Rachita Ram Kranthi Movie
Rachita Ram Kranthi Movie: ಇದೀಗ ಸ್ಟಾರ್ ನಟ ದರ್ಶನ್ (Actor Darshan) ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದರ್ಶನ್ ಅವರ ಮೇಲೆ ನಡೆದ ಈ ಘಟನೆಯಿಂದ ಸ್ಯಾಂಡಲ್ವುಡ್ ನಟ, ನಟಿಯರು ಬೇಸರಗೊಂಡಿದ್ದಾರೆ.

ಈ ವಿವಾದದ ನಡುವೆ ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಚಿತ್ರ ಬಾರಿ ಸದ್ದು ಮಾಡುತ್ತಿದೆ. ಈಗಾಗಲೇ ಕ್ರಾಂತಿ ಚಿತ್ರದ ಎರಡು ಹಾಡುಗಳು ಬಿಡುಗಡೆ ಆಗಿವೆ. ಎರಡು ಹಾಡುಗಳು ಕೂಡ ಈಗ ಟ್ರೆಂಡ್ ನಲ್ಲಿ ಇದೆ. ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದ ಘಟನೆಗೆ ಕನ್ನಡ ನಟ ನಟಿಯರು ಭಾರಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಇದೀಗ ಡಿ ಬಾಸ್ ಬೆಂಬಲಿಸಿ ಚಪ್ಪಲಿ ಎಸೆದವರ ವಿರುದ್ಧ ಶಿವರಾಜ್ ಕುಮಾರ್ (Shivarajkumar), ನಟಿ ನಿಶ್ಮಿಕಾ ನಾಯ್ಡು (Nishmika Naidu), ನಟ ಧನ್ವಿರ್ (Dhanveer Gowda), ಕಿಚ್ಚ ಸುದೀಪ್ (Kiccha Sudeep), ಹಿರಿಯ ನಟ ಜಗ್ಗೇಶ್ (Jaggesh), ಶ್ರೀಮುರುಳಿ (Shrimurali), ಅಮೂಲ್ಯ (Amulya), ವಸಿಷ್ಠ ಸಿಂಹ (Vasishta Simha) ಸೇರಿದಂತೆ ಹಲವು ಸ್ಟಾರ್ ನಟರು ಬೇಸರ ವ್ಯಕ್ತ ಪಡಿಸಿದರು. ಇದರ ಜೊತೆಗೆ #WeStandWithDboss ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಾ ಇದೆ.
ಕ್ರಾಂತಿ ಚಿತ್ರಕ್ಕೆ ರಚಿತಾ ರಾಮ್ (Rachitha Ram) ನಾಯಕಿ
ಡಿ ಬಾಸ್ ಅಭಿನಯದ ಕ್ರಾಂತಿ ಚಿತ್ರ ರಿಲೀಸ್ ಗೂ ಮುನ್ನ ಸಾಕಷ್ಟು ಮೆಚ್ಚುಗೆ ಪಡೆದಿದೆ. ಕ್ರಾಂತಿ ಚಿತ್ರದಲ್ಲಿ ದರ್ಶನ್ ಗೆ ರಚಿತಾ ರಾಮ್ ನಾಯಕಿ ಆಗಿದ್ದಾರೆ.

ದರ್ಶನ್ ಹಾಗೂ ರಚಿತಾ ಜೋಡಿ ಅನ್ನು ನೋಡಿದ ಸಿನಿಪ್ರಿಯರು ಖುಷಿಯಾಗಿದ್ದಾರೆ. ಈಗಾಗಲೇ ಬುಲ್ ಬುಲ್ ಚಿತ್ರದ ಮೂಲಕ ದರ್ಶನ್ ಹಾಗೂ ರಚಿತಾ ಜೋಡಿ ಸಿನಿಪ್ರಿಯರನ್ನು ಮೋಡಿ ಮಾಡಿತ್ತು. ಹಾಗೆಯೆ ಅಂಬರೀಷ ಚಿತ್ರದಲ್ಲೂ ಕೂಡ ರಚಿತಾ ರಾಮ್ ಡಿ ಬಾಸ್ ಗೆ ನಾಯಕಿಯಾಗಿದ್ದಾರೆ.
ಇದೀಗ ಮತ್ತೆ ತೆರೆಯೇ ಮೇಲೆ ರಚಿತಾ ಹಾಗೂ ಡಿ ಬಾಸ್ ಬರಲಿದ್ದಾರೆ. ಈಗಾಗಲೇ ಬೋಂಬೆ ಬೋಂಬೆ ಹಾಡಿನಲ್ಲಿ ರಚಿತಾ ಹಾಗೂ ದರ್ಶನ್ ನಡುವಿನ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ಬೋಂಬೆ ಬೋಂಬೆ ಸಾಂಗ್ ಈಗ ಸಖ್ಖತ್ ಟ್ರೆಂಡ್ ನಲ್ಲಿ ಇದೆ.
ಕ್ರಾಂತಿ ಚಿತ್ರಕ್ಕೆ ದುಬಾರಿ ಸಂಭಾವನೆ ಪಡೆದ ರಚಿತಾ
ಕ್ರಾಂತಿ ಚಿತ್ರದಲ್ಲಿ ನಟಿ ರಚಿತಾ ರಾಮ್ ನಾಯಕಿ ಆಗಿ ಮಿಂಚಿದ್ದಾರೆ. ನಟಿ ರಚಿತಾ ದುಬಾರಿ ಸಂಭಾವನೆಯನ್ನು ಕ್ರಾಂತಿ ಚಿತ್ರದಲ್ಲಿ ಪಡೆದಿದ್ದಾರೆ ಎನ್ನಲಾಗುತ್ತಿದೆ. 1 ರಿಂದ 1.5 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ಅಂದಾಜು ಸಂಭಾವನೆ ಆಗಿದ್ದು, ಕ್ರಾಂತಿ ಚಿತ್ರಕ್ಕೆ ರಚಿತಾ ಎಷ್ಟು ಸಂಭಾವನೆಯನ್ನು ಪಡೆದಿದ್ದಾರೆ ಎನ್ನುವ ನಿಖರವಾದ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.