Dance-on-pushpa-saami-saami-son

ಇನ್ನು ತಗ್ಗಿಲ್ಲ ಪುಷ್ಪ ಕ್ರೇಜ್! ಸಾಮಿ ಸಾಮಿ ಹಾಡಿಗೆ ಅಮೆರಿಕಾದ ರಸ್ತೆಗಳಲ್ಲಿ ಎರ್ರಾಬಿರ್ರಿ ಡ್ಯಾನ್ಸ್ ಮಾಡಿದ ಯುವತಿ!

Entertainment/ಮನರಂಜನೆ

ಪುಷ್ಪ ಅಂದ್ರೆ ಫ್ಲವರ್ ಅಲ್ಲ ಫೈಯರ್ ಮತ್ತು ತಗ್ಗೋದೇ ಇಲ್ಲ ಎನ್ನುವಂತಹ ಡೈಲಾಗ್ ಗಳು ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ನಂತರ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಸಿನಿಮಾದ ಊಂ ಅಂತೀಯ ಮಾವ, ಉಹೂ ಅಂತೀಯಾ ಎನ್ನುವ ಐಟಂ ಹಾಡಂತೂ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಅಲ್ಲದೇ ಸಾಮಿ ಸಾಮಿ ಮತ್ತು ಶ್ರೀವಲ್ಲಿ ಹಾಡುಗಳು ಕೂಡಾ ಟ್ರೆಂಡಿಂಗ್ ಆಗಿದ್ದವು. ಅವುಗಳಿಗೆ ಹೆಜ್ಜೆ ಹಾಕದವರೇ ಇಲ್ಲ ಅನ್ನಬಹುದು, ಸಿನೆಮಾ ಮಂದಿಯಿಂದ ಹಿಡಿದು ಕ್ರಿಕೇಟಿಗರವರೆಗೆ ಸಾಷ್ಟು ಸೆಲೆಬ್ರಿಟಿಗಳು ಪುಷ್ಪ ಸಿನೆಮಾದ ಹಾಡಿಗೆ ಹೆಜ್ಜೆ ಹಾಕಿದ್ದುಂಟು.

ಪುಷ್ಪ ಸಿನಿಮಾದ ನಂತರ ಐಕಾನ್ ಸ್ಟಾರ್ ಖ್ಯಾತಿಯ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಚಾರ್ಮ್ ಮತ್ತು ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಪುಷ್ಪಾ ಒಟಿಟಿಯಲ್ಲಿ ಬಿಡುಗಡೆಯಾದಾಗಲೂ ತನ್ನ ಸಾಮರ್ಥ್ಯ ಏನು ಎನ್ನುವುದನ್ನು ಸಾಬೀತು ಮಾಡಿದೆ. ಈಗ ಸದ್ಯಕ್ಕೆ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಮಾತ್ರ ಪುಷ್ಪ ಸಿನಿಮಾದ ಎರಡನೇ ಭಾಗಕ್ಕಾಗಿ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ.

ಸಿನಿಮಾ ಪಡೆದ ಯಶಸ್ಸು ಹಾಗೂ ದೊಡ್ಡ ಮಟ್ಟದ ಜನಪ್ರಿಯತೆಯಿಂದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಪುಷ್ಪ ಸಿನಿಮಾದ ಸೂಪರ್‌ ಹಿಟ್ ಸಾಂಗ್ ಸಾಮಿ ಸಾಮಿ ಹಾಡಿನ ಅಬ್ಬರ ಇನ್ನೂ ಮುಂದುವರೆದಿದೆ. ಇದಕ್ಕೆ ಸಾಕ್ಷಿ ಎನ್ನುವ ಹಾಗೆ ನ್ಯೂಯಾರ್ಕ್‌ನ ಖ್ಯಾತ ನರ್ತಕಿ ವಿನಿತಾ ಹಜಾರಿ ಅವರ ಹೊಸ ಡ್ಯಾನ್ಸ್ ವಿಡಿಯೋ ಸಾಕ್ಷಿಯಾಗಿದ್ದು, ಈ ವೀಡಿಯೋ ಈಗ ಜೋರಾದ ಸದ್ದನ್ನು ಮಾಡುತ್ತಿದೆ.

ಈ ವಿಡಿಯೋದಲ್ಲಿ ವಿನಿತಾ ಹಜಾರಿ ಅವರು ಪುಷ್ಪ ಅವರ ಸಾಮಿ ಸಾಮಿ ಹಾಡಿಗೆ ಅಮೆರಿಕದ ಬೀದಿಗಳಲ್ಲಿ ಬರಿಗಾಲಿನಲ್ಲಿ ನೃತ್ಯ ಮಾಡುವುದನ್ನು ನಾವು ನೋಡಬಹುದು. ಸಿನಿಮಾದಲ್ಲಿ ಈ ಹಾಡನ್ನು ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಮೇಲೆ ಚಿತ್ರಿಸಲಾಗಿದೆ. ಇದೇ ಹಾಡಿಗೆ ಈಗ ವಿನಿತಾ ಅವರು ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ವಿನೀತಾ ಅವರು ಬಹಳ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದು, ಅವರ ಸ್ಟೆಪ್ಸ್ ಕೂಡಾ ಬಹಳ ವಿಭಿನ್ನವಾಗಿದ್ದು, ಜನರನ್ನು ಅದು ಆಕರ್ಷಿಸುತ್ತಿದೆ.

ಆಕೆಯ ಡ್ರೆಸ್ ಸೆನ್ಸ್ ಬಗ್ಗೆ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ವಿನಿತಾ ನೃತ್ಯದ ಬಗ್ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ಸಾಗಿದ್ದಾರೆ. ಬಹಳ ರೋಚಕ ಎನಿಸುವ ಈ ಡ್ಯಾನ್ಸ್ ವೀಡಿಯೋದಲ್ಲಿ ವಿನೀತಾ ಅವರ ಅವರ ಡ್ರೆಸ್ ಸೆನ್ಸ್‌ ಹೈಲೈಟ್ ಆಗಿದೆ. ಇನ್ನು ನೃತ್ಯ ಸಂಯೋಜನೆಯ ಬಗ್ಗೆ ಎರಡು ಮಾತಿಲ್ಲ. ಅಭಿಮಾನಿಗಳು ಈ ಎಲ್ಲವನ್ನು ಸಹಾ ಬಹಳ ಸೂಕ್ಷ್ಮವಾಗಿ ಗಮನಿಸಿದ್ದು, ಎಲ್ಲದರ ಬಗ್ಗೆಯೂ ಅವರು ತಮ್ಮ ಪ್ರೀತಿಯನ್ನು ಹಾಗೂ ಮೆಚ್ಚುಗೆಯನ್ನು ಹರಿಸಿದ್ದಾರೆ.

ಪುಷ್ಪ 2 ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತೆಲುಗು ಮಾದ್ಯಮಗಳು ವರದಿ ಮಾಡಿವೆ. ಪುಷ್ಪ 2 ಸಿನಿಮಾವನ್ನು ಇನ್ನಷ್ಟು ಅದ್ಭುತವಾದ ರೀತಿಯಲ್ಲಿ ತೆರೆಯ ಮೇಲೆ ತರಲು ಚಿತ್ರದ ನಿರ್ದೇಶಕ ಸುಕುಮಾರ್ ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಬಹುಶ ಮುಂದಿನ ವರ್ಷ ಪುಷ್ಪ 2 ತೆರೆ ಕಾಣಬಹುದು, ಅದರಲ್ಲಿ ಅದೆಷ್ಟು ಹಾಡು – ಡೈಲಾಗ್ ಟ್ರೆಂಡ್ ಆಗುತ್ತವೆಯೋ ನೋಡಬೇಕು.

ಆ ವಿಡಿಯೊ ಕೆಳಗಿದೆ ನೋಡಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...