‘ಪುಷ್ಪ’ ಮೂವೀ ಸ್ಟೈಲ್‍ನಲ್ಲಿ ಗಂಡನ ಕುತ್ತಿಗೆ ಕೊಯ್ದ ಪತ್ನಿ…

CINEMA/ಸಿನಿಮಾ

ತೆಲಂಗಾಣ: ‘ಪುಷ್ಪ’ ಸಿನಿಮಾದಲ್ಲಿ ಮಹಿಳೆ ತನ್ನ ಪತಿಯನ್ನು ಕುತ್ತಿಗೆ ಕೊಯ್ದಿರುವ ಪ್ರಸಂಗವಿತ್ತು. ಅದೇ ರೀತಿ ಇಲ್ಲೊಂದು ಮಹಿಳೆ ಪತಿಯ ಕುತ್ತಿಗೆಯನ್ನು ಬ್ಲೇಡ್‍ನಿಂದ ಕೊಯ್ದಿರುವ ಘಟನೆ ತೆಲಂಗಾಣದ ಹನಮಕೊಂಡ ಜಿಲ್ಲೆಯಲ್ಲಿ ನಡೆದಿದೆ.

23 ವರ್ಷದ ಎಂ.ಅರ್ಚನಾ ಯಾವುದೇ ಕಾರಣವಿಲ್ಲದೆ ಬ್ಲೇಡ್‍ನಿಂದ ತನ್ನ ಪತಿಯ ಕತ್ತು ಸೀಳಿದ್ದಾಳೆ. ಕಲ್ಲು ಪುಡಿ ಮಾಡುವ ಘಟಕದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ರಾಜು(26) ಅವರನ್ನು ಅರ್ಚನಾ ವಿವಾಹವಾಗಿದ್ದರು. ಯಾವುದೇ ಕಾರಣವಿಲ್ಲದೇ ರಾಜು ರೂಮ್‍ನಲ್ಲಿ ಇರುವಾಗ ಬ್ಲೇಡ್‍ನಿಂದ ಕುತ್ತಿಗೆ ಕೊಯ್ದಿದ್ದಾಳೆ. ಆದರೆ ರಾಜುವಿಗೆ ಯಾವುದೇ ಪ್ರಾಣಪಾಯವಾಗಿಲ್ಲ.

ನಡೆದಿದ್ದೇನು?
ದಂಪತಿ ದಾಮೆರ ಮಂಡಲದ ಪಸರಗೊಂಡ ಗ್ರಾಮದಲ್ಲಿ ವಾಸವಿದ್ದರು. ರಾಜು ಕೆಲಸ ಮುಗಿಸಿಕೊಂಡು ಮನೆಗೆ ಬಂದು ರೂಮ್‍ನಲ್ಲಿ ಮಲಗಿಕೊಂಡಿದ್ದಾನೆ. ಈ ವೇಳೆ ಅರ್ಜನಾ ಬ್ಲೇಡ್‍ನಿಂದ ರಾಜು ಕುತ್ತಿಗೆ ಕೊಯ್ದಿದ್ದಾಳೆ. ರೂಮ್‍ನಿಂದ ಕಿರುಚಾಟ ಕೇಳಿಬಂದಿದ್ದು, ಕುಟುಂಬಸ್ಥರು ಮತ್ತು ಸ್ಥಳೀಯರು ಧಾವಿಸಿದ್ದಾರೆ. ಪರಿಣಾಮ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ರಾಜುನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ರಾಜು ಪ್ರಾಣಪಾಯದಿಂದ ಪರಾಗಿದ್ದು, ಕುತ್ತಿಗೆಗೆ ಆರು ಹೊಲಿಗೆ ಹಾಕಲಾಗಿದೆ.

ನಾವು 'ಪುಷ್ಪ' ಸಿನಿಮಾ ನೋಡೊಲ್ಲ ಎಂದ ಕನ್ನಡಿಗರು...ಕಾರಣ ಕೇಳಿ ಚಿತ್ರತಂಡಕ್ಕೆ  ಶುರುವಾಯ್ತು ಪೀಕಲಾಟ - Namma Kannada Suddi

ತನಿಖೆಯಲ್ಲಿ ತಿಳಿದಿದ್ದೇನು?
ಅರ್ಚನಾಳನ್ನು ಪೊಲೀಸರು ಗಂಟೆಗಟ್ಟಲೆ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆ, ನನ್ನ ಪತಿಯೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು ಅವನನ್ನು ಸಂಪೂರ್ಣವಾಗಿ ಒಪ್ಪಿಕೊಂಡೆ ಮದುವೆ ಮಾಡಿಕೊಂಡಿದ್ದೇನೆ. ಆದರೆ ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ತಿಳಿದಿಲ್ಲ ಎಂಬ ಹೇಳಿಕೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

ಶ್ಯಾಂಪೇಟ್ ಸರ್ಕಲ್ ಪೊಲೀಸರಿಗೆ ಬಿ.ಶ್ರೀನಿವಾಸ್ ಅವರು ಮಹಿಳೆ ಹೇಳಿಕೆ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದು, ಅರ್ಚನಾಗೆ ರಾಜುವನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಅದಕ್ಕೆ ಆಕೆ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಶಂಕಿಸಿದ್ದಾರೆ.

ಮದುವೆಯಾಗಿ 20 ದಿನದ ಬಳಿಕ ಅತ್ತೆ ಮನೆ ಸೇರಿದ್ಳು
ಅರ್ಚನಾ ಮದುವೆಯಾದ 20 ದಿನಗಳ ನಂತರ ತನ್ನ ಅತ್ತೆಯ ಮನೆಗೆ ಬಂದಿದ್ದಳು. ಆರಂಭದಲ್ಲಿ ಅರ್ಚನಾಗೆ ರಾಜು ಇಷ್ಟವಿರಲಿಲ್ಲ, ಆದರೂ ಆಕೆ ರಾಜುನನ್ನು ಮದುವೆಯಾಗಿದ್ದಳು. ಆದರೆ ವಿಚಾರಣೆ ವೇಳೆ ಅರ್ಚನಾ ಮನಸೋಇಚ್ಛೆ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಈ ಸತ್ಯಾಸತ್ಯತೆ ತಿಳಿಯಲು ನಾವು ಎರಡೂ ಕುಟುಂಬಗಳ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.ಮಾನಸಿಕ ಅಸ್ವಸ್ಥನಂತೆ ನಟಿನೆ
ರಾಜು ಅವರ ಸಹೋದರ ಎಂ.ಶ್ರೀಶೈಲಂ, ಅರ್ಚನಾ ಮಾನಸಿಕ ಅಸ್ವಸ್ಥ ವ್ಯಕ್ತಿಯಂತೆ ನಟಿಸುತ್ತ ಈ ಕೃತ್ಯ ಮಾಡಿದ್ದಾರೆ. ಆಕೆಗೆ ಮಾನಸಿಕವಾಗಿ ಯಾವುದೇ ತೊಂದರೆಯಿಲ್ಲ. ಕಳೆದ ಕೆಲವು ದಿನಗಳಿಂದ ಆಕೆ ನಮ್ಮೊಂದಿಗೆ ಚೆನ್ನಾಗಿಯೇ ಇದ್ದಳು ಎಂದು ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳದ ಆರೋಪದ ಕುರಿತು ಅರ್ಚನಾ ಸಹೋದರ ಟಿ.ರಾಜು ಕುಮಾರ್ ಅವರನ್ನು ಪೊಲಿಸರು ಪ್ರಶ್ನಿಸಿದಾಗ, ಆ ರೀತಿಯ ಯಾವುದೇ ಸಮಸ್ಯೆ ಇರಲಿಲ್ಲ. ತನ್ನ ಗಂಡನ ಮೇಲೆ ಹಲ್ಲೆ ಮಾಡಲು ಕಾರಣವೇನು ಎಂಬುದರ ಬಗ್ಗೆ ಅವಳು ನಮಗೂ ಹೇಳುತ್ತಿಲ್ಲ. ಅವಳು ರಾಕುನನ್ನು ಮದುವೆಯಾಗಲು ಒಪ್ಪಿದ ಬಳಿಕವೇ ಮದುವೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ >>>  ಚಿಕ್ಕ ಪುಟ್ಟ ಬಟ್ಟೆಗಳನ್ನು ಹಾಕಿಕೊಳ್ಳದೆ ಇರೋದಕ್ಕೆ ಆ ದಿನ ನಡೆದ ಕೆಟ್ಟ ಘಟನೆಯೇ ಕಾರಣ ಎಂದು ಕಣ್ಣೀರು ಹಾಕಿದ ನಟಿ ಸಾಯಿ ಪಲ್ಲವಿ

 

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...