ಅದೆಷ್ಟೋ ಪರಭಾಷಾ ನಟಿಯರು ನಮ್ಮ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸಿ ಹೋಗಿದ್ದಾರೆ. ಬಾಲಿವುಡ್ ನಟಿಯರು ಕೂಡ ನಮ್ಮ ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ಕನ್ನಡಿಗರ ಮನ ಗೆದ್ದಿದ್ದಾರೆ. ಇದೀಗ ಬಾಲಿವುಡ್ ನಟಿ ಪೂಜಾ ಹೆಗ್ಡೆ ಸ್ಯಾಂಡಲ್ ವುಡ್ ನತ್ತ ಕಾಲಿಡುತ್ತಿದ್ದಾರೆ ಅನ್ನುವ ಸುದ್ದಿ ಹರಡುತ್ತಿದೆ. ಹೌದು, ಪೂಜಾ ಹೆಗ್ಡೆ ಕರಾವಳಿ ಬೆಡಗಿ ಆಗಿದ್ದರೂ ಕರ್ನಾಟಕದ ಸಿನಿಮಾಗಳಲ್ಲಿ ಒಂದು ಬಾರಿಯೂ ನಟಿಸಿಲ್ಲ. ಪೂಜಾ ಹೆಗ್ಡೆ ಬೆಳೆದಿದೆಲ್ಲಾ ಮುಂಬೈ ನಲ್ಲಿ.
ಹಾಗಾಗಿ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇವರು 2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ್ದರು. ಇವರಿಗೆ ಬಿಗ್ ಬ್ರೇಕ್ ನೀಡಿದ ಚಿತ್ರ ಎಂದರೆ 2014 ರಲ್ಲಿ ತೆರೆಕಂಡ `ಒಕ ಲೈಲಾ ಕೋಸಂ’ ಎಂಬ ತೆಲಗು ಚಿತ್ರ. ನಂತರ ಹೃತಿಕ್ ರೋಷನ್ ಜೊತೆ `ಮೊಹೆಂಜದಾರೋ’ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ನಂತರ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆದ ಪೂಜಾ `ದುವ್ವಾಡ ಜಗನ್ನಾಥಂ’, ಅರವಿಂದ ಸಮೇತ’ `ಮಹರ್ಷಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಇವೆಲ್ಲಾ ಪೂಜಾ ಹೆಗ್ಡೆಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಆದರೆ ಇತ್ತೀಚೆಗೆ ಯಾಕೋ ಪೂಜಾ ಹೆಗ್ಡೆ ಹ್ಯಾಟ್ರಿಕ್ ಸೋಲು ಕಾಣುತ್ತಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಅವರ ನಟನೆಯ ಮೂರು ಚಿತ್ರಗಳು ರಿಲೀಸ್ ಆಗಿವೆ. ಆದರೆ, ಯಾವ ಚಿತ್ರ ಕೂಡ ಅವರಿಗೆ ಯಶಸ್ಸನ್ನು ಕೊಟ್ಟಿಲ್ಲ. ಕಳೆದ ಮಾರ್ಚ್ 11ರಂದು ‘ರಾಧೆ ಶ್ಯಾಮ್’ ಸಿನಿಮಾ ತೆರೆಗೆ ಬಂತು. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು.
ಆದರೆ, ಸಿನಿಮಾ ಮಕಾಡೆ ಮಲಗಿ ಸೋಲು ಕಂಡಿತ್ತು. ಅದಾದ ನಂತರ ಏಪ್ರಿಲ್ 13ರಂದು ತೆರೆಗೆ ಬಂದಿದ್ದು ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಚಿತ್ತ. ವಿಜಯ್ ಜೊತೆ ನಟಿಸಿದ್ದರು ಪೂಜಾ ಹೆಗ್ಡೆ. ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್ ನಿರಾಸೆಗೊಂಡರು. ಹಾಗೆಯೇ ಏಪ್ರಿಲ್ 29ರಂದು ತೆರೆಗೆ ಬಂದ ‘ಆಚಾರ್ಯ’ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಲ್ಕು ದೃಶ್ಯಗಳಿಗೆ ಮಾತ್ರ ಸೀಮಿತವಾದರು. ಹಳ್ಳಿ ಹುಡುಗಿ ಪಾತ್ರದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು.
ಆದರೆ ಈ ಚಿತ್ರ ಕೂಡ ಸೋಲು ಕಂಡಿತು. ಹೀಗೆ ಹ್ಯಾಟ್ರಿಕ್ ಸೋಲು ಕಂಡ ಪೂಜಾ ಹೆಗ್ಡೆ ಬಗ್ಗೆ ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿದೆ. ಆಕೆಯದ್ದು ಐರನ್ ಲೆಗ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇದೇ ವೇಳೆ ಪೂಜಾ ಹೆಗ್ಡೆ ಸ್ಯಾಂಡಲ್ ವುಡ್ ಗೆ ಬರ್ತಿದ್ದಾರೆ ಅನ್ನುವ ಸುದ್ದಿ ಭಾರೀ ಜೋರಾಗಿ ಕೇಳಿ ಬರುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಾಯಕಿ ಆಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.
ಈ ಸುದ್ದಿ ಟಾಲಿವುಡ್ ನಲ್ಲಿ ಮಾತ್ರ ಹರಿದಾಡುತ್ತಿದ್ದು ಸ್ಯಾಂಡಲ್ ವುಡ್ ನಲ್ಲಿ ಯಾರೂ ಮಾತನಾಡಿಲ್ಲ. ಇನ್ನು ಯಶ್ ಅವರು ಮುಂದೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸಲಿದ್ದಾರೆ, ಹಾಗಾಗಿ ಅಂತಹ ಸಿನಿಮಾಗಳು ಬೇಗ ರಿಲೀಸ್ ಆಗುವುದಿಲ್ಲ. ಅದೇ ರೀತಿ, ಪೂಜಾ ಹೆಗ್ಡೆ ಅವರು ಮಹೇಶ್ ಬಾಬು ತ್ರಿವಿಕ್ರಂ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಸಲ್ಮಾನ್ ಖಾನ್ ಜತೆ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನು, ಜ್ಯೂ.ಎನ್ಟಿಆರ್ ಹಾಗೂ ಕೊರಟಾಲ ಶಿವ ಒಟ್ಟಾಗಿ ಕೆಲಸ ಮಾಡುತ್ತಿರುವ ಸಿನಿಮಾಗೆ ಇವರೇ ನಾಯಕಿ ಆಗುವ ಸಾಧ್ಯತೆ ಇದೆ. ವಿಜಯ್ ದೇವರಕೊಂಡ ನಟನೆಯ ‘ಜೆಜಿಎಂ’ ಚಿತ್ರಕ್ಕೆ ಪೂಜಾ ನಾಯಕಿ ಆಗಿ ಆಯ್ಕೆ ಆದ ಬಗ್ಗೆ ಇತ್ತೀಚೆಗೆ ಘೋಷಣೆ ಆಗಿದೆ. ಹಾಗಾಗಿ ಸಾಲು ಸಾಲು ಸಿನಿಮಾ ಇರುವಾಗ ಪೂಜಾ ಹೆಗ್ಡೆ ಸ್ಯಾಂಡಲ್ ವುಡ್ ಕಡೆ ಬರುವುದು ಅನುಮಾನವೇ ಸರಿ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.