prema-2nd-marriage

Prema 2nd Marriage: ನನ್ನ ಜೀವನ ನನ್ನಿಷ್ಟ,ಒಳ್ಳೆ ವ್ಯಕ್ತಿ ಸಿಕ್ಕರೆ ಮದುವೆ ಆಗ್ತೀನಿ. ಪ್ರೇಮಾಗೆ ಕ್ಯಾನ್ಸರ್ ಇದ್ದಿದ್ದು ನಿಜಾನಾ?

CINEMA/ಸಿನಿಮಾ Entertainment/ಮನರಂಜನೆ

ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯ ದಿಂದ ಹಾಗೂ ತುಂಬಾ ಎತ್ತರವಾಗಿರೋದ್ರಿಂದಲೇ ಹೆಸರು ಮಾಡಿರುವ ನಟಿ ಅಂದ್ರೆ ಅದು ಪ್ರೇಮ. ಹೌದು ಹಲವಾರು ಯಶಸ್ವಿ ಚಿತ್ರಗಳ ಮೂಲಕ ತಮ್ಮ ಅಭಿನಯದ ಮೋಡಿಗೆ ಸಾಕಷ್ಟು ಅಭಿಮಾನಿ ಗಳನ್ನ ಸಂಪಾದಿಸಿರುವ ಪ್ರೇಮಾ ನಮ್ಮ ಕರ್ನಾಟಕದ ಕೊಡಗಿನವರು. 1977ರಲ್ಲಿ ಜನಿಸಿದ ಪ್ರೇಮಾ ಮೂರ್ನಾಡು ಜೂನಿಯರ್ ಕಾಲೇಜಿ ನಲ್ಲಿ ಓದುತ್ತಿರುವಾಗ್ಲೇ ಕ್ರೀಡೆಗಳಲ್ಲಿ ಮುಂದಿದ್ದರು. ಎತ್ತರ ಜಿಗಿತ ಮತ್ತು ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೂ ಹೋಗಿದ್ದಾರೆ. ಇವರ ಸಹೋದರ ಅಯ್ಯಪ್ಪ ಕೂಡ ಕರ್ನಾಟಕ ರಣಜಿ ತಂಡದಲ್ಲಿ ಗುರುತಿಸಿಕೊಂಡಿದ್ದು ಕನ್ನಡ ಬಿಗ್ ಬಾಸ್ ನಲ್ಲಿ ಕೂಡ ಭಾಗವಹಿಸಿದ್ದಾರೆ. ಆದ್ರೆ ಕ್ರೀಡೆಯಲ್ಲಿ ಮುಂದಿದ್ದ ಪ್ರೇಮಾ ಚಿತ್ರರಂಗ ಪ್ರವೇಶ ಮಾಡಿದ್ದೆ ನಿಗೂಢ.

ಕೇವಲ 18 ವರ್ಷಕ್ಕೆ ಅಂದ್ರೆ 1995 ರಲ್ಲಿ ಶಿವರಾಜಕುಮಾರ್ ರವರ `ಸವ್ಯಸಾಚಿ’ ಮತ್ತು ರಾಘವೇಂದ್ರ ರಾಜಕುಮಾರ್ ರವರ `ಆಟ ಹುಡುಗಾಟ’ ಚಿತ್ರ ದಿಂದ ಸಿನಿ ಪಯಣ ಆರಂಭಿಸಿದರು. ನಂತರ ಶಿವಣ್ಣ ರವರ `ಓಂ’ ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಜೊತೆಗೆ ಚಿತ್ರರಂಗದಲ್ಲಿ ಭದ್ರಾವಾಗಿ ನೆಲೆಯೂರುವ ಸುಳಿವು ಕೊಟ್ರು. ಅವ್ರ ಅಭಿನಯದ ಮೋಡಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ರು. ನಂತರ `ನಮ್ಮೂರ ಮಂದಾರ ಹೂವೇ’ ಚಿತ್ರದಲ್ಲಿ ಅದ್ಭುತ ನಟಸಿ, ನಂತರ ತೆಲಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿ ಅಲ್ಲಿಯೂ ಕೂಡ ಮೋಡಿ ಮಾಡಿದ್ರು. ನಾನು ನನ್ನ ಹೆಂಡ್ತೀರು, ಯಜಮಾನ, ಕನಸುಗಾರ, ಆಪ್ತಮಿತ್ರ, ಹೀಗೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ `ಸಿಂಗಾರೆವ್ವ’ ಎಂಬ ಕಲಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಅಲ್ದೇ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಸುಮಾರು ಏಳು ಚಿತ್ರ ಗಳಲ್ಲಿ ನಟಿಸಿದ್ದು ನಿಜಕ್ಕೂ ಕೂಡ ದೊಡ್ಡ ದಾಖಲೆಯೇ ಸರಿ. ಇಂತಹ ಉತ್ತುಂಗದ ಸಮಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ದೊಡ್ಡ ಪ್ರಮಾದವನ್ನೇ ಮಾಡಿಕೊಂಡು ಬಿಡುತ್ತಾರೆ ಪ್ರೇಮಾ. ಹೌದು 2006 ರಲ್ಲಿ ಜೀವನ್ ಅಪ್ಪಚ್ಚು ಜೊತೆ ವಿವಾಹವಾದ ಪ್ರೇಮಾ ತಮ್ಮ ಸಿನಿಜೀವನಕ್ಕೆ ತಾತ್ಕಾಲಿಕವಾಗಿ ವಿದಾಯ ಹೇಳಿದರು. ಆದ್ರೆ 2009 ರಲ್ಲಿ `ಶಿಶಿರ’ ಎಂಬ ಚಿತ್ರದಲ್ಲಿ ನಟಿಸಿದರು. ಆದ್ರೆ ಅದೇನಾಯ್ತೋ ಏನೋ ಗೊತ್ತಿಲ್ಲ 2016 ರಲ್ಲಿ ತಮ್ಮ ಹತ್ತು ವರ್ಷದ ದಾಂಪತ್ಯಕ್ಕೆ ಪರಸ್ಪರ ಒಪ್ಪಿಗೆ ಮೇರೆಗೆ ಬೆಂಗಳೂರಿನ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಳ್ಳುತ್ತಾರೆ.

ಒಳ್ಳೆ ವ್ಯಕ್ತಿ ಸಿಕ್ಕರೆ ಖಂಡಿತವಾಗಿಯೂ ಮದುವೆ ಆಗ್ತೀನಿ

ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಒಂದು ವರ್ಷಕ್ಕೆ ಅಂದ್ರೆ 2017 ರಲ್ಲಿ ಉಪೇಂದ್ರ ಮತ್ತೆ ಬಾ ಚಿತ್ರದಿಂದ ಮತ್ತೆ ಸಿನಿ ಪಯಣ ಆರಂಭಿಸಿದರು. ಹೌದು ಸುಮಾರು 70 ಕ್ಕೂ ಹೆಚ್ಚು ಕನ್ನಡ ಮತ್ತು 28 ತೆಲುಗು ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ ಸಿನಿ ಜೀವನದಲ್ಲಿ ಯಶಸ್ವಿಯಾದಂತೆ ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲೇ ಇಲ್ಲೇ. ವಿಚ್ಚೇದನದ ನಂತರ ಸಾಕಷ್ಟು ಉಹಾಪೋಹಗಳು ಗಾಳಿಸುದ್ದಿಗಳು ಏಳಲು ಆರಂಭಿಸುತ್ತವೆ ಅದರಂತೆ ಪ್ರೇಮಾ ಕೂಡ ಸಿನಿರಂಗದಂತೆ ದೂರ ಸರದದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿಬಿಡುತ್ತದೆ..

ಪ್ರೇಮಾ ಮರು ಮದುವೆ ಆಗುತ್ತಾರಂತೆ, ಪ್ರೇಮಾ ಅವ್ರಿಗೆ ಕ್ಯಾನ್ಸರ್ ಇದೆ ಆಗೇ ಹೀಗೆ ಅನ್ನುವ ಸುದ್ದಿಗಳು ಹರಿದಾಡಲು ಆರಂಭಿಸುತ್ತವೆ. ಪ್ರೇಮಾ ಕೂಡ ಯಾವುದಕ್ಕೂ ಕೂಡ ಪ್ರತಿಕ್ರಿಯೆ ಕೊಟ್ಟಿರೋದಿಲ್ಲ.. ಈ ಅಂತೇ ಕಥೆಯ ಸುದ್ದಿಗಳಿಗೆ ರೆಕ್ಕ ಪುಕ್ಕ ಕಟ್ಟಿ ಮಟ್ಟಷ್ಟು ಸುದ್ದಿಗಳು ಹುಟ್ಟಿಕೊಳ್ಳುತ್ತವೆ.. ಆದ್ರೆ ಇದೆಲ್ಲದಕ್ಕೂ ಸ್ವತಃ ಪ್ರೇಮಾ ಅವ್ರೆ ತೆರೆ ಹೇಳಿದಿದ್ದು, ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಮಾತಾನಾಡಿದ್ದಾರೆ.

ಇಂತ ವಿಷಯಗಳೇ ನನ್ನನ್ನ ಗಟ್ಟಿಯಾಗಿಸಿದ್ದು -ನಟಿ ಪ್ರೇಮಾ

ಹೌದು ಮದುವೆಯಾಗಿ ಹಲವು ಸಂಕಷ್ಟ ಗಳನ್ನು ಅನುಭವಿಸಿ ಹೊರ ಬಂದಿರುವ ನಟಿ ಪ್ರೇಮಾ, ಇದೀಗ ಮನಸ್ಸು ಬಿಚ್ಚಿ ಮಾತಾನಾಡಿದ್ದಾರೆ. ನಾನು ಅನುಭಸಿದ ಇಂತಹ ಸಮಸ್ಯೆಗಳಿಂದಾಗಿ ನಾನು ಇನ್ನಷ್ಟು ಗಟ್ಟಿಯಾಗಿದ್ದೇನೆ, ಒಳ್ಳೆಯ ವ್ಯಕ್ತಿ ಸಿಕ್ಕರೆ ಖಂಡಿತ ಮತ್ತೊಂದು ಮದುವೆಯಾಗುತ್ತೇನೆ ಅಂತ ಹೇಳಿಕೊಂಡಿದ್ದಾರೆ. ಹೌದು ವೈವಾಹಿಕ ಜೀವನದಲ್ಲಿ ಸಾಕಷ್ಟು ಕಷ್ಟ ಗಳನ್ನು ಎದುರಿಸಿದ ಪ್ರೇಮಾ, ಖಿನ್ನತೆಗೆ ಸಹ ಒಳಗಾದರು. ಇದರಿಂದ ಸದ್ಯ ಹೊರ ಬಂದಿರುವ ಪ್ರೇಮಾ ಮದುವೆ ಎಂಬುದು ಬೇಕು, ಯಾರಾದರೂ ಒಳ್ಳೆಯ ವ್ಯಕ್ತಿ ಸಿಕ್ಕರೆ ಖಂಡಿತ ಮದುವೆ ಆಗುತ್ತೀನಿ. 70ರ ವಯಸ್ಸಿನಲ್ಲಿ ಸಹ ಮದುವೆಯಾಗುವವರು ಇದ್ದಾರೆ. ನಾನ್ಯಾಕೆ ಆಗಬಾರದು. ಅಲ್ಲದೆ ಇದು ನನ್ನ ಬದುಕು,

ನನಗೆ ಇಷ್ಟವಾದರೆ ಖಂಡಿತ ಮತ್ತೆ ಮದುವೆಯಾಗುತ್ತೀನಿ ಆಗ್ತೀನಿ ಅಂತಲೂ ಹೇಳಿದ್ದಾರೆ. ಅಲ್ಲದೆ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿದ ಪ್ರೇಮಾ, ನಾನು ಖಿನ್ನತೆಗೆ ಒಳಗಾಗಿದ್ದೆ ಎಂಬುದು ನಿಜ ಆದರೆ ನನಗೆ ಪ್ರಾಣಾಂತಿಕ ಕಾಯಿಲೆ ಇದೆ, ನಾನು ಕ್ಯಾನ್ಸರ್​ ನಿಂದ ಬಳಲುತ್ತಿದ್ದೇನೆ ಎಂದೆಲ್ಲ ಸುಳ್ಳು ಸುದ್ದಿ ಅಬ್ಬಿಸಿದ್ರು. ಆದ್ರೆ ಅದೆಲ್ಲ ಸುಳ್ಳು. ನಾನು ಆಗ ಆಸ್ಟ್ರೇಲಿಯಾಗೆ ಹೋಗಿ ನನ್ನ ಗೆಳತಿಯೊಟ್ಟಿಗಿದ್ದೆ. ಅಲ್ಲಿಯೇ ಕೆಲವು ಧ್ಯಾನ, ಯೋಗ ಕೇಂದ್ರಗಳಿಗೆ ಹೋಗುತ್ತಿದ್ದೆ, ಆದ್ರೆ ಅದನ್ನೇ ಬಳಸಿಕೊಂಡು ಇಲ್ಲಿ ಸುಳ್ಳು ಸುದ್ದಿಗಳನ್ನು ವೈರಲ್ ಮಾಡಿದ್ರು. ಆದರೆ ಅವೆಲ್ಲವೂ ನನ್ನನ್ನು ಇನ್ನಷ್ಟು ಗಟ್ಟಿ ಮಾಡ್ತು ಅಂತ ಹೇಳಿಕೊಂಡಿದ್ದಾರೆ ನಟಿ ಪ್ರೇಮಾ.

ಹೌದು ಅವರವರ ಜೀವನ ಅವರವರ ಕೈಯಲ್ಲಿಯೇ ಇರುತ್ತದೆ. ಯಾವುದೇ ಸನ್ನಿವೇಶ, ಸಂಬಂಧ ಇಷ್ಟವಾಗುತ್ತಿಲ್ಲವೆಂದರೆ ಅದರಿಂದ ಹೊರಗೆ ಬರುವುದು ಅವರ ಕೈಯಲ್ಲಿಯೇ ಇರುತ್ತದೆ. ನಾನು ಸಹ ಬಹಳ ಕಷ್ಟಪಟ್ಟೆ, ಬಹಳ ನೊಂದೆ, ಭಾವುಕಳಾಗಿಬಿಡುತ್ತಿದ್ದೆ. ಆದರೆ ಕೊನೆಗೆ ನಿಶ್ಚಯಿಸಿ ವಿಚ್ಛೇದನ ಪಡೆದುಕೊಂಡೆ. ನನ್ನ ತಂದೆ-ತಾಯಿಗೆ ಹೇಳಿದ್ದೆ ಇದು ನನ್ನ ನಿರ್ಣಯ ಹಾಗಾಗಿ ನಾನೇ ಓಡಾಡಿ ಇದನ್ನು ಮುಗಿಸುತ್ತೇನೆಂದು, ಅದೇ ರೀತಿ ಪ್ರತಿದಿನವೂ ನಾನೇ ನ್ಯಾಯಾಲಯಕ್ಕೆ ಹೋಗುತ್ತಿದ್ದೆ ಹಾಗೆ ಕೊನೆಗೆ ಅದಕ್ಕೊಂದು ಪೂರ್ಣ ವಿರಾಮ ಹಾಕಿ ಬಂದು,

ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ ಅಂತಲೂ ಹೇಳಿಕೊಂಡಿದ್ದಾರೆ. ಇನ್ನು ವಿಚ್ಛೇದನದ ಬಳಿಕ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡ ಪ್ರೇಮಾ, 2017 ರಲ್ಲಿ ಉಪೇಂದ್ರ ಮತ್ತೆ ಬಾ, ಅದಾದ ಬಳಿಕ 2022 ರಲ್ಲಿ ಬಿಡುಗಡೆ ಆದ ವೆಡ್ಡಿಂಗ್ ಗಿಫ್ಟ್ ಹೆಸರಿನ ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರದಲ್ಲಿ ಇನ್ಯಾವುದೇ ಸಿನಿಮಾದಲ್ಲಿ ಪ್ರೇಮಾ ನಟಿಸಿಲ್ಲ. ಆದ್ರೆ ಕರ್ನಾಟಕ ಚುನಾವಣೆ ಹಿನ್ನಲೆ ಇತ್ತೀಚೆಗಷ್ಟೆ ಬಿಜೆಪಿ ಸಚಿವ ಬಿಸಿ ಪಾಟೀಲ್ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಪ್ರೇಮಾ ಭಾಗವಹಿಸಿದ್ದನ್ನ ನೋಡಿದ್ರೆ ಪ್ರೇಮಾ ರಾಜಕೀಯಕ್ಕೂ ಎಂಟ್ರಿ ಕೊಡ್ತಾರೆ ಅನ್ನೋ ವದಂತಿಗಳು ಕೇಳಿಬರುತ್ತಿವೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.