ಸ್ಯಾಂಡಲ್ ವುಡ್ ರಂಗದಲ್ಲಿ ಇದೀಗ ಕ್ಯೂಟ್ ಜೋಡಿ ಅಂತ ಅನ್ನಿಸಿಕೊಂಡವರಲ್ಲಿ ಚಂದನ್ ಹಾಗೂ ನಿವೇದಿತಾ ಗೌಡ ಕೂಡ ಒಬ್ಬರು. ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿ ಕೊನೆಗೆ ಪ್ರೀತಿಯಲ್ಲಿ ಬಿದ್ದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರ್ಯಾಪರ್ ಚಂದನ್ ಶೆಟ್ಟಿ ಹಾಗು ಟಿಕ್ ಟಾಕ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದುಕೊಂಡು, ಬಿಗ್ ಬಾಸ್ ಮನೆಯಲ್ಲಿ ತನ್ನ ವಿಶೇಷ ಮಾತಿನ ಶೈಲಿಯಿಂದಲೇ ಫೇಮಸ್ ಆದ ನಿವೇದಿತಾ ಗೌಡ ಜೋಡಿ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಹಳ ಫೇಮಸ್ ಜೋಡಿ.
ಹಲವಾರು ರಿಯಾಲಿಟಿ ಶೋ ನಲ್ಲಿ ಇಬ್ಬರೂ ಸ್ಪರ್ಧಿಸಿ ಮನೋರಂಜನೆ ನೀಡಿದ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಫೆವರಿಟ್ ಜೋಡಿ ಅನ್ನಿಸಿಕೊಂಡಿದ್ದಾರೆ. ಇದೀಗ ನಿವೇದಿತಾ ಗೌಡ ಅವರು ಅದೇನೆ ಮಾಡಿದರೂ ಸುದ್ದಿ ಯಾಗುತ್ತಿದೆ. ಮಕ್ಕಳಂತೆ ಮಾತನಾಡುವ ಅವರ ಮಾತಿನ ಶೈಲಿಯೇ ಚಂದ. ಇಂತಹ ಕ್ಯೂಟ್ ನಿವೇದಿತಾ ಗೌಡ ಅವರ ಮನೆಯಲ್ಲಿ ಇದೀಗ ದೆವ್ವದ ಕಾಟ ಇದೆಯಾ ಅನ್ನುವ ಪ್ರಶ್ನೆ ಎದುರಾಗಿದೆ.
ಹೌದು, ತನ್ನ ಮನೆಯಲ್ಲಿ ಆದ ಘಟನೆಯನ್ನು ಖುದ್ದು ನಿವೇದಿತಾ ಗೌಡ ಅವರೇ ಹೇಳಿಕೊಂಡಿದ್ದು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ನಿಮಗೆಲ್ಲಾ ಗೊತ್ತಿರೋ ಹಾಗೆ ನಿವೇದಿತಾ ಗೌಡ ಅವರ ಯೂ ಟ್ಯೂಬ್ ಚಾನೆಲ್ ಇದೆ. ಅದರಲ್ಲಿ ಅವರು ಒಂದಲ್ಲ ಒಂದು ವಿಡಿಯೋ ಅಪ್ಲೋಡ್ ಮಾಡುತ್ತಿರುತ್ತಾರೆ.ಅದೇ ರೀತಿ ಈ ಬಾರಿ ಕ್ಯೂಟ್ ವೈಷ್ಷವಿ ಗೌಡ ಅವರ ಜೊತೆ ಮುದ್ದೆ ತಿನ್ನುವ ಸ್ಪರ್ಧೆ ನಡೆಸಿದ್ದರು. ನಿವೇದಿತಾ ಹಾಗೂ ವೈಷ್ಣವಿ ಅವರು ಕೈ ಬಳಸದೆ ಬರೀ ಬಾಯಲ್ಲಿ ಮುದ್ದೆ ತಿನ್ನಬೇಕು.
ಹೀಗೆ ಕಾಂಪಿಟೀಷನ್ ನಡೆಯುತ್ತಿರುವಾಗ ಇಬ್ಬರೂ ಆನೆ ಇರುವೆ ಜೋಕ್ ಹೇಳುತ್ತಾ ಕೊನೆಗೆ ನಿವೇದಿತಾ ಅವರು ತನ್ನ ಮನೆಯಲ್ಲಿ ನಡೆದ ಭಯಾನಕ ಕಥೆ ಹೇಳಿದ್ದಾರೆ. ಒಂದು ದಿನ ಚಂದನ್ ಇಲ್ಲದೇ ಇರುವ ಸಮಯದಲ್ಲಿ ನಿವೇದಿತಾ ಅವರು ಸಂಜೆ 8 ಗಂಟೆಯ ವೇಳೆಗೆ ಫುಡ್ ಆರ್ಡರ್ ಮಾಡಿದ್ದರಂತೆ. ಆ ಸಮಯದಲ್ಲಿ ಹಾಲ್ ನಡುವೆ ಇದ್ದ ಸೋಫಾ ಗೋಡೆಯ ಬದಿಗೆ ಸರಿದಿತ್ತಂತೆ. ಅದೇ ಸಮಯದಲ್ಲಿ ಕರೆಂಟ್ ಕೂಡ ಹೋಗಿ, ಯುಪಿಎಸ್ ಕೂಡ ಡಿಮ್ ಆಗಲು ಶುರು ವಾಗಿತ್ತಂತೆ.
ಇದರಿಂದ ಭಯ ಆಗಿ ಅಮ್ಮನ ಮನೆಗೆ ಹೋಗಬೇಕು ಎಂದು ಚಂದನ್ ಜೊತೆ ಹೇಳುವಾಗ ಕರೆಂಟ್ ಬಂತಂತೆ. ನಾನು ಈ ಮನೆ ಬಿಟ್ಟು ಹೋಗಬಾರದು ಎಂದು ಈ ರೀತಿ ಆಗಿದೆ ಎಂದು ನಿವೇದಿತಾ ಗೌಡ ಹೇಳುವಾಗ ವೈಷ್ಣವಿ ಅವರು ಭಯ ಗೊಂಡಿದ್ದರು. ಕೊನೆಗೆ ನಿವೇದಿತಾ ಅವರು ಮಾರನೆ ದಿನ ನೋಡಿದಾಗ.
ಪೂರ್ತಿ ನಾಗರಬಾವಿಯಲ್ಲಿಯೇ ಪವರ್ ಕಟ್ ಆಗಿತ್ತು ಎಂದು ಹೇಳಿ ಮುಗಿಸುವಾಗ ವೈಷ್ಣವಿ ಅವರ ಪ್ಲೇಟ್ ನಲ್ಲಿ ಅರ್ಧ ತಿಂದು ಮುಗಿಸಿದ್ದ ರಾಗಿ ಮುದ್ದೆ ನಾಪತ್ತೆ ಆಗಿತ್ತು. ಆ ಅರ್ಧ ಮುದ್ದೆ ಎಲ್ಲಿ ಹೋಯಿತು ಅನ್ನೋದೇ ಅವರಿಗೆ ಗೊತ್ತಿಲ್ಲ. ನಿಮ್ಮ ಪ್ರಕಾರ ಆ ರಾಗಿ ಮುದ್ದೆ ಏನಾಗಿರಬಹುದು ಕಾಮೆಂಟ್ ಮಾಡಿ ತಿಳಿಸಿ.