ಸಣ್ಣ ಹಾವು ಕಂಡರೆ ಸಾಕು ಮಾರುದ್ದ ಹೋಗುವ ಜನರು ಇರುವಾಗ ಇಲ್ಲಿ ಈ ಪುಟ್ಟ ಮಗು ಯಾವುದೇ ರೀತಿ ಭಯಪಟ್ಟುಕೊಳ್ಳದೆ ಹಾವಿನ ಜೊತೆ ಸರಸವಾಡಿದೆ.
ಇಂಟರ್ನೆಟ್ ಪ್ರಪಂಚವು ಅದ್ಭುತ ಸಂಗತಿಗಳಿಂದ ತುಂಬಿದೆ. ಪ್ರತಿನಿತ್ಯ ಇಲ್ಲಿ ಯಾವುದೋ ಒಂದು ವಿಡಿಯೋ(Viral Video) ನಮ್ಮನ್ನು ಬೆರಗುಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಹಾವಿನ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ನೀವು ಕೂಡ ಹಾವಿನ ವಿಡಿಯೋಗಳನ್ನು ವೀಕ್ಷಿಸಿರುತ್ತೀರಿ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸಖತ್ ಸೌಂಡ್ ಮಾಡುತ್ತಿದೆ.
ಈ ವಿಡಿಯೋದಲ್ಲಿರುವ ದೈತ್ಯ ಹೆಬ್ಬಾವ(Pythons)ನ್ನು ನೋಡಿದರೆ ಪ್ರತಿಯೊಬ್ಬರೂ ಬೆಚ್ಚಿಬೀಳುತ್ತಾರೆ. ಆದರೆ ಈ ಮಗು ಮಾತ್ರ ಹೆದರದೆ ಅದರ ಜೊತೆಗೆ ಆಟವಾಡುತ್ತಿದೆ. ಸಣ್ಣ ಹಾವು ಕಂಡರೆ ಸಾಕು ಮಾರುದ್ದ ಹೋಗುವ ಜನರು ಇರುವಾಗ ಇಲ್ಲಿ ಈ ಪುಟ್ಟ ಮಗು ಯಾವುದೇ ರೀತಿ ಭಯಪಟ್ಟುಕೊಳ್ಳದೆ ಹಾವಿನ ಜೊತೆ ಸರಸವಾಡಿದೆ.
ದೈತ್ಯ ಹೆಬ್ಬಾವಿನ(Snakes) ಜೊತೆಗೆ ಆಟವಾಡುತ್ತಾ, ಅದರ ಮೇಲೆ ಹೊರಳಾಡುತ್ತಿರುವ ಪುಟ್ಟ ಮಗುವಿನ ಧೈರ್ಯ ಮೆಚ್ಚಲೇಬೇಕು. ಇಷ್ಟು ಸಣ್ಣ ವಯಸ್ಸಿನಲ್ಲಿ ಹೆಬ್ಬಾವು ಕಂಡರೂ ಭಯಪಟ್ಟುಕೊಳ್ಳದ ಈ ಪುಟ್ಟ ಮಗುವಿನ ಧೈರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ(Viral Video)ವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, ಅನೇಕರು ಇನ್ನೂ ಕೂಡ ಶೇರ್ ಮಾಡುತ್ತಲೇ ಇದ್ದಾರೆ.
ಈ ದೈತ್ಯ ಹೆಬ್ಬಾವು(Pythons) ಬರೋಬ್ಬರಿ 20 ಅಡಿ ಉದ್ದವಿದೆ. ಅದರ ಜೊತೆಗೆ ಈ ಪುಟ್ಟ ಹುಡುಗಿಯ ಆಟ ನೋಡಿದರೆ ಯಾರಿಗಾದರೂ ಭಯವಾಗುತ್ತದೆ. ಹೇಗಪ್ಪಾ ಈ ಪುಟ್ಟ ಹುಡುಗಿ ಆ ದೈತ್ಯ ಹಾವಿನ ಜೊತೆ ಸ್ನೇಹ ಬೆಳೆಸಿಕೊಂಡಳು ಅಂತಾ ಅನೇಕರು ಆಶ್ಚರ್ಯದಿಂದ ಪ್ರಶ್ನಿಸಿದ್ದಾರೆ. ಹೆಬ್ಬಾವಿನ ಜೊತೆಗೆ ಪುಟ್ಟ ಹುಡುಗಿಯ ಸ್ನೇಹಕಂಡು ನೋಡುಗರು ಅಚ್ಚರಿಪಟ್ಟಿದ್ದಾರೆ. ಈ ವಿಡಿಯೋವನ್ನು Snake._.World ಎಂಬ Instagram ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.