ಸ್ಯಾಂಡಲ್ ವುಡ್ ರಂಗದಲ್ಲಿ ಇದೀಗ ಒಂದಕ್ಕಿಂತ ಒಂದು ಭಿನ್ನವಾದ ಸಿನಿಮಾಗಳು ಬರುತ್ತಿವೆ. ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದೆ ಬೇಸರ ಪಟ್ಟಿದ್ದ ಸಿನಿಮಾಭಿಮಾನಿಗಳಿಗೆ ಈ ವರ್ಷದಲ್ಲಿ ಸಿನಿಮಾಗಳು ರಸದೌತಣ ಉಣ ಬಡಿಸಿದೆ. ಅದೇ ರೀತಿ ಇದೀಗ ಕೆಲವೇ ದಿನಗಳಲ್ಲಿ ಅಂದರೆ 24 ರಂದು ಸಿನಿ ಪ್ರಿಯರಿಗೆ ಭರ್ಜರಿ ಮನೋರಂಜನೆ ನೀಡಲು ಸಿನಿಮಾ ಒಂದು ರೆಡಿ ಆಗಿದೆ. ಅದುವೇ ಏಕ್ ಲವ್ ಯಾ. ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿರುವ ಜೋಗಿ ಪ್ರೇಮ್ ಅವರ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಇದು ಭಾರೀ ಸದ್ದು ಮಾಡುತ್ತಿದೆ. ಇನ್ನು ಈ ಸಿನಿಮಾ ಈಗಾಗಲೇ ಅದರ ಹಾಡುಗಳಿಂದಲೇ ಸಿನಿ ಪ್ರಿಯರ ಗಮನ ಸೆಳೆದಿದೆ.
ಪ್ರೇಮ್ ಅವರು ತಮ್ಮ ಹಿಂದಿನ ಸಿನಿಮಾಕ್ಕಿಂತ ಈ ಚಿತ್ರವನ್ನು ಭಿನ್ನವಾಗಿಯೇ ಮಾಡಿದ್ದಾರೆ. ಈ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರಕ್ಷಿತಾ ಅವರ ಸಹೋದರ ರಾಣಾ ಅವರು ನಟಿಸಿದ್ದಾರೆ. ಹೀಗಾಗಿ ಈ ಸಿನಿಮಾದ ಪ್ರಮೋಷನ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಈ ಸಿನಿಮಾದಲ್ಲಿ ರಚಿತಾ ರಾಮ್ ಅವರು ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ ಅನ್ನುವುದಕ್ಕೆ ರಿಲೀಸ್ ಆಗಿರುವ ಹಾಡುಗಳೇ ಸಾಕ್ಷಿ, ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಅನ್ನುವ ಹಾಡು ಅದೇ ರೀತಿ ಡೇಟ್ ಮಾಡೋಣ ಇಲ್ಲ ಮೀಟ್ ಮಾಡಣಾ ಹಾಡಿನಲ್ಲಿ ರಚಿತಾ ಅವರು ಬೋಲ್ಡ್ ಆಗಿ ಅಭಿನಯಿಸಿದ್ದಾರೆ.
ಹೀಗಾಗಿ ಮದ್ಯದ ಬಾಟಲಿ ಹಿಡಿಯುವ, ಅದೇ ರೀತಿ ಸಿಗರೇಟ್ ಸೇದುವ, ಕಿಸ್ ಕೊಡುವ ಸೀನ್ ಗಳಲ್ಲಿ ರಚಿತಾ ರಾಮ್ ಮೊತ್ತ ಮೊದಲ ಬಾರಿ ಕಾಣಿಸಿಕೊಂಡಿದ್ದು ಇದು ಅನೇಕರ ಕೆಂಗಣ್ಣಿಗೂ ಗುರಿಯಾಗಿತ್ತು. ಇದೀಗ ಪ್ರಮೋಷನ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ರಚಿತಾ ರಾಮ್, ಪ್ರೇಮ್ ಅವರ ಸಿನಿಮಾ ಅಂದರೆ ಅದರಲ್ಲಿ ವಿಶೇಷತೆ ಇರುತ್ತದೆ, ಅವರ ಖುಷಿಗಾಗಿ ಜೊತೆಗೆ ಸಿನಿಮಾದ ಕಥೆಯೇ ಹಾಗಿರುವಾಗ ಅದಕ್ಕೆ ತಕ್ಕನಾಗಿ ನಟಿಸಬೇಕಾಗುತ್ತದೆ. ಪ್ರೇಮ್ ಅವರಿಗೆ ಫರ್ಫೆಕ್ಟ್ ಶಾಟ್ ಬೇಕು, ಅದಕ್ಕೆ ಬೇಕಾದಂತೆ ನಾವು ನಟಿಸಿದ್ದೇವೆ.
ಇದು ಖಂಡಿತಾ ವೀಕ್ಷಕರಿಗೆ ಇಷ್ಟ ಆಗುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಡಿಫ್ರೆಂಟ್ ಕಥೆ ಹೊತ್ತು, ನಿರ್ದೇಶಕ ಪ್ರೇಮ್ ಸ್ಯಾಂಡಲ್ವುಡ್ಗೆ ಹೊಸ ಪ್ರೇಮ ಕಥೆ ಕೊಡಲು ಸಜ್ಜಾಗಿದ್ದಾರೆ. ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ಮಂದಿರದಲ್ಲಿ ಸದ್ದು ಮಾಡಲಿದ್ದು, ಪ್ರೇಕ್ಷಕ ಪ್ರಭುಗಳು ಪ್ರೇಮ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.