2006 ರ ಕೊನೆಯಲ್ಲಿ ತೆರೆಕಂಡ ಮುಂಗಾರು ಮಳೆ ಸಿನಿಮಾ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿತ್ತು. 50 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸೌತ್ ಸಿನಿಮಾ ಆಗಿತ್ತು. ಮುಂಗಾರು ಮಳೆ ಸಿನಿಮಾ ಮೂಲಕ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರ ಅದೃಷ್ಟ ಬದಲಾಗಿತ್ತು. ಹಾಗೂ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕಿಯ ಎಂಟ್ರಿ ಸಹ ಆಗಿತ್ತು. ನಟಿ ಪೂಜಾ ಗಾಂಧಿ ಉತ್ತರ ಭಾರತದಿಂದ ಸ್ಯಾಂಡಲ್ ವುಡ್ ಗೆ ಬಂದಿದ್ದರು.
ಮುಂಗಾರು ಮಳೆ ಸಿನಿಮಾದ ಯಶಸ್ಸಿನಿಂದ ಪೂಜಾ ಗಾಂಧಿ ಅವರಿಗೆ ಗಾಂಧಿನಗರದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು. ಅನಿಸುತಿದೆ ಹಾಡಿನ ಮೂಲಕ ಎಲ್ಲಾ ಹುಡುಗರ ಫೇವರೆಟ್ ಆಗಿದ್ದರು ನಟಿ ಪೂಜಾ ಗಾಂಧಿ. ಕೆಲ ವರ್ಷಗಳ ಕಾಲ ಸ್ಯಾಂಡಲ್ ವುಡ್ ನ ಟಾಪ್ ನಟಿಯಾಗಿದ್ದ ಪೂಜಾ ಗಾಂಧಿ ಅಪ್ಪು, ಸುದೀಪ್, ರವಿಚಂದ್ರನ್ ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದರು. ಆದರೆ ವರ್ಷಗಳು ಕಳೆಯುತ್ತಾ ಇವರ ಬೇಡಿಕೆ ಕಡಿಮೆಯಾಗಿ, ಸಿನಿಮಗಳ್ಚ್ ಸಹ ಕಡಿಮೆ ಆದವು.
ಕೆಲ ಸಮಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಪೂಜಾ 2018 ರಲ್ಲಿ ದಂಡುಪಾಳ್ಯ 2 ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದೀಗ ಮತ್ತೊಂದು ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ. ಈ ಬ್ರೇಕ್ ಸಮಯದಲ್ಲಿ ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಹೊಸ ಉದ್ಯಮ ಶುರು ಮಾಡಿದ್ದಾರೆ ಪೂಜಾ. ಮೆಡಿಕಲ್ ಚೈನ್ ಸಪ್ಲೈ, ವೈದ್ಯಕೀಯ ಪರಿಕರಗಳ ಸರಬರಾಜು ನಡೆಸುತ್ತಿದ್ದಾರೆ. ಇದರ ಮೇಲ್ವಿಚಾರಣೆಯನ್ನು ಅವರೇ ಮಾಡುತ್ತಿದ್ದು, ಸಿನಿಮಾ ಜೊತೆಗೆ ಕಾರ್ಪೊರೇಟ್ ಲೈಫ್ ನಲ್ಲಿ ಸಹ ಸಕ್ರಿಯರಾಗಿದ್ದಾರೆ
ಮದುವೆ ಬಗ್ಗೆ ಮಾತನಾಡಿದ ಪೂಜಾ ಗಾಂಧಿ, ಸಧ್ಯಕ್ಕೆ ನಾನು ಸಿಂಗಲ್ ಆಗಿ ಖುಷಿಯಾಗಿದ್ದೇನೆ, ಮುಂದೆ ಏನಾಗುತ್ತದೆ ನೋಡಬೇಕು, ಹಾಗೇನಾದರೂ ಇದ್ದರೆ ನಾನು ಖಂಡಿತವಾಗಿ ಹೇಳುತ್ತೇನೆ, ಎಲ್ಲರಿಗೂ ತಿಳಿಸಿಯೇ ಮದುವೆ ಆಗುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ ಪೂಜಾ ಗಾಂಧಿ. ಇವರಿಗೆ ಈಗ 37 ವರ್ಷ ಆದರೂ ಇನ್ನು ಮದುವೆಯಾಗಿಲ್ಲ. ದಂಡುಪಾಳ್ಯ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ರು ಪೂಜಾ ಗಾಂಧಿ.