ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡದ ಸ್ಟಾರ್ ನಟಿ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟಿ ಕಂಡು ಈಗ ಪರಭಾಷೆಯ ಸ್ಟಾರ್ ಗಳು ಸಹ ಫಿದಾ ಆಗಿದ್ದಾರೆ.ರಚಿತಾ ರಾಮ್ ಅವರು ಈ ಹಿಂದೆ ಉಪೇಂದ್ರ ಅವರ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಚಿತ್ರದ ‘ಮಾತನಾಡಿ.. ಮಾಯಾವಾದೆ. ಹಾಡು ಸಖತ್ ಹಿಟ್ ಆಗಿತ್ತು ಕೂಡ. ಇದೀಗ ರಚಿತಾ ಮತ್ತೊಮ್ಮೆ ಬೋಲ್ಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಅಜಯ್ ರಾವ್ ಹೀರೋ ಆಗಿರುವ ‘ಲವ್ ಯೂ ರಚ್ಚು’ ಸಿನಿಮಾದ ‘ಮುದ್ದು ನೀನು..’ ಅನ್ನೋ ವಿಡಿಯೋ ಸಾಂಗ್ ನಲ್ಲಿ ಅಜಯ್ ರಾವ್ ಜೊತೆಗೆ ರಚಿತಾ ಕೊಂಚ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡಿದ್ದರು.ಹೊಸ ಪಾರ್ಟಿ ಸಾಂಗ್ ನಲ್ಲಿ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಸಖತ್ ಸ್ಟೆಪ್ ಹಾಕಿದ್ದಾರೆ.
ಲಕ ಲಕ ಲ್ಯಾಂಬೋರ್ಗಿನಿ ಎಂಬ ಹಾಡನ್ನು ಚಂದನ್ ಶೆಟ್ಟಿ ಬರೆದು, ಹಾಡಿದ್ದಾರೆ. ಈ ಪಾರ್ಟಿ ಸಾಂಗ್ ನಲ್ಲಿ ಡಿಂಪಲ್ ಕ್ವೀನ್ ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ..ಈ ಹಾಡಿನ ಚಿತ್ರೀಕರಣದ ದೃಶ್ಯವೊಂದು ಸಖತ್ ವೈರಲ್ ಆಗಿದ್ದು ಬ್ಲ್ಯಾಕ್ ಡ್ರೆಸ್‌ನಲ್ಲಿ ರಚಿತಾ ರಾಮ್ ಸಖತ್‌ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕ್ಲಿಪ್ ಕಂಡು ಫ್ಯಾನ್ಸ್ ಸ್ಟನ್ ಆಗಿದ್ದಾರೆ.
ಕನ್ನಡದ ಯಶಸ್ವಿ ಸ್ಟಾರ್ ನಟಿಯರಲ್ಲಿ ನಟಿ ರಚಿತಾ ರಾಮ್ ಮುಂಚೂಣಿಯಲ್ಲಿ ಇದ್ದಾರೆ. ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿ ಇರುತ್ತಾರೆ. ರಚ್ಚು ಸ್ಯಾಂಡಲ್‌ವುಡ್‌ನ ಲಕ್ಕಿ ಹುಡುಗಿ ಅಂತಲೇ ಫೇಮಸ್. ರಚಿತಾ ಅಭಿನಯಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿವೆ. ಈಗ ರಚ್ಚು ಬಗ್ಗೆ ಮಾತನಾಡೋಕೆ ಕಾರಣ ಆಕೆಯ ಮೊದಲ ಸಿನಿಮಾ.ನಟಿ ರಚಿತಾ ರಾಮ್ ಮೊದಲ ಚಿತ್ರದ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ. ನಟ ದರ್ಶನ್ ಜೊತೆಗೆ ಬುಲ್ ಬುಲ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾರಂಗಕ್ಕೆ ರಚಿತಾ ಬಂದಿದ್ದೇ ಬಂದಿದ್ದು, ಅದೃಷ್ಟ ಅವರ ಕೈ ಹಿಡಿತು. ಇಂದು ಕನ್ನಡದ ನಂಬರ್ ೧ ನಟಿಯ ಸ್ಥಾನದಲ್ಲಿ ಇದ್ದಾರೆ ರಚ್ಚು. ನಟಿ ರಚಿತಾ ರಾಮ್ ಬಣ್ಣದ ಲೋಕಕ್ಕೆ ಬಂದಿದ್ದು ಕಿರುತೆರೆಯ ಮೂಲಕ. ಅರಸಿ ಧಾರಾವಾಹಿ ಮೂಲಕ ಪ್ರೇಕ್ಷಕರ ಮನೆ ಗೆದ್ದ ರಚಿತಾ ರಾಮ್, ನೇರವಾಗಿ ಬಂದಿದ್ದು ಸಿನಿಮಾರಂಗಕ್ಕೆ. ರಚಿತಾ ರಾಮ್ ಮೊದಲ ಸಿನಿಮಾವೇ ಸೂಪರ್ ಹಿಟ್ ಆದ ಕಾರಣ ಕನ್ನಡದ ಬಹುಬೇಡಿಕೆಯ ನಟಿಯಾಗಿ ರಚಿತಾ ಹೊರ ಹೊಮ್ಮಿದರು. ಇದೀಗ ಈ ಡ್ಯಾನ್ಸ್ ನೋಡಿ ರಚಿತಾ ಪ್ಯಾನ್ಸ್ ಫಿದಾ ಆಗಿದ್ದಾರೆ..
ರಚಿತಾ ಬೋಲ್ಡ್ ಲುಕ್ ಡ್ಯಾನ್ಸ್ ನೋಡಲು ಈ ವಿಡಿಯೋ ನೋಡಿ..
View this post on Instagram