ಹಣಕಾಸಿನ ಸಮಸ್ಯೆ,ಸಾಲ,ಇನ್ನಿತರ ಏನೇ ಸಮಸ್ಯೆ ಇದ್ದರು ಮನೆಯಲ್ಲೇ ಹರಕೆ ಕಟ್ಟಿ ಸಾಕು 24 ಗಂಟೆಯಲ್ಲಿ ಪರಿಹಾರ ಸಿಗುತ್ತೆ.!

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನಾವು ಪ್ರತಿಯೊಂದು ಮನೆಯಲ್ಲೂ ಕೂಡ ದೇವರ ಪೂಜೆ ಮಾಡುತ್ತೇವೆ. ಮನೆಯಲ್ಲಿ ಕುಲದೈವ, ಇಷ್ಟದೈವದ ಆರಾಧನೆ ಮಾಡಿ ಹರಕೆ ವ್ರತ ಹಬ್ಬ ಎಲ್ಲವನ್ನೂ ಕೂಡ ಆಚರಣೆ ಮಾಡುತ್ತೇವೆ. ಹಾಗೆಯೇ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೂ ಭಗವಂತನ ಸಾಕ್ಷಾತ್ಕಾರವಾಗಿರುವ ಜಾಗಗಳಿಗೂ ಭೇಟಿಕೊಟ್ಟು ದೇವರ ದರ್ಶನ ಪಡೆದು ಬರುತ್ತೇವೆ.

ಸಾಮಾನ್ಯವಾಗಿ ಮನುಷ್ಯ ನಾನು ಎಲ್ಲವನ್ನು ಕೂಡ ಸಾಧಿಸಬಲ್ಲೆ ಎನ್ನುವ ಅಹಂಕಾರದಲ್ಲಿ ಇರುತ್ತಾನೆ. ಆದರೆ ಆತ ನಿರ್ಧರಿಸಿದ 20%ರಷ್ಟು ಕೂಡ ಅವನ ಕೈಯಿಂದ ಸಾಧಿಸಲು ಆಗುವುದಿಲ್ಲ. ಯಾಕೆಂದರೆ ಭಗವಂತನ ಕೃಪಾಕಟಾಕ್ಷ ಇಲ್ಲದೆ ಒಂದು ಹುಲ್ಲುಕಡ್ಡಿ ಕೂಡ ಅಲುಗಾಡುವುದಿಲ್ಲ. ನಮ್ಮ ಯಾವುದೇ ಕಾರ್ಯ ಸಾಧನೆ ಆಗಬೇಕು ಎಂದರೆ ಯಾವುದೇ ಕಷ್ಟ ಪರಿಹಾರವಾಗಬೇಕು ಎಂದರೆ ದೇವರ ಆಶೀರ್ವಾದ ಬೇಕೇ ಬೇಕು.

ಹೀಗೆ ತನಗೆ ಬರುವ ಕಷ್ಟಗಳನ್ನು ಆತ ಪರಿಹಾರ ಮಾಡಿಕೊಳ್ಳಲು ಆಗದೆ ಇದ್ದಾಗ ಆತ ದೇವರನ್ನು ಹರಸಿ ಹೋಗುತ್ತಾನೆ. ನಮ್ಮ ಭರತ ಭೂಮಿಯಲ್ಲಿ ಸಾಕಷ್ಟು ದೇವತೆಗಳು ಅವತಾರ ಎತ್ತಿದ್ದಾರೆ ಮತ್ತು ಇಲ್ಲಿ ಜನ್ಮ ತಾಳಿದ್ದಾರೆ. ಹಾಗಾಗಿ ಅವರ ಪ್ರಭಾವ ಹೆಚ್ಚಿರುವ ಕೆಲವು ವಿಶೇಷ ದೇವಸ್ಥಾನಗಳು ಇವೆ, ಇಂತಹ ದೇವಸ್ಥಾನದಲ್ಲಿ ಸಾಕ್ಷಾತ್ ದೇವರು ಬಂಧು ಭಕ್ತರ ಕಷ್ಟಕಾರ್ಪಣ್ಯಗಳನ್ನು ಆಲಿಸಿ ಸಲಹುತ್ತಾರೆ ಎನ್ನುವುದು ನಂಬಿಕೆ.

ಶ್ರೀ ಭದ್ರಾಕಳಿ ಪವಾಡ ಕಥೆ ಮೈ ಜುಮ್ ಅನ್ನಿಸುತ್ತೆ | BHADRAKALI SHAKTI PEETA | KALAPPANAHALLI | TAVAREKERE - YouTube

ಇಂತಹ ನೂರಾರು ದೇಶಾಲಯಗಳ ಉದಾಹರಣೆಗಳು ನಮ್ಮ ನಾಡಿನಲ್ಲೂ ಕೂಡ ಸಿಗುತ್ತದೆ. ಇವುಗಳಲ್ಲಿ ವಿಶೇಷವಾದ ಒಂದು ದೇವಸ್ಥಾನದ ಬಗ್ಗೆ ಇಂದು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಈ ದೇವಸ್ಥಾನದ ವಿಶೇಷತೆ ಏನು ಎಂದರೆ ಈ ದೇವಸ್ಥಾನದಲ್ಲಿ ನೆಲೆಸಿರುವುದು ತಾಯಿ ಭದ್ರಕಾಳಮ್ಮ. ಆಕೆ ಭಕ್ತಾದಿಗಳ ಕಷ್ಟವನ್ನು ಬಯಲು ಮಾಡುವ ಭಾಗ್ಯ ದೇವತೆಯಾಗಿ ಇಲ್ಲಿ ನೆಲೆಸಿ ಬರುವವರನ್ನು ಕಾಯುತ್ತಿದ್ದಾರೆ.

ಹಲವು ವರ್ಷಗಳಿಂದ ಈ ದೇವಸ್ಥಾನದಲ್ಲಿ ಪವಾಡವೇ ನಡೆಯುತ್ತಿದ್ದು, ಇತ್ತೀಚೆಗೆ ದೇವಸ್ಥಾನದ ಪ್ರಭಾವ ಹಾಗೂ ತಾಯಿಯ ಮಹಾತ್ಮೆ ತಿಳಿದು ರಾಜ್ಯದ ನಾನಾ ಭಾಗಗಳಿಂದ ಈ ದೇವಸ್ಥಾನಕ್ಕೆ ಭಕ್ತಾದಿಗಳು ಬರುತ್ತಾರೆ ಅಷ್ಟಕ್ಕೂ ಈ ದೇವಸ್ಥಾನ ಇರುವುದು ಕೋಲಾರ ಸಮೀಪದ ತಾವರೆಕೆರೆ ಬಳಿಯ ಕಲ್ಲಪ್ಪನ ಹಳ್ಳಿಯಲ್ಲಿ.

ಒಂದು ಬಾರಿ ಈ ದೇವಸ್ಥಾನಕ್ಕೆ ಬಂದವರು ಮತ್ತೆ ಮತ್ತೆ ಬರುತ್ತಲೇ ಇರುತ್ತಾರೆ ಹಾಗೂ ತಾವು ಭದ್ರಕಾಳಮ್ಮನ ಆಶೀರ್ವಾದದಿಂದ ಸಮಸ್ಯೆ ಬಗ್ಗೆ ಹರಿಸಿಕೊಂಡ ಕಾರಣ ತಾಯಿಯ ಮಹಿಮೆ ಬಗ್ಗೆ ಇನ್ನಷ್ಟು ಜನರಿಗೆ ಹೇಳುತ್ತಾರೆ ಈ ದೇವಸ್ಥಾನಕ್ಕೆ ಹೋಗಬೇಕು ಎಂದುಕೊಂಡು ತುಂಬಾ ದೂರದಲ್ಲಿದ್ದು ಹೋಗಲು ಆಗಲಿಲ್ಲ ಎಂದರೆ ಮನೆಯಲ್ಲಿ ಹರಕೆ ಕಟ್ಟಿಕೊಂಡರು ಸಾಕು 24 ಗಂಟೆಯಲ್ಲಿ ಸಮಸ್ಯೆ ಪರಿಹಾರ ಆಗುತ್ತದೆ. ಆ ನಂತರ ಹೋಗಿ ಹರಕೆ ಸಲ್ಲಿಸಬಹುದು.

ಈ ತಾಯಿಯ ಹೆಸರು ಹೇಳಿ ಮನೆಯಲ್ಲಿ ಮುಡುಪು ಕಟ್ಟಬಹುದು ಅಥವಾ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚುತ್ತೇನೆ ಅಥವಾ ಅನ್ನಸಂತರ್ಪಣೆ ಏರ್ಪಡಿಸುತ್ತೇನೆ ಎಂದು ಹರಕೆ ಮಾಡಿಕೊಳ್ಳಬಹುದು. ಇಂತಹ ಸರಳ ಹರಕೆಗಳಿಗೂ ಕೂಡ ತಾಯಿ ಒಲಿಯುತ್ತಾಳೆ ಮತ್ತು ಈ ದೇವಸ್ಥಾನದಲ್ಲಿ ಪ್ರತಿಂಗಿರ ದೇವಿ ಹೋಮ ಕೂಡ ನಡೆಯುತ್ತದೆ ಈ ಹೋಮದಲ್ಲೂ ಬಾಗಿಯಾಗಬಹುದು.

ಇಲ್ಲಿಗೆ ಬಂದ ಮೇಲೆ ಹಣಕಾಸಿನ ಸಮಸ್ಯೆ, ಆಸ್ತಿ ವ್ಯಾಜ್ಯ, ಮಕ್ಕಳ ಮದುವೆ ಸಮಸ್ಯೆ, ಸಂತಾನ ಸಮಸ್ಯೆ ವ್ಯಾಪಾರ ವ್ಯವಹಾರದ ಸಮಸ್ಯೆ, ಇನ್ನೂ ಮುಂತಾದ ಎಲ್ಲಾ ರೀತಿಯ ಕಷ್ಟಗಳಿಗೂ ಪರಿಹಾರ ಪಡೆದಿರುವ ಭಕ್ತರನ್ನು ಕಾಣಬಹುದು. ಈ ವಿಶೇಷ ಸ್ಥಳಕ್ಕೆ ಸಾಧ್ಯವಾದರೆ ನೀವು ಕೂಡ ಒಮ್ಮೆ ಭೇಟಿ ಕೊಟ್ಟು ಆಶೀರ್ವಾದ ಪಡೆಯಿರಿ.

You might also like

Comments are closed.