pragathi-rishab-shetty

VIDEO : ನನ್ನ ಮತ್ತು ರಿಷಬ್ ಲವ್​​ ಸ್ಟೋರಿಗೆ ರಕ್ಷಿತ್ ಶೆಟ್ಟಿನೇ ಕಾರಣ!

CINEMA/ಸಿನಿಮಾ

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಎಂದು ಹೇಳುತ್ತಾರೆ, ಸದ್ಯಕ್ಕೆ ಕಾಂತಾರ ಸಿನಿಮಾದ ಸಕ್ಸಸ್ ನಿಂದ ಡಿವೈನ್ ಸ್ಟಾರ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಅವರ ಹಿಂದೆ ಶಕ್ತಿಯಾಗಿ ನಿಂತಿರುವುದು ಕೂಡ ಒಂದು ಹೆಣ್ಣು. ಈ ಬಗ್ಗೆ ರಿಷಭ್ ಶೆಟ್ಟಿ ಅವರೇ ಹೇಳಿಕೊಂಡಿರುವಂತೆ ಅವರ ಪತ್ನಿ ಪ್ರಗತಿಶೆಟ್ಟಿ ಅವರು ಅವರ ಜೀವನದಲ್ಲಿ ಬಂದ ಮೇಲೆ ಅವರ ಬದುಕು ಬಹಳ ಬದಲಾಗಿದೆಯಂತೆ. ತನ್ನ ಪ್ರತಿಯೊಂದು ಆಗುಹೋಗುಗಳಿಗೆ ಬೆನ್ನೆಲುಬು ಆಗಿ ನಿಂತಿರುವ ಪತ್ನಿಯಿಂದ ಈ ಮಟ್ಟಕ್ಕೆ ಸಾಧಿಸಲು ಸಾಧ್ಯ ಆಯಿತು ಎಂದು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಈಗ ಕಾಂತಾರ ಸಿನಿಮಾದ ಅದ್ಭುತ ಯಶಸ್ಸಿನ ನಂತರ ನಿರಂತರವಾಗಿ ಹಲವಾರು ಇಂಟರ್ವ್ಯೂಗಳಲ್ಲಿ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿಶೆಟ್ಟಿ ಅವರು ಪಾಲ್ಗೊಂಡಿದ್ದಾರೆ. ಈ ಎಲ್ಲಾ ಇಂಟರ್ವ್ಯೂಗಳಲ್ಲಿ ಸಾಮಾನ್ಯವಾಗಿ ಇವರ ಬಗ್ಗೆ ಕೇಳಲಾದ ಪ್ರಶ್ನೆ ಅವರ ಲವ್ ಸ್ಟೋರಿ ಬಗ್ಗೆ, ಹೀಗೆ ಟಿವಿ9 ಸಂದರ್ಶನದಲ್ಲಿ ಕೂಡ ಭಾಗಿಯಾದ ಪ್ರಗತಿಶೆಟ್ಟಿ ಅವರಿಗೆ ಮತ್ತೊಮ್ಮೆ ಅದೇ ಲವ್ ಸ್ಟೋರಿ ಬಗ್ಗೆ ಕೇಳಲಾದಾಗ ಈ ಬಾರಿ ವಿವರವಾಗಿ ಅವರು ತಮ್ಮ ಪ್ರೀತಿಯ ಕಥೆಯನ್ನು ಹಾಗೂ ಅದಕ್ಕೆ ಕಾರಣ ಯಾರು ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಎಲ್ಲಿಯ ಐಐಟಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಗತಿ, ಎಲ್ಲಿಯ ಸಿನಿಮಾ ಇಂಡಸ್ಟ್ರಿಯಲ್ಲಿ ಸೈಕಲ್ ಹೊಡೆಯುತ್ತಿದ್ದ ರಿಷಬ್. ಇವರಿಬ್ಬರ ನಡುವೆ ಪ್ರೀತಿ ಆಗಲು ಸೇತುವೆ ಆಗಿದ್ದು ಬೇರೆ ಯಾರು ಅಲ್ಲ ರಕ್ಷಿತ್ ಶೆಟ್ಟಿ! ಈಗ ಚಿಂಟು ಅಣ್ಣನಾಗಿ ಪ್ರಗತಿ ಅವರಿಗೆ ಬಹಳ ಹತ್ತಿರ ಆಗಿರುವ ರಕ್ಷಿತ್ ಶೆಟ್ಟಿ ಅವರ ಪರಿಚಯ ಆಗುವ ಮುನ್ನ ಪ್ರಗತಿ ಅವರು ರಕ್ಷಿತ್ ಶೆಟ್ಟಿ ಅವರ ಫ್ಯಾನ್ ಆಗಿದ್ದರು.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪ್ರಗತಿ ಅವರು ತಮ್ಮದೇ ಊರಿನ ಕಡೆಯ ಸ್ನೇಹಿತೆಯರೊಡನೆ ವಾರಾಂತ್ಯದಲ್ಲಿ ಸಿನಿಮಾಗೆ ಹೋಗಿರುತ್ತಾರೆ. ಆ ಗುಂಪಿನ ಎಲ್ಲರೂ ಕೂಡ ರಕ್ಷಿತ್ ಶೆಟ್ಟಿ ಅವರ ಫ್ಯಾನ್ ಆಗಿದ್ದು, ಪ್ರಗತಿ ಕೂಡ ಉಳಿದವರು ಕಂಡಂತೆ ಸಿನಿಮಾ ನೋಡಿದ ಬಳಿಕ ರಕ್ಷಿತ್ ಶೆಟ್ಟಿ ಅವರ ಫ್ಯಾನ್ ಆಗಿದ್ದರು. ಹೀಗಾಗಿ ರಕ್ಷಿತ್ ಶೆಟ್ಟಿ ಅವರ ರಿಕ್ಕಿ ಸಿನಿಮಾ ನೋಡಲು ಸ್ನೇಹಿತೆಯರೊಡನೆ ತೆರಳಿದ್ದರು.

ರಿಷಬ್ ಶೆಟ್ಟಿ ಅವರು ರಿಕ್ಕಿ ಸಿನಿಮಾದ ನಿರ್ದೇಶಕ ಎನ್ನುವುದು ಪ್ರಗತಿ ಅವರಿಗೆ ತಿಳಿದಿರಲ್ಲವಂತೆ, ಸಿನಿಮಾಗೆ ಹೋಗಿದ್ದ ಅದೇ ಥಿಯೇಟರ್ ಗೆ ರಕ್ಷಿತ್ ಹಾಗೂ ರಿಷಬ್ ಕೂಡ ಬಂದಿದ್ದರಂತೆ. ಆ ಸಮಯದಲ್ಲಿ ಎಲ್ಲರೂ ಕೂಡ ರಕ್ಷಿತ್ ಅವರನ್ನು ಗುರುತಿಸಿ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿದ್ದರಂತೆ. ಆಗ ಪಕ್ಕದಲ್ಲಿ ಒಬ್ಬರೇ ನಿಂತಿದ್ದ ರಿಷಬ್ ಅವರನ್ನು ಗಮನಿಸಿದ ಪ್ರಗತಿ ಅವರ ಸ್ನೇಹಿತೆ ಇವರೇ ಸಿನಿಮಾದ ನಿರ್ದೇಶಕ ಇವರ ಜೊತೆ ಫೋಟೋ ತೆಗೆದುಕೊಳ್ಳೋಣ ಎಂದು ಹೇಳಿದರಂತೆ.

ಆಗ ಪ್ರಗತಿ ಅವರು ಉಳಿದವರು ಕಂಡಂತೆ ಸಿನಿಮಾದಲ್ಲಿ ಇವರು ಕೂಡ ಅಭಿನಯಿಸಿದ್ದಾರೆ ಅಲ್ಲವಾ ಮಾತನಾಡಿಸೋಣ ಎಂದು ಹೋಗಿ ರಿಷಬ್ ಅವರೊಂದಿಗೆ ಮಾತಿಗಿಳಿದರಂತೆ, ಫೋಟೋ ತೆಗೆದುಕೊಂಡು ನಾವು ಕುಂದಾಪುರ ಕಡೆಯವರು, ನಮ್ಮ ಕಡೆಯವರು ಈಗ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿರುವುದು ನಮಗೆಲ್ಲ ಖುಷಿಯ ಸಂಗತಿ ಎಂದು ಪ್ರಗತಿ ಹೇಳಿದ್ದು ರಿಷಭ್ ಅವರಿಗೆ ಕನೆಕ್ಟ್ ಆದರು.

ಇವರನ್ನು ಎಲ್ಲೋ ನೋಡಿದ್ದೇನೆ ಎಂದು ಗಮನಿಸಿದಾಗ ಫೇಸ್ಬುಕ್ ನಿಂದ ರಿಕ್ವೆಸ್ಟ್ ಬಂದಿರುವುದು ಗೊತ್ತಾಗುತ್ತದೆ. ಅದನ್ನು ಅಕ್ಸೆಪ್ಟ್ ಮಾಡಿಕೊಂಡು ಆ ಮೂಲಕ ಮತ್ತೊಮ್ಮೆ ಅವರನ್ನು ಭೇಟಿಯಾಗಿ, ಭೇಟಿಯಾದ ವರ್ಷದೊಳಗೆ ಕುಟುಂಬದವರನ್ನು ಒಪ್ಪಿಸಿ ಮದುವೆ ಆದರಂತೆ! ಇದೀಗ ಈ ದಂಪತಿಗಳು ಇಬ್ಬರು ಮಕ್ಕಳೊಂದಿಗೆ ಸಂತೋಷದಿಂದ ಎಲ್ಲರಿಗೂ ಮಾದರಿ ಜೋಡಿಯಾಗಿ ಬದುಕುತ್ತಿದ್ದಾರೆ.

ಅವರ ಸಂದರ್ಶನದ ವಿಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.