ಎಷ್ಟೇ ಕೋಟಿ ಕೊಟ್ಟರೂ ಇನ್ಮುಂದೆ ನಾನು ಲಿಪ್ ಲಾಕ್ ಸೀನ್ ಮಾಡಲ್ಲ ಎಂದ ನಟಿ ಪ್ರಿಯಾಮಣಿ ! ವಿಷಯ ತಿಳಿದು ನಿರ್ಮಾಪಕರಲ್ಲಿ ಆತಂಕ!!

CINEMA/ಸಿನಿಮಾ Entertainment/ಮನರಂಜನೆ

Priyamani : ಬಹುಭಾಷ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಮಣಿ (Priyaamani) ಯವರು ಸಿನಿಮಾದ ಜೊತೆಗೆ ಕಿರುತೆರೆ ಲೋಕದಲ್ಲಿಯೂ ಬ್ಯುಸಿಯಾಗಿದ್ದಾರೆ. ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟು ಇಪ್ಪತ್ತು ವರ್ಷವಾದರೂ ಇವತ್ತಿಗೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ತೆರೆ ಮೇಲೆ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಬೆಡಗಿಯೂ ಇದುವರೆಗೂ ಕೂಡ ಕಿಸ್ಸಿಂಗ್ ಸೀನ್‌ ನಲ್ಲಿ ಕಾಣಿಸಿಕೊಂಡಿಲ್ಲ. ಕಿಸ್ಸಿಂಗ್ ಸೀನ್ ನಲ್ಲಿ ನಟಿಸುವುದಿಲ್ಲ ಎನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ಪ್ರಿಯಾಮಣಿ, ” ತೆರೆಮೇಲೆ ನಾನು ಕಿಸ್ ಮಾಡಲ್ಲ. ಅದಕ್ಕೆ ನಾನು ಯಾವಾಗಲೂ ನೋ ಎನ್ನುತ್ತೇನೆ. ನನಗೆ ಗೊತ್ತು ಅದು ಕೇವಲ ಪಾತ್ರ ಮತ್ತು ಅದು ನನ್ನ ಕೆಲಸ. ಆದರೆ, ಬೇರೆ ಪುರುಷನೊಂದಿಗೆ ತೆರೆಮೇಲೆ ಕಿಸ್ ಮಾಡಲು ನನಗೆ ಇರಿಸುಮುರುಸು ಉಂಟಾಗುತ್ತದೆ. ನಾನು ಉತ್ತರ ಕೊಡಬೇಕಾಗಿರುವುದು ನನ್ನ ಗಂಡನಿಗೆ ಮಾತ್ರ. ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳದೇ ಇರೋದು ನನ್ನ ಜವಾಬ್ದಾರಿ ಎನಿಸುತ್ತದೆ. ಇತ್ತೀಚೆಗೆ ನಿರ್ದೇಶಕರೊಬ್ಬರು ಬಂದು ಸಿನಿಮಾ ಕಥೆ ಹೇಳಿದರು. ಅದರಲ್ಲಿ ಕಿಸ್ ದೃಶ್ಯ ಇತ್ತು. ನಾನು ಮಾಡಲ್ಲ” ಎಂದಿದ್ದಾರೆ.

ನಟಿ ಪ್ರಿಯಾಮಣಿಯವರ (Priyamani) ಮದುವೆ ಬಗ್ಗೆ ಸಾಕಷ್ಟು ಉಹಾಫೋಹಗಳಿವೆ. ಇದಕ್ಕೆ ಕಾರಣ ನಟಿ ಪ್ರಿಯಾಮಣಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದು. ಇವರಿಬ್ಬರ ದಾಂಪತ್ಯ ಜೀವನ ಸರಿಯಿಲ್ಲ ಎನ್ನುವ ಕೆಲವರಿಗೆ ನಟಿ ಖಡಕ್ ಆಗಿ ಉತ್ತರ ನೀಡಿದ್ದಾರೆ. ಈ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾಮಣಿ, ”ನಾನು ಪ್ರೀತಿಸಿ ಮದುವೆ ಆಗಿದ್ದು ತಪ್ಪಾ? ಎಲ್ಲಾ ಮುಸ್ಲಿಮರು ಐ-ಸಿಸ್ ಅಲ್ಲ. ನನ್ನನ್ನು ನೋಡಿ ದೇವತೆ ಹಾಗೆ, ಹೀಗೆ ಎನ್ನುತ್ತಾರೆ.

Priyamani
Priyamani

ಆದರೆ ನಾನು ಪ್ರೀತಿಸಿದವರನ್ನು ಮದುವೆಯಾದರೆ (Troll) ಮಾಡುತ್ತಾರೆ. ಇದು ನನಗೆ ತುಂಬಾ ಬೇಸರವಾಗುತ್ತಿದೆ. ನನ್ನ ಪತಿ ಮುಸ್ತಾಫಾ ರಾಜಾ ಬೇರೆ ಧರ್ಮದವರಾದರೆ (Religion) ಏನು? ಇದರಲ್ಲಿ ತಪ್ಪೇನಿದೆ? ಎಲ್ಲಾ ಮುಸ್ಲಿಮರು ಐ-ಸಿಸ್ ಅಲ್ಲ, ಎಲ್ಲರೂ ಲವ್ ಜಿ-ಹಾದ್ಮಾ ಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ ಎಂದಿರುವ ಪ್ರಿಯಾಮಣಿ, ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನೋದಿಲ್ವಾ, ಅದ್ಯಾಕೆ ಅರ್ಥವಾಗುವುದಿಲ್ಲ” ಎಂದಿದ್ದಾರೆ.

“ಭಾರತ ಜಾತ್ಯಾತೀತ ದೇಶ. ಹಿಂದೂ, ಮುಸ್ಲಿಂ, ಸಿಖ್ಖರು ಎಲ್ಲರೂ ಭಾಯಿ ಭಾಯಿ ಅಂತ ಅದಕ್ಕೇ ಹೇಳುವುದು. ಸುಮ್ಮನೇ ಮುಸ್ಲಿಂರನ್ನು ಮದ್ವೆಯಾದ ಮಾತ್ರಕ್ಕೆ ಹಾಗೆ ಹೀಗೆ ಹೇಳುವುದನ್ನು ನಿಲ್ಲಿಸಿ. ಇದು ನನ್ನ ಜೀವನ. ನನಗೆ ಯಾರು ಬೇಕೋ ಅವರೊಟ್ಟಿಗೆ ನನ್ನ ಮುಂದಿನ ಜೀವನ ಕಳೆಯುತ್ತೇನೆ. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿ-ಹಾದಿಗಳಾಗಿ ಹುಟ್ತಾರೆ, (Priyamani) ಇದು ಲವ್‌ ಜಿ-ಹಾದ್ ಅಂತೆಲ್ಲಾ ಅಂದರು. ಹೀಗೆ ಹೇಳಲು ನಿಮಗೆ ಹೇಗೆ ಮನಸ್ಸು ಬರುತ್ತದೆ? ನನ್ನ ಮಕ್ಕಳೇನೂ ಜಿ-ಹಾದಿಗಳಾಗಿ ಹುಟ್ಟುವುದಿಲ್ಲ” ಎಂದಿದ್ದಾರೆ ನಟಿ.

ನಟಿ ಪ್ರಿಯಾಮಣಿ ಈಗಾಗಲೇ ಸಾಕಷ್ಟು ಬಾರಿ ಟ್ರೋಲ್ ಆಗಿದ್ದು, ಟ್ರೋಲ್ ಮಾಡುವವರಿಗೂ ಕೂಡ ಸರಿಯಾಗಿ ಉತ್ತರ ನೀಡಿದ್ದು, “ಟ್ರೋಲ್‌ಗಳ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳುವುದಿಲ್ಲ. ನಾವು ಅದಕ್ಕೆ ಹೆಚ್ಚು ಗಮನ ಕೊಟ್ಟು ಪ್ರತಿಕ್ರಿಯಿಸಿದರೆ ಮತ್ತಷ್ಟು ಹೆಚ್ಚಾಗುತ್ತದೆ. ಬಾಡಿ ಶೇ-ಮಿಂಗ್ ಕೂಡ ಮಾಡಲಾಗುತ್ತಿದೆ. ಈ ಹಂತದಲ್ಲಿ ನಾನು ಸಣ್ಣ ಆಗಿದ್ದು ನೋಡಿ ಕೆಲವರು ಕಾಮೆಂಟ್ ಮಾಡ್ತಾರೆ. ಬರೀ ಬಾ-ಡಿ ಶೇಮಿಂಗ್ ಅಲ್ಲ, ನಾನು ಮದುವೆ ಆದಾಗ ಬಹಳ ಟ್ರೋಲ್ ಮಾಡಿದ್ದರು. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿ-ಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿ-ಹಾದ್ ಅಂತೆಲ್ಲಾ ಅಂದರು” ಎಂದಿದ್ದಾರೆ. ಸದ್ಯಕ್ಕೆ ನಟಿ ಪ್ರಿಯಾಮಣಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.