ಸ್ನೇಹಿತರೆ ಪ್ರಕಾಶ್ ರಾಜ್ ರವರು ಒಮ್ಮೆ ಕನ್ನಡದಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದರು ಈಗ ಇಡೀ ಭಾರತ ದೇಶದ ಎಲ್ಲಾ ಚಿತ್ರರಂಗಗಳು ಕೂಡ ಅವರನ್ನು ತಮ್ಮ ಚಿತ್ರಗಳಲ್ಲಿ ನಟಿಸಿ ಎಂದು ಬೇಡಿಕೊಳ್ಳುವ ಅಷ್ಟರಮಟ್ಟಿಗೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ಇದು ಪ್ರಕಾಶ್ ರಾಜ್ ರವರ ನಟನೆ ಹಾಗೂ ಪ್ರತಿಭೆಗೆ ಸಿಕ್ಕಂತಹ ಮನ್ನಣೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಪ್ರಕಾಶ್ ರಾಜ್ ರವರು ಕನ್ನಡ ಚಿತ್ರರಂಗದ ಮೂಲಕ ನಟನಾಗಿ ಪಾದಾರ್ಪಣೆ ಮಾಡಿದ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ನಟಿಸಿ ಬಹುಭಾಷಾ ತಾರೆ ಯಾಗಿ ಮಿಂಚುತ್ತಾರೆ.
ಇನ್ನು ಪ್ರಕಾಶ್ ರಾಜ್ ರವರು ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್ ಸ್ಟಾರ್ ನಟರೊಂದಿಗೆ ಕೂಡ ನಟಿಸಿರುವ ಅನುಭವವನ್ನು ಪಡೆದಿದ್ದಾರೆ. ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಬರುವುದಾದರೆ ಇವರು ಮೊದಲು ಲಲಿತಾ ಕುಮಾರಿ ಎಂಬುವವರನ್ನು ಮದುವೆಯಾಗಿದ್ದರು ಇವರಿಬ್ಬರಿಗೆ ಮೂರು ಜನ ಮಕ್ಕಳು ಇದ್ದರು. ಎರಡು ಹೆಣ್ಣು ಹಾಗೂ ಒಂದು ಗಂಡು. ಆದರೆ ಗಂಡು ಮಗು ಅಕಾಲಿಕವಾಗಿ ಅಗಲಿದ್ದನ್ನು ತಾಳಲಾರದೆ ಪ್ರಕಾಶ್ ರಾಜ್ ಅವರು ಮೊದಲ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿ ಪೋನಿ ವರ್ಮ ಎಂಬುವರನ್ನು ಮದುವೆಯಾಗುತ್ತಾರೆ.
ಇವರಿಗೆ ಒಬ್ಬ ಗಂಡು ಮಗು ಇದ್ದಾನೆ ಮೊದಲ ಹೆಂಡತಿಯ ಮಕ್ಕಳನ್ನು ಕೂಡ ಪ್ರಕಾಶ್ ರಾಜ್ ಅವರೇ ಸಾಕುತ್ತಿದ್ದಾರೆ. ಇನ್ನು ಪ್ರಕಾಶ್ ರಾಜ್ ರವರ ಈಗ ಮತ್ತೊಮ್ಮೆ ಇತ್ತೀಚಿಗೆ ಮಾಡಿರುವ ಘಟನೆ ಎಲ್ಲರ ಗಮನ ಸೆಳೆದಿದೆ. ಮತ್ತೊಮ್ಮೆ ಎಂದಾಗ ಮೂರನೇ ಮದುವೆಯಾಗುತ್ತಿದ್ದಾರೆ ಎಂದು ಭಾವಿಸುವ ಅಗತ್ಯವಿಲ್ಲ. ಹೌದು ಸ್ನೇಹಿತರೇ ಪ್ರಕಾಶ್ ರಾಜ್ ಅವರು ಸಾಮಾಜಿಕ ಕಳಕಳಿ ಹೊಂದಿರುವಂತಹ ನಟ ಹೀಗಾಗಿ ತಮ್ಮ ಫೌಂಡೇಶನ್ ಮೂಲಕ ಸಾಕಷ್ಟು ಬಡಜನರಿಗೆ ಆಗಾಗ ಸಹಾಯ ಮಾಡುತ್ತಿರುತ್ತಾರೆ.
ಇತ್ತೀಚಿಗಷ್ಟೇ ಪ್ರಕಾಶ್ ರಾಜ್ ರವರು ಮೈಸೂರಿನ ಶ್ರೀರಂಗಪಟ್ಟಣದ ಸಮೀಪವಿರುವ ಬಡಕುಟುಂಬಕ್ಕೆ ಜೆಸಿಬಿ ಯನ್ನು ಉಚಿತವಾಗಿ ನೀಡುವ ಮೂಲಕ ಅವರ ಕುಟುಂಬಕ್ಕೆ ದುಡಿಯುವ ಮಾರ್ಗವನ್ನು ಕಲ್ಪಿಸಿಕೊಟ್ಟಿದ್ದಾರೆ ತಮ್ಮ ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ. ಇದೇ ಕಾರಣಕ್ಕಾಗಿ ಪ್ರಕಾಶ್ ರಾಜ್ ಅವರು ಸಿನಿಮಾದ ಹೊರತಾಗಿಯೂ ಕೂಡ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಪ್ರಕಾಶ್ ರಾಜ್ ರವರ ಈ ಕಾರ್ಯಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.