ಮಕ್ಕಳೆದುರೇ ಜುಟ್ಟು ಹಿಡಿದು ಜಗಳ ಮಾಡಿಕೊಂಡ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ! ಹೆದರಿ ಕಾಪಾಡಿ ಎಂದು ಕಿರುಚಾಡಿದ ಮಕ್ಕಳು…

ಶಾಲೆ ಎನ್ನುವುದು ಜ್ಞಾನ ದೇಗುಲ, ಸರಸ್ವತಿ ಮಂದಿರವಾದ ಇಂಥ ಪೂಜ್ಯ ಸ್ಥಳಗಳಲ್ಲಿ ದೇಶದ ಭವಿಷ್ಯವನ್ನು ಬೆಳಗುವ ಪ್ರಜೆಗಳು ತಯಾರಾಗುತ್ತಾರೆ. ಶಾಲೆಯಲ್ಲಿ ದೇಶದ ಭವಿಷ್ಯ ನಿರ್ಮಾಣ ಆಗುತ್ತದೆ ಹಾಗೂ ಅನೇಕ ಯುವಕರ ಜೀವನದ ಬುನಾದಿಯೆ ಶಾಲೆ ಎಂದರೆ ಆ ಮಾತು ಅಕ್ಷರಶಃ ಸತ್ಯ. ಏಕೆಂದರೆ ಜೀವನದಲ್ಲಿ ಬಹು ಮುಖ್ಯವಾದ ಶಿಸ್ತು, ಸಮಯಪ್ರಜ್ಞೆ, ಶಿಕ್ಷಣ, ಜ್ಞಾನ, ವಿದ್ಯೆ, ಕಲೆಗಾರಿಕೆ ಇನ್ನೂ ಮುಂತಾದ ಅನೇಕ ಮೌಲ್ಯಗಳನ್ನು ಮಕ್ಕಳು ಶಾಲೆಯಿಂದಲೇ ಕಲಿಯುತ್ತಾರೆ.

ಅದರಲ್ಲೂ ಈಗಿನ ಕಾಲದಲ್ಲಿ ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚು. ಹಾಗಾಗಿ ಇಂತಹ ಚಿಕ್ಕ ಮಕ್ಕಳ ಎದುರುಗಿರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅದರಲ್ಲೂ ಮಕ್ಕಳು ಶಾಲೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಶಿಕ್ಷಕ ವೃತ್ತಿಯಲ್ಲಿರುವವರು ಅಥವಾ ಶಾಲೆಯಲ್ಲಿ ಕೆಲಸ ಮಾಡುವವರು ಸಚ್ಚಾರಿತ್ರ್ಯ ಹೊಂದಿ ಆದರ್ಶಕವಾಗಿ ಬದುಕಿದರೆ ಅಲ್ಲಿ ಕಲಿಯುವ ಮಕ್ಕಳಿಗೆ ಅವರೇ ಮಾದರಿ ಆಗಿರುತ್ತಾರೆ.

ಆದರೆ ಇಂತಹ ಒಂದು ಲೆಕ್ಕಾಚಾರಕ್ಕೆ ವಿರುದ್ಧವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದು ಹೋಗಿದೆ. ಉತ್ತರ ಪ್ರದೇಶದ ಕಾಸ್ ಗಂಜ್ ಪ್ರದೇಶದ ಶಾಲೆಯೊಂದರಲ್ಲಿ ಶಾಲಾ ಶಿಕ್ಷಕಿ ಮತ್ತು ಶಾಲಾ ಮಹಿಳಾ ಪ್ರಿನ್ಸಿಪಾಲ್ ಇಬ್ಬರೂ ಶಾಲಾ ಮಕ್ಕಳ ಎದುರೇ ಜಡೆ ಹಿಡಿದುಕೊಂಡು ಜಗಳವಾಡಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

ಇದರ ಬಗ್ಗೆ ಚರ್ಚೆ ಜೋರಾಗಿದೆ, ಇದನ್ನು ನೋಡಿದ ನೆಟ್ಟಿಗರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿ ಮಾತನಾಡುತ್ತಿದ್ದಾರೆ. ನೋಡಿದವರು ಇದು ಬಹಳ ತಮಾಷೆಯಾಗಿದೆ ಜಡೆ ಜಗಳ ನೋಡುವುದಕ್ಕೆ ಚೆನ್ನಾಗಿದೆ ಎಂದು ಕಾಮಿಡಿಯಾಗಿ ತೆಗೆದುಕೊಂಡಿದ್ದರೆ, ಮತ್ತೊಬ್ಬರು ಇಂತಹ ಶಿಕ್ಷಕರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ ಮುಂದುವರೆದು ಹಲವರು ಹಲವು ರೀತಿಯ ಅಭಿಪ್ರಾಯ ತಿಳಿಸುತ್ತಿದ್ದು, ಮಕ್ಕಳ ಎದುರು ಇರುವವರು ಮಾದರಿಯಾಗಿರಬೇಕು, ಇಲ್ಲವಾದಲ್ಲಿ ಚಿಕ್ಕ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಅದು ಗಾಢವಾದ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಇಂತಹ ಶಿಕ್ಷಕರು ಭವಿಷ್ಯಕ್ಕೆ ಮಾರಕ ಎಂದು ಸಹ ನುಡಿದಿದ್ದಾರೆ.

ಘಟನೆ ಬಗ್ಗೆ ಇನ್ನಿತರ ವಿಷಯಗಳು ಹೆಚ್ಚಾಗಿ ತಿಳಿಯದೆ ಇದ್ದರೂ ವಿಡಿಯೋದಲ್ಲಿ ಇಬ್ಬರು ಜಗಳ ಆಡಿಕೊಂಡು ಜಗಳ ತಾರಕಕ್ಕೇರಿ ಅಕ್ಕ ಪಕ್ಕದಲ್ಲಿ ಇದ್ದ ಕೆಲವು ಮಹಿಳೆಯರು ಬಿಡಿಸಲು ಬಂದರೂ ಅವರು ಸುಮ್ಮನಾಗದೆ ಇನ್ನು ಹೆಚ್ಚು ರಂಪಾಟ ಮಾಡಿರುವುದು ಕಂಡುಬರುತ್ತದೆ. ಅದರಲ್ಲೂ ಒಬ್ಬರು ಮುಂದುವರೆದು ಕಾಲಿನಲ್ಲಿ ಇದ್ದ ಚಪ್ಪಲಿಯನ್ನು ತೆಗೆದುಕೊಂಡು ಹೊಡೆಯಲು ಸಹ ಹೋಗುತ್ತಾರೆ.

ಇದರಿಂದ ಹೆದರಿದ ಅಲ್ಲೇ ಇದ್ದ ಸಣ್ಣ ಮಕ್ಕಳು ಕಾಪಾಡಿ ಕಾಪಾಡಿ ಎಂದು ಜೋರಾಗಿ ಚೀರುತ್ತಿರುವುದನ್ನು ನೋಡಬಹುದು. ಅಲ್ಲೇ ಇದ್ದವರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಇದನ್ನೆಲ್ಲಾ ದಾಖಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈಗ ಶಿಕ್ಷಕರ ಮತ್ತು ಪ್ರಿನ್ಸಿಪಾಲ್ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಸಹಾ ಇನ್ನು ತಿಳಿದು ಬಂದಿಲ್ಲ.

ಆದರೆ ಇದುವರೆಗೆ ಶಾಲಾ ಶಿಕ್ಷಕರ ಮತ್ತು ಮಕ್ಕಳ ಸಂಬಂಧದ ಕುರಿತ ಸಾವಿರಾರು ಬೆಸ್ಟ್ ವಿಡಿಯೋಗಳನ್ನು ನೋಡಿ ತಮ್ಮ ಶಾಲಾ ನೆನಪುಗಳನ್ನು ಹಾಗೂ ಫೇವರೆಟ್ ಟೀಚರ್ ಅನ್ನು ನೆನೆಸಿಕೊಳ್ಳುತ್ತಿದ್ದವರು ಈ ವಿಡಿಯೋ ನೋಡಿ ಬಹಳ ಬೇಸರಪಟ್ಟಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ನೀವು ಸಹ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಆ ವೀಡಿಯೋ ಕೆಳಗಿದೆ ನೋಡಿ…

You might also like

Comments are closed.