ಒಂದು ಕಾಲದಲ್ಲಿ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಫೇಮಸ್ ನಟಿಯಾಗಿದ್ದ ಮುದ್ದುಮುಖದ ನಟಿ ನೀಳಕಾಯದ ಪ್ರೇಮ ಅವರಿಗಿಂತ ಸೌಂದರ್ಯ ಪ್ರತಿಭೆಯಾಗಿದ್ದರು. ಚಿತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಿದ ನಟಿ ಪ್ರೇಮ ಅವರ ಬಾಳಲ್ಲಿ ಬಿರುಗಾಳಿ ಎದ್ದಿತ್ತು. ಅದು ಇಂದಿಗೂ ಕಡಿಮೆಯಾಗಿಲ್ಲ. ಆದರೂ ಕೂಡ ಎಲ್ಲಾ ನೋವನ್ನು ಒಬ್ಬರೇ ನುಂಗಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಬನ್ನಿ, ನಟಿ ಪ್ರೇಮಾ ಅವರ ಬದುಕಲ್ಲಿ ಅಂತಹ ದುರ್ಘಟನೆ ಏನಾಯಿತು..? ಹೀಗೆಲ್ಲಾ ಆಗಲು ಕಾರಣವೇನು ಎಂದು ತಿಳಿಯೋಣ ಬನ್ನಿ..
ಸವ್ಯಸಾಚಿ ಚಿತ್ರದ ಮೂಲಕ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ಅವರ ಆಟ ಹುಡುಗಾಟ ಸಿನಿಮಾ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗು್ತೆ. ಆದರೆ ಈ ಎರಡೂ ಸಿನಿಮಾಗಳು ಕೂಡ ಮಕಾಡೆ ಮಲಗುತ್ತವೆ. ಆಗ ಎಲ್ಲರೂ ಕೂಡ ಪ್ರೇಮಾ ಅವರಿಗೆ ಸಿನಿಮಾದಲ್ಲಿ ಬೆಳೆಯೋದಕ್ಕೆ ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಅದೇ ಸಂದರ್ಭದಲ್ಲಿ ಓಂ ಚಿತ್ರದಲ್ಲಿ ನಟಿಸುತ್ತಾರೆ. ಆಗ ಓಂ ಚಿತ್ರ ರಾಜ್ಯಾದ್ಯಂತ ಬಿಗ್ ಹಿಟ್ ಆಗುತ್ತದೆ. ನಂತರ, ನಮ್ಮೂರ ಮಂದಾರ ಹೂವೆ ಬರುತ್ತೆ.
ಅದು ಬಹಳ ದೊಡ್ಡ ಮಟ್ಟದಲ್ಲಿ ಹಿಟ್ ಆಗು್ತೆ. ಆಗಲೇ ಪ್ರೇಮ ಅವರಿಗೆ ಬೇರೆ ಭಾಷೆಗಳಲ್ಲೂ ನಟಿಸುವ ಅವಕಾಶ ಬರುತ್ತದೆ. ಮಲಯಾಳಂನ ಮೋಹನ್ ಲಾಲ್ ಜೊತೆ ಅಭಿನಯಿಸುತ್ತಾರೆ. ನಂತರ ವಿಷ್ಣುವರ್ಧನ್ ಜೊತೆಗೆ ನಟಿಸಿದ ಯಜಮಾನ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಓಡುತ್ತೆ. ಕನ್ನಡದಲ್ಲಿ 70 ಸಿನಿಮಾಗಳನ್ನು ಮಾಡಿದರೆ ತೆಲುಗಿನಲ್ಲಿ 28 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಮಲಯಾಳಂ ಒಂದಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಪೀಕ್ ನಲ್ಲಿರುವಾಗ ಅಂದರೆ 2006ರಲ್ಲಿ ಪ್ರೇಮ ಅವರ ಮನೆಯಲ್ಲಿ ಮದುವೆ ಮಾಡುತ್ತಾರೆ.
2013ನೇ ಇಸವಿಯಲ್ಲಿ ಗಂಡ-ಹೆಂಡತಿ ಇಬ್ಬರೂ ದೂರಾಗುತ್ತಾರೆ. 2016ರಲ್ಲಿ ಡಿವೋರ್ಸ್ ಪಡೆಯುತ್ತಾರೆ. ಸದ್ಯ ಪ್ರೇಮಾ ಅವರು ತಮ್ಮ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದಾರೆ. ಇನ್ನು 2018ರಲ್ಲಿ ಉಪೇಂದ್ರ ಅವರ ಜೊತೆಗೆ ಮತ್ತೆ ಬಾ ಸಿನಿಮಾದ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ರಿ ಎಂಟ್ರಿ ಕೊಟ್ಟರು. ಆದರೆ, ಈ ಸಿನಿಮಾ ಅಷ್ಟು ಹಿಟ್ ಆಗಲಿಲ್ಲ. ಇದೀಗ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿ, ಆ ಸಿನಿಮಾ ಬಗ್ಗೆ ಇನ್ನೂ ಯಾವ ಅಪ್ ಡೇಟ್ಸ್ ಇಲ್ಲ.