puneeth-rajkumar-getting

ಜಿಮ್ ವರ್ಕ್ ಔಟ್ ಗೆ ಹೋಗುವಾಗ ಓ ಹಾಯ್ ಎಂದು ಕಾರಿನಿಂದ ಇಳಿದ ಅಶ್ವಿನಿ,ಕ್ಯೂಟ್ ವಿಡಿಯೋ.

Entertainment/ಮನರಂಜನೆ

ಒಂದು ಕಾಲದಲ್ಲಿ ಕೇವಲ ಪುನೀತ್ ರಾಜಕುಮಾರ್ (Puneeth Rajkumar) ಅವರು ಮಾತ್ರ ಮೀಡಿಯಾ ಎದುರು ಕಾಣಿಸಿಕೊಳ್ಳುತ್ತಿದ್ದರು ಅವರ ಹಿಂದಿನ ದೊಡ್ಡ ಶಕ್ತಿಯಾಗಿ ಕಾಣಿಸಿಕೊಂಡಿದ್ದ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ಕೇವಲ ತೆರೆಮರೆಯಲ್ಲಿ ಮಾತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದ ನಿಜವಾದ ಪವರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಪುನೀತ್ ರಾಜಕುಮಾರ್ ಅವರ ಕಾಲ ನಂತರ ದೊಡ್ಮನೆಯ ಪ್ರತಿಯೊಂದು ಜವಾಬ್ದಾರಿಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ನಿರ್ವಹಿಸುತ್ತಿದ್ದಾರೆ.

ಪುನೀತ್ (Puneeth) ರಾಜಕುಮಾರ್ ಮಾಡಿಕೊಂಡ ಬರುತ್ತಿದ್ದ ಎಲ್ಲಾ ಸಿನಿಮಾ ಹಾಗೂ ಸಮಾಜಸೇವೆಯ ಕಾರ್ಯಗಳನ್ನು ಅವರ ಪತ್ನಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರೇ ಎಲ್ಲ ಜವಾಬ್ದಾರಿಯನ್ನು ಮುಂದೆ ನಿಂತು ನಿರ್ವಹಿಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಹೆಮ್ಮೆಪಡುವಂತಹ ವಿಚಾರವಾಗಿದೆ. ಇನ್ನು ಇತ್ತೀಚಿಗಷ್ಟೇ ಅವರ ಸಿಂಪ್ಲಿಸಿಟಿಯನ್ನು ತೋರಿಸುವಂತಹ ವಿಡಿಯೋ ಒಂದು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.

ಒಬ್ಬ ಸ್ಟಾರ್ ನಟ ಅಥವಾ ದೊಡ್ಮನೆಯ ಸೊಸೆ ಎನ್ನುವ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಅಶ್ವಿನಿ ಪುನೀತ್ ರಾಜಕುಮಾರ್ ಎಲ್ಲರ ಜೊತೆಗೂ ಕೂಡ ಅತ್ಯಂತ ನಮ್ರವಾಗಿ ನಡೆದುಕೊಳ್ಳುತ್ತಿರುವುದು ಎಲ್ಲರ ಮನ ಗೆದ್ದಿದ್ದು ಇತ್ತೀಚಿಗಷ್ಟೇ ಇದು ಅಪ್ಪು (Appu) ಅವರ ಜನ್ಮ ದಿನಾಚರಣೆಯ ಪ್ರಯುಕ್ತವಾಗಿ ನಡೆದಿರುವಂತಹ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಹೌದು ಮಿತ್ರರೇ ಅಪ್ಪು (Appu) ಹೆಸರಿನಲ್ಲಿ ನಡೆದಿರುವಂತಹ ಮ್ಯಾರಥಾನ್ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರೆ ಉದ್ಘಾಟನೆ ಮಾಡಿ ಮ್ಯಾರಥಾನ್ ಓಟದಲ್ಲಿ ಕೂಡ ಭಾಗವಹಿಸಿದ ನಂತರ ತಮ್ಮ ಕಾರಿನಲ್ಲಿ ಮನೆಗೆ ಹೊರಡುವ ಸಿದ್ಧತೆಯಲ್ಲಿ ಇರಬೇಕಾದರೆ ಅವರನ್ನು ಮಾತನಾಡಿಸಲು ಬಂದಂತಹ ವ್ಯಕ್ತಿಗಳಿಗಾಗಿ ಕಾರಿನಿಂದ ಇಳಿದು ಫೋಟೋಗೆ ಪೋಸ್ ನೀಡಿ ಅವರ ಯೋಗ ಕ್ಷೇಮವನ್ನು ವಿಚಾರಿಸಿ ನಂತರ ಹೊರಡುತ್ತಾರೆ. ಇದು ಅವರು ಪ್ರತಿಯೊಬ್ಬರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ರೀತಿಯನ್ನು ತೋರಿಸುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.