RACHITA-RAM-ABOUT-MARRIAGE

ಮದುವೆಯಾಗಲು ಒಪ್ಪಿಕೊಂಡ ರಚಿತಾ ರಾಮ್,ಇದೇ ತಿಂಗಳು ನಿಶ್ಚಿತಾರ್ಥ ಎಂದ ಧನ್ವೀರ್ ಗೌಡ.

Entertainment/ಮನರಂಜನೆ

ಸ್ನೇಹಿತರೆ ನಮಸ್ಕಾರ, ಕನ್ನಡದ‌ ಬಹುಬೇಡಿಕೆಯ ನಟಿ ರಚಿತಾ ರಾಮ್ ಅವರು ಇದೀಗ ಮದುವೆಯಾಗಲು ಮುಂದಾಗಿದ್ದಾರೆ ಎಂಬ ವಿಚಾರ ಕೇಳಿ ಬರುತ್ತಿದೆ.‌ ಹೌದು, ಮೂಲತಃ ಮೈಸೂರಿನ ಚೆಲುವೆ ರಚಿತಾ ರಾಮ್ ಅವರು ಬುಲ್ ಬುಲ್‌ ಮೂಲಕ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ. ನಟ ದರ್ಶನ್ ಅವರ ಜೊತೆ ನಟಿಸಿ ಹಿಟ್ ಕೊಟ್ಟ ರಚಿತಾ ರಾಮ್ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ.

ಸಾಮಾನ್ಯ ಕುಟುಂಬದಿಂದ ಹುಟ್ಟಿ ಬಂದ ರಚಿತಾ ರಾಮ್ ಅವರು ಇವತ್ತು ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ, ಕನ್ನಡ ಇಂಡಸ್ಟ್ರಿಯಲ್ಲಿ ನಟಿ ರಚಿತಾ ರಾಮ್ ಅವರು ಒಂದು ಸಿನಿಮಾಗೆ ಒಂದು ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ಮುದ್ದು ಮುಖದ ರಚಿತಾ ರಾಮ್ ಅವರಿಗೆ ಸಾಕಷ್ಟು ಅಭಿಮಾನಿಗಳು ಕೂಡ ಇದ್ದಾರೆ‌. ಇತ್ತೀಚೆಗೆ ನಟಿ ರಚಿತಾ ರಾಮ್ ಅವರು ಒಂದು ಕೋಟಿ ಬೆಲೆಯ ಕಾರು ಕೂಡ ಖರೀದಿ ಮಾಡಿದ್ದರು.ನಟಿ ರಚಿತಾ ರಾಮ್ ಅವರು ಇತ್ತಿಚೆಗೆ ತನ್ನ ತಂಗಿಯ ಮದುವೆ ಸಂಭ್ರಮದಿಂದ ಹೊರಬಂದ ಬಳಿಕ, ತನ್ನ ಮದುವೆ ಬಗ್ಗೆ ಸಾಕಷ್ಟು ಚಿಂತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿರುವ ರಚಿತಾ ರಾಮ್ ಅವರು.

ಉತ್ತಮವಾದ ಸಿನಿಮಾ ಕೊಟ್ಟಿದ್ದಾರೆ. ಜೊತೆಗೆ ಸಾಕಷ್ಟು ಹಣ ಕೂಡ ಮಾಡಿದ್ದಾರೆ. ದಿನಪೂರ್ತಿ ಐಶಾರಾಮಿ ಜೀವನ ಕೂಡ ನಡೆಸುತ್ತಿದ್ದಾರೆ. ಆದರೆ, ಇಷ್ಟೆಲ್ಲಾ ಇದ್ದರು ಕೂಡ ತನ್ನ ಜೊತೆ ಸಂಸಾರ ಸುಖ ನೀಡಲು ಒಬ್ಬ ವರ ಬೇಕು ಎಂಬುವುದು ರಚಿತಾ ರಾಮ್ ಕುಟುಂಬಸ್ಥರ ಮಾತು.ಹೌದು, ನಟಿ ರಚಿತಾ ರಾಮ್ ಅವರು ಯಾವಾಗ ಮದುವೆಯಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿ ಕಾಡುತ್ತಿದೆ. ಮುದ್ದಾದ ರಚ್ಚುಗೆ ಯಾವ ವರ ಸಿಗುತ್ತಾನೆ ಎಂಬುವುದು ರಚಿತಾ ರಾಮ್ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಇತ್ತೀಚೆಗೆ ನಟ ಧನ್ವೀರ್ ಗೌಡ ರವರು ರಚಿತಾ ರಾಮ್ ಜೊತೆ ಫೋಟೋ ತೆಗೆದುಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತಗೆ ಹಾಕಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ರಚ್ಚು ಹಾಗೂ ಧನ್ವೀರ್ ಗೌಡ ಮದುವೆಯಾಗುತ್ತಾರೆ ಎಂಬ ಹಸಿಬಿಸಿ ಗಾಸಿಪ್ ವೈರಲ್ ಮಾಡಿದ್ದರು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...