ಬೇರೆಯವನ ಜೊತೆ ಕಬ್ಬಡಿ ಆಡಲು ಗಂಡನನ್ನೇ ಮುಗಿಸಲು ಪ್ಲಾನ್ ಮಾಡಿದ ಮಹಿಳೆ, ಕೊನೆಗೆ ಆಗಿದ್ದೇನು ಗೊತ್ತಾ..

ಈಗಿನ ಕಾಲದಲ್ಲಿ ಸಂಸಾರಗಳು, ಜೀವಗಳು, ಜೀವನಗಳು ಹಾಳಾಗುತ್ತಿರುವುದಕ್ಕೆ ಮುಖ್ಯ ಕಾರಣ ಅ-ಕ್ರಮ ಸಂಬಂಧಗಳು. ಮದುವೆ ನಂತರ ತಮ್ಮ ಸಂಗಾತಿ ಇದ್ದರು ಸಹ ಮತ್ತೊಬ್ಬರ ಜೊತೆಗೆ ಮೋಹಕ್ಕೆ ಸಿಲುಕಿ, ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಂಥ ಹಲವು ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇಂಥದ್ದೊಂದು ಘಟನೆ ಇತ್ತೀಚೆಗೆ ತಮಿಳುನಾಡಿನ ಸೇಲಂ ಜಿಲ್ಲೆಯ, ದಡಕಪಟ್ಟಿ ಗೇಟ್ ಹತ್ತಿರ ಇರುವ, ಮೂನಂಗರಾಡ್ ನಲ್ಲಿರುವ ಕೊಥಡಿಮಾಯಿ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ.

ಈ ಕಾಲೋನಿಯಲ್ಲಿ ಪೆರುಮಾಳ್ ಎನ್ನುವ ವ್ಯಕ್ತಿ ವಾಸವಿದ್ದರು, ಇವರಿಗೆ ಇಬ್ಬರು ಮಕ್ಕಳು. ಒಬ್ಬ ಮಗನ ಹೆಸರು ಜೀವಾ, ಅವನಿಗೆ ಮದುವೆಯಾಗಿತ್ತು. ಆತನ ಹೆಂಡತಿಯ ಹೆಸರು ಕವಿತಾ. ಜೀವಾಗೆ ಕುಡಿಯುವ ಕೆಟ್ಟ ಅಭ್ಯಾಸವಿತ್ತು. ಆಕ್ಟೊಬರ್ 16ರಂದು ಎಂದಿನ ಹಾಗೆ ಚೆನ್ನಾಗಿ ಕುಡಿದು ಬಂದಿದ್ದಾನೆ. ಅದೇ ದಿನ ರಾತ್ರಿ ಮನೆಯಲ್ಲೇ ಜೀವಾ ಮೃತಪಟ್ಟಿದ್ದಾನೆ. ಈ ವಿಚಾರವನ್ನು ಆತನ ಪತ್ನಿ ಕವಿತಾ ಪೊಲೀಸರಿಗೆ ತಿಳಿಸಿದ್ದಾಳೆ.

ಕುಡಿದು ಬಂದಿದ್ದ ಜೀವಾ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಿದ್ದಾಳೆ ಕವಿತಾ. ಪೊಲೀಸರು ಬಂದು ತನಿಖೆ ನಡೆಸಿದ್ದಾರೆ. ಹಾಗೆಯೇ ಜೀವಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಪೊಲೀಸರಿಗೆ ಸಿಕ್ಕಿದಾಗ, ನಿರೀಕ್ಷೆ ಮಾಡಿರದ ಹಾಗೆ ಜೀವಾ ಕತ್ತು, ಬಾಯಿ ಮತ್ತು ಮುಖದಲ್ಲಿ ಗಾಯದ ಗುರುತುಗಳು ಇರುವುದು ಗೊತ್ತಾಗಿದೆ. ಆಗ ಪೊಲೀಸರು ಅನುಮಾನದಿಂದ ತನಿಖೆ ನಡೆಸಿದ್ದು, ಕವಿತಾ ಮತ್ತು ಜೀವಾ ಫ್ರೆಂಡ್ ರಾಜ ಇವರಿಬ್ಬರನ್ನು ವಿಚಾರಿಸಿದ್ದಾರೆ..

ವಿಚಾರಣೆ ವೇಳೆ ಇವರಿಬ್ಬರು ಮೊದಲು ಸರಿಯಾಗಿ ಉತ್ತರ ಕೊಟ್ಟಿಲ್ಲ, ಏನೇನೋ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ಪೊಲೀಸರು ಸ್ಟ್ರಿಕ್ಟ್ ಆಗಿ ವಿಚಾರಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ರಾಜಾ ಎನ್ನುವ ಈ ವ್ಯಕ್ತಿ ಜೀವ ಫ್ರೆಂಡ್ ಆಗಿದ್ದು, ಈತ ಪುಲಾವರಿ ಎನ್ನುವ ಊರಿನವರು. ಈತ ಆಟೋ ಡ್ರೈವರ್ ಆಗಿದ್ದು, ಇವನಿಗೆ ಮದುವೆಯಾಗಿ 3 ಮಕ್ಕಳಿದ್ದರು. ಆದರೆ ಈತ ಪತ್ನಿಯನ್ನು ಕಳೆದುಕೊಂಡು, ದುಃಖದಲ್ಲಿದ್ದ.

ಆ ವೇಳೆ ಜೀವಾ ಹೆಂಡತಿ ಕವಿತಾ ಪರಿಚಯವಾಯಿತು. ಇಬ್ಬರ ನಡುವೆ ಸ್ನೇಹ ಬೆಳೆದು, ಮಾತುಕತೆ ಹೆಚ್ಚಾಗಿ, ಸಲುಗೆ ಬೆಳೆದು ಇವರಿಬ್ಬರ ಸ್ನೇಹ ಕೊನೆಗೆ ಅಕ್ರಮ ಸಂಬಂಧವಾಗಿ ಬೆಳೆಯಿತು. ಜೀವ ಕೆಲಸಕ್ಕೆ ಹೋದಾಗ ಇವರಿಬ್ಬರ ಅಕ್ರಮ ಸಂಬಂಧ ನಡೆಯುತ್ತಿತ್ತು. ಅವರಿದ್ದ ಕಾಲೋನಿಯಲ್ಲೇ ಬಾಡಿಗೆ ಮನೆ ಪಡೆದು ಅಲ್ಲೇ ವಾಸ ಮಾಡುವುದಕ್ಕೆ ಶುರು ಮಾಡಿದ ರಾಜ. ಇಬ್ಬರು ಅಲ್ಲೇ ಭೇಟಿ ಆಗಿ ಎಂಜಾಯ್ ಮಾಡುತ್ತಿದ್ದರು.

ಜೀವನಿಗೆ ಗೊತ್ತಾಗದ ಹಾಗೆ ಎಲ್ಲವೂ ನಡೆಯುತ್ತಿತ್ತು, ಆದರೆ ಹೆಚ್ಚು ದಿನ ಈ ಸಂಬಂಧ ಗುಟ್ಟಾಗಿ ಉಳಿಯಲಿಲ್ಲ. ಈ ವಿಚಾರ ಜೀವಾಗೆ ಗೊತ್ತಾಗಿ, ಇಬ್ಬರಿಗೂ ಬಾಯಿಗೆ ಬಂದ ಹಾಗೆ ಬೈದಿದ್ದ. ಈ ಕಾರಣಕ್ಕೆ ಅವರಿಬ್ಬರಿಗೂ ಜೀವಾ ಮೇಲೆ ದ್ವೇಷವಿತ್ತು, ಹೇಗಾದರೂ ಮಾಡಿ ಜೀವನನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಆ ದಿನ ಜೀವ ಚೆನ್ನಾಗಿ ಕುಡಿದು ಮನೆಗೆ ಬಂದಾಗ ಇವರಿಬ್ಬರು ಜೊತೆಯಾಗಿ ಇದ್ದಿದ್ದು ನೋಡಿ ಕೋಪ ಮಾಡಿಕೊಂಡು ಮತ್ತೆ ಚೆನ್ನಾಗಿ ಬಯ್ಯಲು ಶುರು ಮಾಡಿದ..

ಆಗ ಇವರಿಬ್ಬರು ಜೀವನ ಮೂಗು ಮತ್ತು ಬಾಯಿಗೆ ಬಟ್ಟೆ ಕಟ್ಟಿ ಉಸಿರುಗಟ್ಟುಕಾ ಹಾಗೆ ಮುಗಿಸಿಬಿಟ್ಟಿದ್ದಾರೆ. ಅಕ್ಕಪಕ್ಕದ ಯಾರಿಗೂ ಗೊತ್ತಾಗಬಾರದು ಎಂದು ಬಿದ್ದು ಪ್ರಾಣ ಹೋಗಿದೆ ಎಂದು ಹೇಳಿ ನಂಬಿಸಿದ್ದಾರೆ. ಆದರೆ ಪೊಲೀಸರು ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

You might also like

Comments are closed.