೀರೆಯುಟ್ಟು ಕೂದಲು ಹರಿಬಿಟ್ಟಿದ್ದು, ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದರೆ, ಕಿರುತೆರೆಯ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ರಚಿತಾ ರಾಮ್ ಅವರ ಹುಟ್ಟುಹಬ್ಬದ ವೇಳೆಯಲ್ಲಿ ಈ ವರ್ಷ ರಚಿತಾ ರಾಮ್ ನೀಡಿದ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ಸಮಯದಲ್ಲಿ ಏನಾದರೂ ಒಂದು ಅಂದುಕೊಳ್ಳುವೆ ಸಾಧನೆ ಮಾಡುವೆ. ಆದರೆ 2023ರಲ್ಲಿ ನಾನು ಏನೂ ಅಂದುಕೊಳ್ಳುವುದಿಲ್ಲ ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ ಈ ಸಲ ಏನೂ ಅಂದುಕೊಂಡಿಲ್ಲ ಏಕೆಂದರೆ ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುತ್ತಿಲ್ಲ. ಜೀವನದಲ್ಲಿ ಕಷ್ಟಗಳು ಬಂದ್ಹಂಗೆ ಬರ್ತಾ ಇರಲಿ ಏನೇ ಇದ್ದರೂ ಎದುರಿಸಲು ರೆಡಿಯಾಗಿರುವೆ. ಖುಷಿ ಆಯ್ತಾ ಖುಷಿಯಾಗಿ ಇರೋಣ” ಎಂದಿದ್ದರು.
ಅಷ್ಟೇ ಅಲ್ಲದೇ, “ಪ್ರತಿಯೊಬ್ಬರ ಜೀವನದಲ್ಲೂ ಮೇಲೆ ಕೆಳಗಿ ಇರುತ್ತದೆ ಪ್ರತಿ ಸಲನೂ ಯಶಸ್ಸು ಸಿಗುತ್ತದೆ ಯಶಸ್ಸು ಸಿಗಬೇಕು ಅಂದುಕೊಳ್ಳುವುದು ತಪ್ಪಾಗುತ್ತದೆ. ಸೋಲು ಅನುಭವಿಸಿದಾಗ ಅದನ್ನು ಅರ್ಥ ಮಾಡಿಕೊಳ್ಳಬೇಕು..ಯಾಕೆ ಸೋಲಾಯ್ತು ಅದನ್ನು ಹೇಗೆ ಸರಿ ಮಾಡಿಬೇಕು ಎಂದು ಯೋಚನೆ ಮಾಡಬೇಕು. ಕೆಲಸದ ಬಗ್ಗೆ ಫೋಕಸ್ ಮಾಡಬೇಕು ಸಾಧನೆ ಮಾಡಬೇಕು ಅನ್ನೋದು ನನ್ನ ಗುರಿ. ಭಗವಂತ ಏನು ಕಳುಹಿಸುತ್ತಾನೆ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಕೊಡು ಎಂದು ಬೇಡುವೆ” ಎಂದಿದ್ದರು.
“ನನ್ನ ಮದುವೆ ವಿಚಾರದಲ್ಲಿ ದೇವರು ಹೇಗೆಲ್ಲಾ ಪ್ಲ್ಯಾನ್ ಮಾಡಿದ್ದಾನೆ ಗೊತ್ತಿಲ್ಲ ಈಗ ನಡೆಯುತ್ತಿರುವುದು ಅವನ ಲೀಲೆ. ಇಷ್ಟೊಂದು ಅಭಿಮಾನಿಗಳ ಪ್ರೀತಿ ಹಾಗೂ ನನ್ನ ಮನೆ ಬಳಿ ಬಂದು ಪ್ರೀತಿ ತೋರಿಸುವ ರೀತಿ ಎಲ್ಲಾ ಜನರ ಮೂಲಕ ನನಗೆ ಬರುತ್ತಿದೆ. ನನಗೆಂದು ದೇವರು ಏನು ಪ್ಲ್ಯಾನ್ ಮಾಡಿದ್ದಾನೆ ಗೊತ್ತಿಲ್ಲ ಆದರೆ ಪ್ಲ್ಯಾನ್ ಚೆನ್ನಾಗಿರಲಿ ಎಂದು ಪ್ರಾರ್ಥನೆ ಮಾಡುವೆ ಅಷ್ಟೆ” ಎಂದಿದ್ದರು. ಸದ್ಯಕ್ಕೆ ನಟಿ ರಚಿತಾ ರಾಮ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಶೂಟಿಂಗ್ ಎಂದು ಬ್ಯುಸಿಯಾಗಿದ್ದಾರೆ.