ನಮಸ್ತೆ ಸ್ನೇಹಿತರೆ, ಕನ್ನಡದಲ್ಲಿ ನಂಬರ್ ಒನ್ ನಟಿ ಎಂದರೆ ಅದು ರಚಿತಾ ರಾಮ್ ಎಂದರು ತಪ್ಪಾಗಲಾರದು.. ಇವರು ಸಣ್ಣ ಸಣ್ಣ ನಟರಿಂದ ಹಿಡಿದು ದೊಡ್ಡ ದೊಡ್ಡ ಸುಪರ್ ಸ್ಟಾರ್ ನಟರೊಂದಿಗೆ ನಾಯಕಿಯಾ ಪಾತ್ರದಲ್ಲಿ ಅಭಿನಯಿಸಿದ ತಮ್ಮದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ, ಇವರು ಸಿರಿಯನ್ ನಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟಿರುವ ಇವರ ಜರ್ನಿಯ ಒಂದು ಅದ್ಬುತ, ಇವರು ನಟಿ ಎಂಬ ಕಾರಣಕ್ಕೆ ಎಷ್ಟೋ ಬಾರಿ ಟ್ರೋಲ್ ಆಗಿದ್ದರು ಕೂಡ, ಒಂದು ಬಾರಿಯಾ ಸಿಟ್ಟಗದೆ ಅಭಿಮಾನಿಗಳಿಂದಲೇ ನಾನು ಇಂದು ಈ ಮಟ್ಟಿಗೆ ಬೆಳೆದಿರುವುದು, ನನ್ನ ಬಗ್ಗೆ ಟ್ರೋಲ್ ಮಾಡುವವರಿಗೆ ನಾನು ಎನ್ನು ಹೇಳುವುದಿಲ್ಲ ಎಂದು ಕಟ್ಟಿತನ್ನ ಮಾಡಿದ್ದರು..
ದರ್ಶನ್ ನಟನೆ ಮಾಡಿರೋ ಬುಲ್ ಬುಲ್ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾ ರಾಮ್ಟ ಒಂದರ ಹಿಂದೊಂದು ಹಿಟ್ ಸಿನಿಮಾವನ್ನು 10 ವರ್ಷಗಳಿಂದಲೂ ನೀಡುತ್ತಲೇ ಬಂದಿದ್ದಾರೆ. ದಿಲ್ ರಂಗೀಲಾ, ರನ್ನ, ರತ್ನಾವರ, ಚಕ್ರವ್ಯೂಹ, ಜಗ್ಗು ದಾದಾ, ಅಯೋಗ್ಯ, ಸೀತಾರಾಮ ಕಲ್ಯಾಣ, ನಟಸಾರ್ವಭೌಮ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನಿಸುವಂತಹ ಸೌಂದರ್ಯ ರಚಿತರಾಮ್ ಅವರದ್ದು.. ಚಂದನವನದ ಗುಳಿಕೆನ್ನೆ ಸುಂದರಿಯ ನಗುವನ್ನೊಮ್ಮೆ ನೋಡಿದರೆ ಸಾಕು, ನಾಚಿಕೊಳ್ಳುವ ಅಭಿಮಾನಿಗಳು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿಯೂ ಕಾಣಸಿಗುತ್ತಾರೆ.
ಇದೀಗ ರಚಿತಾ ರಾಮ್ ತನ್ನೆಲ್ಲಾ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ಹಂಚಲಿದ್ದಾರೆ ಎನ್ನಲಾಗುತ್ತಿದೆ.. ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ, ಹಿರಿತೆರೆಯ ಚಿತ್ರಗಳಲ್ಲಿ ಶ್ರಮಿಸಿರುವ ಅನೇಕ ಕಲಾವಿದರು ಹಸೆ ಮಣೆಯೇರಿ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ‘ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ವರ್ಷದಲ್ಲಿ ವಿವಾಹವಾಗಲಿದ್ದಾರಾ? ವರ ಯಾರು?’ ಎಂಬೆಲ್ಲಾ ವಿಚಾರವಾಗಿ ಗಾಂಧಿನಗರದಲ್ಲಿ ಸುದ್ದಿ ಎದ್ದಿದೆ.. ನಟಿ ಅದಿತಿ ಪ್ರಭುದೇವ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ವಶಿಷ್ಟ ಸಿಂಹ ಮತ್ತು ಹರಿಪ್ರಿಯ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಜೋಡಿಗಳು 2023ರ ಪ್ರಾರಂಭದಲ್ಲಿ ಮದುವೆಯಾಗುವ ಕನಸು ಕಂಡು ಭರ್ಜರಿ ತಯಾರಿಯಲ್ಲಿದ್ದಾರೆ. ಇದೇ ಸಾಲಿಗೆ ಗುಳಿಕೆನ್ನೆ ನಟಿ, ರಚಿತರಾಮ್ ಕೂಡ ಸೇರಲಿದ್ದಾರೆ ಎನ್ನಲಾಗುತ್ತಿದೆ..
ಇನ್ನು ರಚಿತಾ ರಾಮ್ ಅವರು ತಮ್ಮ ಅದ್ಭುತವಾದ ನಟನೆಯಿಂದ ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ರಚಿತಾ ಅವರು ಅಷ್ಟೇ ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ ಅಂದರೆ ನಾವು ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಬಹುದು. ಇನ್ನು ನಟಿ ರಚಿತಾ ಅವರು ಬರಿ ನಟನೆಯಲ್ಲಿ ಮಾತ್ರವಲ್ಲದೆ ನೃತ್ಯದಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ ಎಂದು ಹೇಳಬಹುದು. ಹೌದು ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನವನ್ನ ನೀಡಿರುವ ರಚಿತಾ ರಾಮ್ ಅವರು ತಮ್ಮ ನೃತ್ಯದ ಮೂಲಕ ಕೂಡ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ನಟಿ ರಚಿತಾ ರಾಮ್ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.