ಈಗಾಗಲೇ ಓ ಟಿ ಟಿ ಯಲ್ಲಿ ಬಿಗ್ ಬಾಸ್ ಪ್ರಾರಂಭವಾಗಿ ವಾರದ ಮೇಲಾಯಿತು, ಬಿಗ್ ಬಾಸ್ ಮನೆಗೆ ಕಂಟೆಸ್ಟೆಂಟ್ ಆಗಿ ಬಂದಿರುವ 16 ಸ್ಪರ್ಧಿಗಳ ಪೈಕಿ ಸಾನಿಯಾ ಅಯ್ಯರ್ ಕೂಡ ಒಬ್ಬರು. ಕಿರುತೆರೆ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಇವರು ಮೊಟ್ಟ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಪುಟ್ಟಗೌರಿ ಎಂಬ ಧಾರಾವಾಹಿಯಲ್ಲಿ ಬಾಲಕಲಾವಿದೆಯಾಗಿ ನಟನೆ ಮಾಡುತ್ತಾರೆ. ಬಾಲ್ಯ ವಿವಾಹ ಮಾಡುವುದು ತಪ್ಪು ಈ ರೀತಿ ಮಾಡುವುದರಿಂದ ಎಷ್ಟೆಲ್ಲಾ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬ ವಿಚಾರವನ್ನು ಮುಖ್ಯ ಭೂಮಿಕೆಯಾಗಿ ಇಟ್ಟುಕೊಂಡು ಈ ಧಾರಾವಾಹಿಯನ್ನು ಮೂಡಿಬರುತ್ತದೆ.
ಪುಟ್ಟಗೌರಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದಂತಹ ಖ್ಯಾತಿ ಸಾನ್ಯಾ ಅಯ್ಯರ್ ಅವರಿಗೆ ದೊರೆಯುತ್ತದೆ. ಸಾನ್ಯಾ ಅಯ್ಯರ್ ಅವರ ತಾಯಿ ದೀಪಾರವರೂ ಕೂಡ ಕಿರುತರೆ ಕಲಾವಿದೆ, ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ, ರಂಗಭೂಮಿಯಲ್ಲೂ ಕೂಡ ಬಣ್ಣ ಹಚ್ಚಿದ್ದಾರೆ, ಇನ್ನು ಸಿನಿಮಾದಲ್ಲಿಯೂ ಕೂಡ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ತಾಯಿಯ ಪ್ರತಿಭೆಯೇ ಮಗಳಿಗೂ ಕೂಡ ಬಳುವಳಿಯಾಗಿ ಬಂದಿದೆ ಅಂತ ಹೇಳಬಹುದು.
ಪುಟ್ಟಗೌರಿ ಪಾತ್ರದಿಂದ ಹೊರ ಬಂದ ನಂತರ ಸಾನ್ಯಾ ಅವರು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ನೀಡುತ್ತಾರೆ, ತದನಂತರ ಇವರು ಕಾಣಿಸಿಕೊಂಡಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಡ್ಯಾನ್ಸಿಂಗ್ ಶೋನಲ್ಲಿ. ಸಾನ್ಯಾ ಕೇವಲ ನಟನೆಯಲ್ಲಿ ಮಾತ್ರ ಕರಗತ ಪಡೆದುಕೊಂಡಿರಲಿಲ್ಲ ಇದಕ್ಕಿಂತಲೂ ಹೆಚ್ಚಾಗಿ ಡಾನ್ಸ್ ಮಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದರು. ಡಾನ್ಸ್ ಅಂದರೆ ಸಾನ್ಯಾ ಅವರಿಗೆ ಬಹಳನೇ ಕ್ರೇಜ್, ಇದನ್ನು ವೃತ್ತಿಪರ ಹವ್ಯಾಸವಾಗಿ ಬದಲಾಯಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಸಾನ್ಯಾ ಅಯ್ಯರ್ ಅವರು ತಮ್ಮ ಬಿಡುವಿನ ಸಮಯದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ರಿಲ್ಸ್ ಮಾಡುವ ಮೂಲಕ ಹೆಚ್ಚು ಜನಮನ್ನಣೆಯನ್ನು ಗಳಿಸಿಕೊಂಡಿದ್ದಾರೆ. ಇನ್ನು ಇವರ ಡಾನ್ಸ್ ನೋಡಿದರೆ ಫಿದಾ ಆಗದವರೆ ಇಲ್ಲ ಅಂತ ಹೇಳಬಹುದು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚಿಗಷ್ಟೇ ಸಾನ್ಯಾ ಅಯ್ಯರ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದಂತಹ ವಿಡಿಯೋ ಒಂದು ವೈರಲ್ ಆಗಿದ್ದು ಸಾವಿರಾರು ಲೈಕ್ಸ್ ಮತ್ತು ವೀವ್ಸ್ ಬಂದಿದೆ.
ಸಾನಿಯಾ ಅಯ್ಯರ್ ಅವರ ಈ ಕ್ಯೂಟ್ ಡ್ಯಾನ್ಸ್ ನೋಡಿದರೆ ಎಂಥವರಾದರೂ ಕೂಡ ಮೆಚ್ಚಿಕೊಳ್ಳುತ್ತಾರೆ. ಸಾನ್ಯಾ ಅಯ್ಯರ್ ಅವರು ಮಾಡಿದಂತಹ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ, ಈ ವಿಡಿಯೋ ನೋಡಿದಂತಹ ನಟಿಗರು ಈಕೆಯ ಪ್ರತಿಭೆಯನ್ನು ನೋಡಿ ಹುಬ್ಬೇರಿಸಿದ್ದಾರೆ. ಇನ್ನು ಓ ಟಿ ಟಿ ಯಲ್ಲಿ ಪ್ರಾರಂಭವಾದ ಬಿಗ್ ಬಾಸ್ ಮನೆಗೆ ಬಂದಿರುವ ಸಾನ್ಯಾ ಅಯ್ಯರ್ ಅವರು ತಮ್ಮ ಜೀವನದ ಬಹುಪಾಲು ಘಟನೆಗಳನ್ನು ಹೇಳಿಕೊಂಡಿದ್ದಾರೆ.
ಅದರಲ್ಲಿಯೂ ಕೂಡ ತನ್ನ ಮಲ ತಂದೆಯೇ ತನ್ನ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದರು. ಇದಾದ ನಂತರ ನಂಬರ್ ಗುರೂಜಿಯವರಿಗೆ ಲವ್ ಪ್ರಪೋಸ್ ಮಾಡುವುದರ ಮೂಲಕವೂ ಕೂಡ ಸುದ್ದಿಯಲ್ಲಿ ಇದ್ದರು. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಕಂಟೆಸ್ಟೆಂಟ್ಗಳ ಪೈಕಿ ಸಾನ್ಯಾ ಅವರು ಕೂಡ ಒಬ್ಬರು. ವಯಸ್ಸು ಚಿಕ್ಕದಾದರೂ ಕೂಡ ಬಹಳ ಚಾಲಾಕಿ ಇದ್ದಾರೆ, ಈ ಕಾರಣಕ್ಕಾಗಿ ಬಿಗ್ ಬಾಸ್ ಮನೆಯಲ್ಲಿ ತುಂಬಾ ಸ್ಮಾರ್ಟ್ ಆಗಿ ಗೇಮ್ ಆಡುತ್ತಿದ್ದಾರೆ, ಬಿಗ್ ಬಾಸ್ ಗೆಲ್ಲುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.
ಅವರ ಡ್ಯಾನ್ಸ್ ವಿಡಿಯೊ ಕೆಳಗಿದೆ ನೊಡಿ…