ಮೊದಲ ಸಲ ಬೋಲ್ಡ್ ಫೋಟೋ ಹಂಚಿಕೊಂಡ ಪ್ರಿಯಾ ವಾರಿಯರ್..!
ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಇದೇ ಮೊದಲ ಬಾರಿಗೆ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾರ ಫೋಟೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ರಾತ್ರೋರಾತ್ರಿ ಸ್ಟಾರ್ ಆದ ಹುಡುಗಿ ಈ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier). 2018ರಲ್ಲಿ ಪುಟ್ಟ ವಿಡಿಯೋ ಕ್ಲಿಪ್ನಿಂದಾಗಿ ಪ್ರಿಯಾ ಕೋಟ್ಯಂತರ ಮಂದಿಯ ಹೃದಯ ಕದ್ದರು.ಆ ಒಂದು ವೈರಲ್ ವಿಡಿಯೋದಲ್ಲಿ ಕೇವಲ ಒಂದೇ ಒಂದು ಕಣ್ಸನ್ನೆಯಿಂದ ಈ ಹುಡುಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಈಗ ಇದೇ ಪ್ರಿಯಾವಾರಿಯರ್ ಸಖತ್ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಪ್ರಿಯಾ ವಾರಿಯರ್ ಇದೇ ಮೊದಲ ಸಲ ಇಷ್ಟು ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದೇ ಮೊದಲ ಸಲ ಟಾಪ್ಲೆಸ್ ಫೋಟೋ ವನ್ನು ಪ್ರಿಯಾ ಹಂಚಿಕೊಂಡಿದ್ದಾರೆ.ಪ್ರಿಯಾ ಅವರ ಈ ಬೋಲ್ಡ್ ಹಾಗೂ ಹಾಟ್ ಫೋಟೋಗಳು ವೈರಲ್ ಆಗುತ್ತಿವೆ.ಅಭಿಮಾನಿಗಳು ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದಾರೆ. ಪ್ರಿಯಾ ಅವರ ಈ ಲುಕ್ ತುಂಬಾ ಜನರಿಗೆ ಇಷ್ಟವಾಗಿದೆ.ಮಲಯಾಳಂ ಸಿನಿಮಾ ಒರು ಆಡಾರ್ ಲವ್ ಸಿನಿಮಾದಲ್ಲಿನ ಒಂದು ವಿಡಿಯೋ ಕ್ಲಿಪ್ನಿಂದಾಗಿ ಪ್ರಿಯಾ ಅವರಿಗೆ ಇನ್ಸ್ಟಾಗ್ರಾಂನಲ್ಲಿ ಲಕ್ಷಾಂತರ ಮಂದಿ ಹಿಂಬಾಲಕರಾಗಿದ್ದರು.ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಅಭಿಮಾನಿಗಳಿಗೆ ಆಗಾಗ ಟ್ರೀಟ್ ಕೊಡುತ್ತಲೇ ಇರುತ್ತಾರೆ.