2018ರಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಕಂಡಿರುವ ಹೆಸರು ಇದು. ಕೇವಲ ಒಂದೇ ಒಂದು ವಿಡಿಯೋ ಕ್ಲಿಪ್ ಮೂಲಕ ರಾತ್ರಿ ವರ್ಲ್ಡ್ ವೈಡ್ ಫೇಮಸ್ ಆದ ಈಕೆ, ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿ ಎನಿಸಿದ್ದಾರೆ. ಹೌದು ನಾವು ಮಾತಾಡ್ತಾ ಇರೋದು ಯಾರ ಬಗ್ಗೆ ಅಂತ ನಿಮಗೆ ಈಗಾಗಲೇ ಗೊತ್ತಿರಬಹುದು, ನೀವು ಊಹಿಸಿರಬಹುದು. ಅವರೇ ಪ್ರಿಯಾ ಪ್ರಕಾಶ್ ವಾರಿಯರ್. ಇಂದು ಸೋಶಿಯಲ್ ಮೀಡಿಯಾ ಮೂಲಕವೇ ಸಾಕಷ್ಟು ಜನ ಫೇಮಸ್ ಆಗುತ್ತಿದ್ದಾರೆ.
ಒಂದೇ ಒಂದು ವಿಡಿಯೋ ಕ್ಲಿಪ್ ಪ್ರಿಯಾ ವಾರಿಯರ್ ನಂತಹ ಸಾಮಾನ್ಯ ನಟಿಯನ್ನೂ ಅದೆಷ್ಟು ಫೇಮಸ್ ಆಗಿಸಿತ್ತು ಅಂದ್ರೆ ಇಷ್ಟು ವರ್ಷಗಳ ನಂತರವೂ ಜನ ಅದರ ಬಗ್ಗೆ ಮಾತನಾಡುತ್ತಾರೆ. ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈ ಹೆಸರನ್ನ ಕೇಳಿದರೆ ಸ್ಕೂಲ್ ಹುಡುಗಿ ಒಬ್ಬಳು ನೆನಪಿಗೆ ಬರ್ತಾಳೆ. ಒಂದು ಚಂದದ ಲವ್ ಸ್ಟೋರಿ ಇರುವ ಸಿನಿಮಾದಲ್ಲಿ ಅಭಿನಯಿಸಿದ ಪ್ರಿಯಾ ವಾರಿಯರ್ ಅವರ ಕಣ್ಣು ಹೊಡೆಯುವ ಒಂದೇ ಒಂದು ಸೀನ್ ಕೋಟ್ಯಾಂತರ ವೀಕ್ಷಣೆಯನ್ನು ಪಡೆದುಕೊಂಡಿತ್ತು.
ಒರು ಆಧಾರ್ ಲವ್ ಏನು ಸಿನಿಮಾದಲ್ಲಿ ಸ್ಕೂಲ್ ಹುಡುಗಿಯ ಪಾತ್ರಒಂದನ್ನ ನಿಭಾಯಿಸಿದ ಪ್ರಿಯಾ ವಾರಿಯರ್ ಹಾಡೊಂದರಲ್ಲಿ ತನ್ನ ಹುಡುಗನಿಗೆ ಕಣ್ಣು ಹೊಡೆದು ಶೂಟ್ ಮಾಡುವ ಒಂದು ಸೀನ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆಗ ಪ್ರಿಯ ವಾರಿಯರ್ ಅವರ ಕಣ್ಣು ನೋಟಕ್ಕೆ ಸೋಲದೆ ಇದ್ದವರೇ ಇಲ್ಲ. 1999 ತ್ರಿಶೂರ್ ನಲ್ಲಿ ಹುಟ್ಟಿದ ಪ್ರಿಯಾ ವಾರಿಯರ್ ವಿದ್ಯಾಭ್ಯಾಸದ ಜೊತೆಗೆ ಮಾಡಲಿಂಗ್ ಕೂಡ ಮಾಡುತ್ತಾರೆ.
ಸದ್ಯ ತೆಲುಗು ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ಪ್ರಿಯ ಪ್ರಕಾಶ್ ವಾರಿಯರ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಖಾತೆ ಹೊಂದಿರುವ ಪ್ರಿಯ ವಾರಿಯರ್ ಈಗಾಗಲೇ ಸಾಕಷ್ಟು ಹಾಟ್ ಫೋಟೋ ಶೂಟ್ ಗಳನ್ನ ಮಾಡಿಸಿ ಪೋಸ್ಟ್ ಮಾಡಿದ್ದಾರೆ. ಸುಮಾರು ಏಳು ಮಿಲಿಯನ್ ಗೂ ಅಧಿಕ ಫಾಲೋವರ್ ಗಳನ್ನ ಹೊಂದಿರುವ ಪ್ರಿಯಾ, ಅದೆಷ್ಟು ಪಡ್ಡೆ ಹುಡುಗರ ಹೃದಯ ಗೆದ್ದಿದ್ದಾರೋ ಗೊತ್ತಿಲ್ಲ.
ಪ್ರಿಯ ವಾರಿಯರ್ ಅವರ ಮಾದಕ ಲುಕ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ನಟಿ ಪ್ರಿಯಾ ವಾರಿಯರ್ ಮಾಡೆಲ್ ಹಾಗೂ ನಟಿ ಮಾತ್ರ ಅಲ್ಲ ಉತ್ತಮ ಪ್ಲೇ ಬ್ಯಾಕ್ ಸಿಂಗರ್ ಕೂಡ ಹೌದು. ಇತ್ತೀಚೆಗೆ ಹಿಂದಿಯ ಕೇಸರಿಯ ಎನ್ನುವ ಹಾಡನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದ್ದರು ಪ್ರಿಯ. ಇವರ ಹಾಡನ್ನು ಕೇಳಿ ಸಾಕಷ್ಟು ಅಭಿಮಾನಿಗಳು ಲಕ್ಷಾಂತರ ಕಮೆಂಟ್ ಹಾಕಿದ್ದಾರೆ.
ಇತ್ತೀಚಿಗೆ ಪ್ರಿಯಾ ವಾರಿಯರ್ ಅವರ ಬೋಲ್ಡ್ ಅಂಡ್ ಹಾಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟಾಪ್ ಲೆಸ್ ಫೋಟೋವನ್ನು ಶೇರ್ ಮಾಡಿದ ಪ್ರಿಯ ಅವರು ಲಕ್ಷಾಂತರ ಲೈಕ್ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಪ್ರಿಯ ವಾರಿಯರ್ ಆಗಾಗ ತಮ್ಮ ಅಭಿಮಾನಿಗಳಿಗೆ ತಮ್ಮ ವಿಶೇಷ ಫೋಟೋಗಳ ಮೂಲಕ ಟ್ರೀಟ್ ಕೊಡುತ್ತಲೇ ಇರುತ್ತಾರೆ.
ಇನ್ನು ಅವರ ಎದೆಯ ಮೇಲ್ಭಾಗದಲ್ಲಿ ಇರುವ ಒಂದು ಟ್ಯಾಟು ಜನರನ್ನು ಇನ್ನಷ್ಟು ಆಕರ್ಷಿಸುತ್ತೆ. ಪ್ರಿಯಾ ವಾರಿಯರ್ ಅವರಿಗೆ ಸಿನಿಮಾದಲ್ಲಿಯೂ ಕೂಡ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸ್ಟಾರ್ ಆಗುವ ಎಲ್ಲಾ ಗುಣಗಳನ್ನು ಹೊಂದಿರುವ ಪ್ರಿಯಾ ಸದ್ಯ ತಮ್ಮ ಫೋಟೋಗಳಿಂದಲೇ ಎಲ್ಲರ ನಿದ್ದೆಗೆಡಿಸಿದ್ದಾರೆ!