
ನಾವು ಕನ್ನಡಿಗರು ವಿಶಾಲ ಹೃದಯದವರು . ನಾವು ನಮ್ಮತನವನ್ನು ನಮ್ಮ ಜನರನ್ನು ಯಾವತ್ತೂ ಕೈಬಿಡುವುದಿಲ್ಲ . ಗುರುತು ಪರಿಚಯ ಇಲ್ಲದವರನ್ನು ಕೂಡ ನಮ್ಮವರಂತೆ ಪ್ರೀತಿಸುವ ಗುಣ ನಮ್ಮದು . ಕನ್ನಡಿಗರ ಈ ದುರ್ಬಲತೆಯನ್ನು ಉಪಯೋಗಿಸಿಕೊಂಡು.. ಕನ್ನಡಿಗರಿಗೆ ಟೋಪಿ ಹಾಕಿದ ವ್ಯಕ್ತಿ ಅಂದರೆ ಅದು ಡ್ರೋನ್ ಪ್ರತಾಪ್ . ಡ್ರೋನ್ ಪ್ರತಾಪ್ ಎಂಬ ಈ ವ್ಯಕ್ತಿ ತನ್ನ ಪ್ರೇರಕ ಭಾಷಣದಿಂದ,6 ಕೋಟಿ ಕನ್ನಡಿಗರ ಕಿವಿಗೆ ಹೂ ಮುಡಿಸಿದ್ದ .
22 ನೇ ವರ್ಷದ ತುಂಬಿದ ಈ ಹುಡುಗ “ತ್ಯಾಜ್ಯಗಳನ್ನು ಸಂಗ್ರಹಿಸಿ ,ನಾನು 600 ಡ್ರೋನ್ ಗಳನ್ನು ತಯಾರಿಸಿದ್ದೇನೆ ” ಎಂದು ಟಿವಿ ಮಾಧ್ಯಮಗಳ ಮೂಲಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದ .ಇಷ್ಟೇ ಅಲ್ಲದೆ “ನಾನು ಒಬ್ಬ ಯುವ ವಿಜ್ಞಾನಿ , ಜಪಾನ್ ಹಾಗೂ ಹತ್ತು ಹಲವಾರು ದೇಶಗಳನ್ನು ಸುತ್ತಿ ಬಂದಿರುವೆ” ಎಂದು ಸುಳ್ಳು ಪಟಾಕಿಗಳನ್ನು ಜನರ ಮುಂದೆ ಸಿ ಡಿಸಿದ್ದ.ನಿಜ ಸತ್ಯವನ್ನು ತಿಳಿಯದೆ ಜನರು ಇವನನ್ನು ಹೊಗಳಿದ್ದೇ ಹೊಗಳಿದ್ದು, ತಲೆ ಮೇಲೆ ಹೊತ್ತು ಕೂರಿಸಿಕೊಂಡಿದ್ದರು .

ಕೆಲವು ದಿನಗಳ ನಂತರ ಫ್ಯಾಕ್ಟ್ ಚೆಕ್ ಎಂಬ ವೆಬ್ ಸೈಟ್ ಮೂಲಕ ಡ್ರೋನ್ ಪ್ರತಾಪ “ನಕಲಿ ವಿಜ್ಞಾನಿ” ಎಂದು ತಿಳಿದುಬಂತು . ಆಮೇಲೆ ಪ್ರತಾಪ್ ನನ್ನ ಕನ್ನಡಿಗರು ಯಾಕೆ ಸುಳ್ಳು ಹೇಳಿದೆ ಎಂದು ಪ್ರಶ್ನೆ ಮಾಡಿದಾಗ, ಪ್ರತಾಪ್ “ನಾನು ನಕಲಿ ವಿಜ್ಞಾನಿ ಎನ್ನುವುದು ಸುಳ್ಳು , ನಾನು ಮಾಡಿರುವ ಸಾಧನೆ ಎಲ್ಲವೂ ನಿಜ .ಒಂದಲ್ಲ ಒಂದು ದಿನ ನಾನು ಸಾಕ್ಷಿ ಸಮೇತ ನಿಮ್ಮ ಮುಂದೆ ಬರುತ್ತೇನೆ” ಎಂದು ತನ್ನ ನಿರ್ಧಾರವನ್ನು ತಿಳಿಸಿದ್ದ . ಇದೀಗ ಸಾಕ್ಷಿ ಸಮೇತ ಡ್ರೋನ್ ಪ್ರತಾಪ್ ಕನ್ನಡಿಗರ ಮುಂದೆ ಬಂದಿದ್ದಾನೆ .
ಅಬು ಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲೈವ್ ವಿಡಿಯೋ ಮಾಡುವ ಮೂಲಕ ಎಲ್ಲಾ ವಿರೋಧಿಗಳಿಗೆ ಪ್ರತಾಪ್ ತಿರುಗೇಟು ನೀಡಿದ್ದಾನೆ .”ನಾನು ಯಾರಿಗೆ ಕೂಡ ಸಾಬೀತುಪಡಿಸುವ ಅಗತ್ಯವಿಲ್ಲ, ಆದರೆ ಟೈಂ ಬಂದಾಗ ನಿಮಗೆ ಉತ್ತರ ಸಿಗುತ್ತದೆ . ನಾನು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಾನು ಸರಿ ದಾರಿಯಲ್ಲಿ ಸಾಗುತ್ತಿದ್ದೇನೆ .ನನ್ನ ಮೇಲೆ ನೆಗೆಟಿವ್ ಆಗಿ ಕಮೆಂಟ್ ಮಾಡುವವರು ,ನನ್ನ ಒಳ್ಳೆಯದಕ್ಕೆ ಮಾಡ್ತೀರ ಅಂತ ಅಂದುಕೊಂಡಿದ್ದೇನೆ . ಕನ್ನಡಿಗರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ ನಾನು ಕನ್ನಡಿಗರನ್ನು ಇಷ್ಟಪಡುತ್ತೇನೆ .ಯಾವ ಜನರ ಮಧ್ಯೆ ನನಗೆ ಅವಮಾನ ಆಯಿತೋ ಅದೇ ಜನರ ಮಧ್ಯೆ ನಿಂತು ನಾನು ಗೆದ್ದು ತೋರಿಸುತ್ತೇನೆ ” ಎಂದು ಲೈವ್ ನಲ್ಲಿ ತನ್ನ ಅಭಿಪ್ರಾಯವನ್ನು ಡ್ರೋನ್ ಪ್ರತಾಪ್ ತಿಳಿಸಿದ್ದಾನೆ .
Comments are closed.