ನಟ ಪ್ರಕಾಶ್ ರಾಜ್.. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆಯ ಮೂಲಕವೇ ಬಹುದೊಡ್ಡ ಹೆಸರು ಮಾಡಿರುವ ನಟ.. ಅಭಿನಯ ಅಂತ ಬಂದರೆ ಪ್ರಕಾಶ್ ರಾಜ್ ಅವರು ಟಾಪ್ ನಟರುಗಳಲ್ಲಿ ಒಬ್ಬರಾಗಿ ನಿಲ್ತಾರೆ.. ಇನ್ನು ರಾಜಕೀಯದಲ್ಲಿಯೂ ಸಕ್ರೀಯರಾಗಿರುವ ನಟ ಪ್ರಕಾಶ್ ರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಿಗೇ ಸುದ್ದಿಯಾಗುತ್ತಿರುತ್ತಾರೆ.. ಅದೇ ರೀತಿ ಇದೀಗ ಮತ್ತೊಂದು ಮದುವೆಯಾಗಿ ಸುದ್ದಿಯಾಗುತ್ತಿದ್ದಾರೆ.. ಹೌದು ಅದಾಗಲೇ ಎರಡು ಬಾರಿ ಮದುವೆಯಾಗಿರುವ ಪ್ರಕಾಶ್ ರಾಜ್ ಅವರು ಇದೀಗ ಮತ್ತೊಮ್ಮೆ ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಪತ್ನಿಗೆ ಮುತ್ತನೀಡುವ ಫೋಟೋವನ್ನು ಹಂಚಿಕೊಂಡಿದ್ದಾರೆ.. ಆದರೆ ಹುಡುಗಿ ಯಾರು ಎಂದು ತಿಳಿದರೆ ಆಶ್ಚರ್ಯ ಆಗೋದು ಖಂಡಿತ..

ಹೌದು ಪ್ರಕಾಶ್ ರಾಜ್ ಅವರು 1994 ರಲ್ಲಿ ನಟಿ ಲಲಿತಾ ಕುಮಾರಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಹದಿನಾರು ವರ್ಷ ಸುಖವಾಗಿ ಸಂಸಾರವನ್ನೂ ಸಹ ನಡೆಸಿದ್ದರು.. ಆದರೆ 2009 ಲಲಿತಾ ಕುಮಾರಿ ಅವರಿಂದ ಕಾನೂನಾತ್ಮಕವಾಗಿ ದೂರವಾಗಿ ನಂತರ 2010 ರಲ್ಲಿ ಕೋರಿಯೋಗ್ರಾಫರ್ ಪೋನಿ ವರ್ಮಾ ಅವರ ಜೊತೆ ಸಪ್ತಪದಿ ತುಳಿದರು.. ತಮಗಿಂತ ಹದಿಮೂರು ವರ್ಷ ಚಿಕ್ಕವರಾದ ಪೋನಿ ವರ್ಮಾ ಅವರ ಜೊತೆ ಮದುವೆಯಾಗಿದ್ದು ಆಗ ಸುದ್ದಿಯೂ ಆಗಿತ್ತು.. ಇನ್ನು ಪ್ರಕಾಶ್ ರಾಜ್ ಹಾಗೂ ಪೋನಿ ವರ್ಮ ದಂಪತಿಗಳಿಗೆ ಒಬ್ಬ ಮಗನೂ ಇದ್ದಾನೆ..

ಮಗನನ್ನು ತುಂಬಾ ಪ್ರೀತಿಸುವ ಪ್ರಕಾಶ್ ರಾಜ್ ಅವರು ಮಗನಿಗೆ ವೇದಾಂತ್ ಎಂಬ ಹೆಸರನ್ನಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಮಗನೊಟ್ಟಿಗೆ ತೋಟದಲ್ಲಿ ಸಮಯ ಕಳೆಯುವ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.. ಆದರೆ ಈಗ ಅದೇ ಮಗನ ಮುಂದೆ ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ಮದುವೆಯಾಗಿದ್ದಾರೆ.. ಹೌದು ಮೂರನೇ ಬಾರಿಗೆ ಮದುವೆ ಆಗಿದ್ದಂತೂ ನಿಜ.. ಆದರೆ ಹುಡುಗಿ ಮತ್ಯಾರೂ ಅಲ್ಲ ತಮ್ಮ ಎರಡನೇ ಪತ್ನಿ ಪೋನಿ ವರ್ಮಾ ಅವರನ್ನೇ.. ಹೌದು ಮಗ ವೇದಾಂತ್ ನಾನು ನಿಮ್ಮ ಮದುವೆ ನೋಡಬೇಕು ಎಂದು ಆಸೆ ಪಟ್ಟ ಕಾರಣ ಪ್ರಕಾಶ್ ರಾಜ್ ಹಾಗೂ ಪೋನಿ ವರ್ಮಾ ಮತ್ತೊಮ್ಮೆ ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಪ್ರಕಾಶ್ ರಾಜ್ ಹಾಗೂ ಪೋನಿ ವರ್ಮಾ ಅವರಿಗೆ ಇದು ವಿಶೇಷ ದಿನವಾಗಿದ್ದು ತಮ್ಮ ಹನ್ನೊಂದನೇ ವರ್ಷದ ಮದುವೆ ದಿನವನ್ನು ಆಚರಿಸಿಕೊಳ್ಳುವ ಸಮಯದಲ್ಲಿಯೇ ಮತ್ತೆ ಮಗನ ಮುಂದೆ ಮದುವೆಯಾಗಿದ್ದಾರೆ.. ಅಷ್ಟೇ ಅಲ್ಲದೇ ಪರಸ್ಪರ ತುಟಿಗೆ ಮುತ್ತನಿಟ್ಟು ಮದುವೆ ನೆರವೇರಿಸಿಕೊಂಡಿದ್ದಾರೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿರುವ ಪ್ರಕಾಶ್ ರಾಜ್ ಅವರು ನಾವು ಈ ದಿನ ಮತ್ತೊಮ್ಮೆ ಮದುವೆಯಾಗಿದ್ದೇವೆ..

ನಮ್ಮ ಪುತ್ರ ವೇದಾಂತ್ ಇದಕ್ಕೆ ಸಾಕ್ಷಿಯಾಗಲು ಬಯಸಿದ್ದ ಎಂದಿದ್ದಾರೆ.. ಜೊತೆಗೆ ತಮ್ಮ ಮಡದಿ ಪೋನಿ ವರ್ಮಾಗೂ ಇದೇ ಸಮಯದಲ್ಲಿ ಧನ್ಯವಾದಗಳನ್ನು ತಿಳಿಸಿ ಕತ್ತಲಿನಿಂದ ಬೆಳಕಿಗೆ ತಂದು ಜೀವನದ ಸರಿ ದಾರಿ ತೋರಿದ್ದಕ್ಕೆ ಧನ್ಯವಾದಗಳು.. ನನ್ನ ಜೀವನದ ಸಂಗಾತಿಯಾಗಿದ್ದಕ್ಕೆ ನಾನು ನಿನಗೆ ಧನ್ಯವಾದಗಳನ್ನು ತಿಳಿಸುವೆನೆಂದಿದ್ದಾರೆ.. ಒಟ್ಟಿನಲ್ಲಿ ಎರಡನೇ ಪತ್ನಿಯಾದರೂ ಮೂರನೇ ಮದುವೆಯಾಗಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರಾಜ್ ಅವರು ಸುದ್ದಿಯಾಗಿದ್ದಾರೆ..