ಸೆಲ್ಫಿ ಕೇಳಲು ಬಂದ ಜೂನಿಯರ್ ಪುನೀತ್ ರಾಜಕುಮಾರ್ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾಡಿದ್ದೇನು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ್ಲಾ ಆಗಲೇ ಹೋಗಿ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಳೆದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಂತರ ಅವರ ಎಲ್ಲಾ ಕಾರ್ಯಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದೊಡ್ಮನೆಯ ಹೆಮ್ಮೆಯ ಸೊಸೆಯಾಗಿ ಮುಂದೇ ನಿಂತು ನಿರ್ವಹಿಸುತ್ತಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಟೆಲಿವಿಷನ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ನೀಡುವಂತಹ ಹೆಲ್ತ್ ಕಾರ್ಡ್ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದ ಹಿರಿಯ ಹಾಗೂ ಕಿರಿಯ ಕಲಾವಿದರ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Junior rajkumar and ashwini puneet rajkumar

ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತೆ ಕಾಣಿಸಿಕೊಳ್ಳುವಂತಹ ಜೂನಿಯರ್ ಪುನೀತ್ ರಾಜಕುಮಾರ್ ಒಬ್ಬರು ವೇದಿಕೆ ಮೇಲೆ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಸೆಲ್ಫಿ ಪಡೆಯಲು ಪ್ರಯತ್ನಿಸುತ್ತಿದ್ದಿದ್ದು ಕ್ಯಾಮೆರಾ ಕಣ್ಣಿಗೆ ಕಂಡುಬಂದಿತು. ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿದ ಕಾರ್ಯ ನಿಜಕ್ಕೂ ಕೂಡ ಎಲ್ಲರ ಗಮನವನ್ನು ಸೆಳೆಯಿತು.

ತಾನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಂಡತಿ ಅಥವಾ ದೊಡ್ಡ ಮನೆಯ ಸೊಸೆ ಎಂಬುದನ್ನು ಎಲ್ಲೂ ಕೂಡ ಅಹಂಕಾರಿಕೆಯನ್ನು ತೋರಿಸಿಕೊಳ್ಳದೆ ವಿನಯವಾಗಿಯೇ ನಿಂತು ಜೂನಿಯರ್ ಪುನೀತ್ ರಾಜಕುಮಾರ್ ಅವರಿಗೆ ಸೆಲ್ಫಿ ನೀಡುತ್ತಾರೆ ಹಾಗೂ ನಗುನಗುತ್ತಲೆ ಅವರನ್ನು ಕಳುಹಿಸಿ ಕೊಡುತ್ತಾರೆ. ನಿಜಕ್ಕೂ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ನಡೆದುಕೊಳ್ಳುತ್ತಿರುವ ರೀತಿ ಹಾಗೂ ಅವರ ಜವಾಬ್ದಾರಿಯನ್ನು ಅರಿತು ಅವರು ಮಾಡುತ್ತಿರುವ ಕೆಲಸಗಳು ಪ್ರಶಂಸಾರ್ಹವಾಗಿದೆ ಎಂದು ಹೇಳಬಹುದಾಗಿದೆ.

 

You might also like

Comments are closed.