ಆಹಾರ ಮತ್ತು ಜೀವನ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು, ವೀ-ರ್ಯಗಣತಿ ಹೆಚ್ಚಿಸುವ ಆಹಾರ ಮತ್ತು ವ್ಯಾಯಾಮ ಮಾಡುತ್ತಲಿದ್ದರೆ ಆಗ ನಿಮಗೆ ಇದು ನೆರವಾಗುವುದು.
ಇಂದಿನ ಪುರುಷರು ಫಲವತ್ತತೆ ಸಮಸ್ಯೆಯನ್ನು ಅತಿಯಾಗಿ ಎದುರಿಸುತ್ತಿದ್ದಾರೆ. ಇದಕ್ಕೆ ನಮ್ಮ ಈಗಿನ ಜೀವನ ಶೈಲಿಯು ಪ್ರಮುಖ ಕಾರಣ ಎನ್ನಬಹುದು. ಜಡ ದೈಹಿಕ ಜೀವನ, ಆಹಾರ ಕ್ರಮ ಇತ್ಯಾದಿಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದೆ.ಹೀಗಾಗಿ ಫಲವತ್ತತೆ ಸಮಸ್ಯೆಯು ಮಹಿಳೆಯರು ಮಾತ್ರವಲ್ಲದೆ, ಪುರುಷರನ್ನು ಕೂಡ ಕಾಡುತ್ತಲಿದೆ.
ಪುರುಷರಲ್ಲಿ ಕಾಡುವಂತಹ ಫಲವತ್ತತೆ ಸಮಸ್ಯೆಗೆ ಕಾರಣವೆಂದರೆ ಅದು ವೀ-ರ್ಯ ಗಣತಿಯು ಕಡಿಮೆ ಆಗುವುದು.ಆರೋಗ್ಯ ಮತ್ತು ಜೀವನಶೈಲಿ ಕೂಡ ವೀ-ರ್ಯ ಗಣತಿ ಮೇಲೆ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ಧೂಮಪಾನ, ಡ್ರಗ್ಸ್, ಸ್ನಾಯುಗಳನ್ನು ಬೆಳೆಸಲು ಬಳಸುವ ಸ್ಟಿರಾಯ್ಡ್ ವೀ-ರ್ಯ ಗಣತಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.ನೀವು ಮತ್ತು ಸಂ-ಗಾತಿಯು ಮಗು ಪಡೆಯಲು ಬಯಸುತ್ತಿದ್ದರೆ ಮತ್ತು ವೀ-ರ್ಯ ಗಣತಿಯು ತುಂಬಾ ಕಡಿಮೆ ಇದ್ದರೆ ಆಗ ಸಮಸ್ಯೆ ನಿವಾರಣೆ ಮಾಡಲು ಮಾತ್ರೆಗಳನ್ನೇ ಸೇವನೆ ಮಾಡಬೇಕು ಎಂದೇನಿಲ್ಲ.
ಆಹಾರ ಮತ್ತು ಜೀವನ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು, ವೀ-ರ್ಯಗಣತಿ ಹೆಚ್ಚಿಸುವ ಆಹಾರ ಮತ್ತು ವ್ಯಾಯಾಮ ಮಾಡುತ್ತಲಿದ್ದರೆ ಆಗ ನಿಮಗೆ ಇದು ನೆರವಾಗುವುದು.ಹಾಗಾದ್ರೆ ವೀ-ರ್ಯ ಗಣತಿ ಹೆಚ್ಚಿಸುವಂತಹ ಕೆಲವೊಂದು ಆಹಾರಗಳು ಯಾವುದು?, ಇಲ್ಲಿದೆ ಮಾಹಿತಿ.
ಬಸಳೆ: ಹಸಿರೆಲೆ ತರಕಾರಿ ಆಗಿರುವಂತಹ ಬಸಳೆಯು ಉನ್ನತ ಮಟ್ಟದ ಫಾಲಿಕ್ ಆಮ್ಲವನ್ನು ಹೊಂದಿದ್ದು, ಇದು ವೀ-ರ್ಯದ ಆರೋಗ್ಯ ಮತ್ತು ಚಲನಶೀಲತೆಗೆ ನೆರವಾಗುವುದು.
ಬಸಳೆಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಇದರಿಂದ ವೀ-ರ್ಯ ಗಣತಿ ಮತ್ತು ಆರೋಗ್ಯದ ಮಟ್ಟವು ಉತ್ತಮವಾಗುವುದು.
ಮೊಟ್ಟೆ: ಪುರುಷರಿಗೆ ತುಂಬಾ ಅಗ್ಗವಾಗಿ ಮತ್ತು ಅತ್ಯಧಿಕ ಮಟ್ಟದಲ್ಲಿ ಪ್ರೋಟೀನ್ ಒದಗಿಸುವ ಮೂಲವೆಂದರೆ ಅದು ಮೊಟ್ಟೆ. ಇದು ಕೂಡ ವೀ-ರ್ಯ ಗಣತಿ ಹೆಚ್ಚು ಮಾಡುವುದು.
ಡಾರ್ಕ್ ಚಾಕಲೇಟ್: ಡಾರ್ಕ್ ಚಾಕಲೇಟ್ ನಲ್ಲಿ ಹೆಚ್ಚಿನ ಸಕ್ಕರೆ ಅಂಶವು ಇರುವ ಕಾರಣದಿಂದಾಗಿ ನೀವು ಅದನ್ನು ಇಷ್ಟಪಡುತ್ತಿದ್ದರೆ ನೀವು ನಿರ್ಧಾರ ಬದಲಾಯಿಸಿಕೊಳ್ಳಿ. ಯಾಕೆಂದರೆ ಸಕ್ಕರೆಯು ವೀ-ರ್ಯ ಗಣತಿ ಕುಗ್ಗಿಸಲು ದೊಡ್ಡ ಶತ್ರುವಾಗಿದೆ. ಡಾರ್ಕ್ ಚಾಕಲೇಟ್ ನಲ್ಲಿ ಉನ್ನತ ಮಟ್ಟದ ಅಮಿನೋ ಆಮ್ಲವು ಇರುವ ಕಾರಣದಿಂದಾಗಿ ಇದು ವೀ-ರ್ಯ ಗಣತಿ ಹಾಗೂ ಅದರ ಗುಣಮಟ್ಟವನ್ನು ಹೆಚ್ಚಿಸುವುದು.
ಬೆಳ್ಳುಳ್ಳಿ: ಇದು ನಾಲಗೆಗೆ ರುಚಿ ನೀಡದೆ ಇದ್ದರೂ ಬೆಳ್ಳುಳ್ಳಿಯಲ್ಲಿ ವೀರ್ಯ ಗಣತಿ ಹೆಚ್ಚಿಸುವ ಅದ್ಭುತ ಅಂಶಗಳು ಇವೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ6 ಮತ್ತು ಸೆಲೆನಿಯಂ ಅಂಶವಿದೆ. ಇದು ವೀರ್ಯಕ್ಕೆ ಆಗುವಂತಹ ಹಾನಿ ತಡೆಯುವುದು.
ಬಾಳೆಹಣ್ಣು: ಬಾಳೆಹಣ್ಣು ಈ ಪಟ್ಟಿಯಲ್ಲಿ ಒಂದು ಸ್ಥಾನ ಪಡೆದುಕೊಂಡಿದೆ ಮತ್ತು ಆರೋಗ್ಯದ ವಿಚಾರಕ್ಕೆ ಬಂದರೆ ಇದು ಆಲ್ ರೌಂಡರ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಎ, ಬಿ1 ಮತ್ತು ಸಿ ಇದೆ. ಬಾಳೆಹಣ್ಣು ಸೇವನೆ ಮಾಡಿದರೆ ಅದು ವೀರ್ಯ ಗಣತಿ ಮತ್ತು ಗುಣಮಟ್ಟ ಹೆಚ್ಚಿಸುವುದು.
ಅರಿಶಿನ: ಅರಿಶಿನದಲ್ಲಿ ತುಂಬಾ ಶಕ್ತಿಶಾಲಿಯಾಗಿರುವಂತಹ ಕರ್ಕ್ಯುಮಿನ್ ಎನ್ನುವ ಅಂಶವಿದೆ. ಇದು ವೀರ್ಯದ ಗುಣಮಟ್ಟದ ಮೇಲೆ ಧನಾತ್ಮಕ ಪರಿಣಾಮ ಬೀರುವುದು. ಇದು ಜನನೇಂದ್ರೀಯದ ಭಾಗಕ್ಕೆ ರಕ್ತದ ಸಂಚಾರ ಉತ್ತಮಪಡಿಸುವುದು ಮಾತ್ರವಲ್ಲದೆ ಸಂಪೂರ್ಣವಾಗಿ ಪುರುಷರಲ್ಲಿ ಸಂತಾನೋತ್ಪತ್ತಿ ಪರಿಣಾಮ ಹೆಚ್ಚಿಸುವುದು.