ಯಾರದು ತಪ್ಪು ಯಾರದು ಸರಿ ಅಂತ ನಿರ್ಧರಿಸುವ ಮೊದಲು ನಾವು ನಮ್ಮ ಮಕ್ಕಳಿಗೆ ಹೇಗೆ ಸಂಸ್ಕಾರ ಕೊಡುತ್ತೇವೆ ಅನ್ನೋದು ಮುಖ್ಯ. ಯಾರ ಜೊತೆ ಹೇಗೆ ಮಾತಾಡಬೇಕು, ಅಥವಾ ಬೇರೆಯವರೊಂದಿಗೆ ಹೇಗೆ ವರ್ತಿಸಬೇಕು ಎಂದು ಮನೆಯಲ್ಲಿ ದೊಡ್ಡವರು ಕಲಿಸಬೇಕು. ಆ ಸಂಸ್ಕಾರ ನೀಡದೇ ಇದ್ದರೆ ಇಂಥ ಘಟನೆಗಳು ಆಗುವುದು ಸಾಮಾನ್ಯ.
ಸಂಪೂರ್ಷ ವಿಡಿಯೊದಲ್ಲಿ ಆ ಹುಡುಗಿಯ ಭಾಷೆ ನೋಡಿ ಹೇಗಿದೆ, ನೆಟ್ಟಗೆ 20-25 ವಯಸ್ಸು ಕೂಡ ಆಗದ ಅವಳ ಬಾಯಲ್ಲಿ ಒಬ್ಬ ಅಧಿಕಾರಿಯ ಕುರಿತು ಮಾತುಗಳು ಹೇಗಿವೆ ನೋಡಿ, ಅದಕ್ಕೇನು ಸಂಸ್ಕಾರದ ಕೊರತೆ ಅನ್ನಬೇಕಾ ಅಥವಾ ದುಡ್ಡಿನ ಮಧ ಅನ್ನಬೇಕಾ ಅಥವಾ ಒಣಸೊಕ್ಕು ಅನ್ನಬೇಕಾ ಗೊತ್ತಿಲ್ಲ.
ನಿಮಗೆ ಪೋಲಿಸರ ಮೇಲೆ, ಅದರಲ್ಲೂ ಟ್ರಾಫಿಕ್ ಪೋಲಿಸರ ಮೇಲೆ ಸಿಟ್ಟಿದೆಯಾದ್ದರಿಂದ ನೀವೂ ಪೋಲಿಸರಿಗೆ ಬೈಯ್ಯಬಹುದು, ಆದರೆ ಅದನ್ನು ಹೊರಗಿಟ್ಟು ನೋಡಿದರೆ ಮಂಡ್ಯದ ಈ ಹುಡುಗಿಯ ಭಾಷೆ ಖಂಡಿತ ಸಹಿಸಲಸಾಧ್ಯ.
ಮೊದಲು ಪಿಎಸ್ಐ ಮಾತಾಡಿದ್ದು :
ಸ್ಕೂಟರ್ ನಿಂದ ಇಳಿಯಮ್ಮ, ನಿನ್ನ ಹೆಸರೇನು, ನಿಮ್ ತಂದೆ ಕರೆಸು, ಠಾಣೆಗೆ ಬಾ ಇತ್ಯಾದಿ ಮಾತುಗಳು
ಅದಕ್ಕೆ ಈ ಹುಡುಗಿಯ ಮಾತುಗಳು :
ನನ್ ಗಾಡಿ ಯಾಕ್ ಮುಟ್ತಿಯಾ, ನಾನ್ಯಾಕ ಗಾಡಿ ಕೊಡ್ಲಿ, ಹೇ… ನನ್ ತಂದೆ ಇಲ್ಲ ಇತ್ಯಾದಿಗಳು. ಇವಳ ಏಕವಚನದಿಂದ ಕೋಪಗೊಂಡ ಎಸೈ ಒಂದು ಕಪಾಳಕ್ಕೆ ಬಿಟ್ಟ ಮೇಲೆ,..
ನನ್ ಮೇಲೆ ಕೈ ಮಾಡೋಕೆ ಯಾರೇ ನೀನು, ಯಾವಳೇ ನೀನು ನನಗೆ ಹೊಡೆಯೋಕೆ, ಹೇ ಏನೇ ಮಾಡ್ತಿಯಾ? ರಾಸ್ಕಲ್… ಅನ್ ಏಜುಕೇಟೆಡ್ ಬ್ರೂಟ್, ಪೊಲೀಸ್ ಅಂತೆ ಇವಳು…. ಇತ್ಯಾದಿ ಅಣಿಮುತ್ತುಗಳು. ಆಗ ಪಿಎಸೈ ಮತ್ತೊಂದು ಕೊಟ್ಟರು.
ಅವರಪ್ಪ ಅಮ್ಮ ಮೊದಲೇ ಈ ಕೆಲಸ ಮಾಡಿದ್ದರೆ ಬಹುಶಃ ಮಹಿಳಾ ಪಿಎಸೈ ಈ ಕೆಲಸ ಮಾಡಬೇಕಿರಲಿಲ್ಲ. ವಿಡಿಯೊ ಕೆಳಗಿದೆ ನೋಡಿ…