ಜೀವನದ ಜಂಜಾಟದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ನಮ್ಮನ್ನು ನಮ್ಮ ಉದ್ದೇಶವನ್ನು ಮರೆತು ಏನು ಶಾಶ್ವತ ಅಲ್ಲ ಅಂತ ತಿಳಿದಿದ್ದರೂ ಹಗೆ ,ದ್ವೇಷ ,ಅಸೂಯೆಯಲ್ಲಿ ಮುಳುಗುತ್ತೇವೆ.ನಮ್ಮ ಮೂಲಕ ಭೂಮಿಗೆ ಬಂದ ಮಕ್ಕಳಿಗೆ ಒಂದು ಒಳ್ಳೆಯ ದಾರಿಯನ್ನು ತೋರಿಸಿ ಅವರಿಗೆ ಅವರು ಬದುಕುವಂತೆ ಮಾಡುವ ಬದಲು ಅವರಿಗೆ ಆಸ್ತಿ ಮಾಡಲು ಹೋಗಿ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ.ಹಾಗೆ ಅವರನ್ನು ಆ ಸುಳಿಯಲ್ಲಿ ಸಿಲುಕಿಸುತ್ತಿವೆ.ನಮಗೆ ನಾವೇ ಬಾವಿ ತೋಡಿಕೊಂಡು ಇದೇ ಜೀವನ ಇದೆ ಪ್ರಪಂಚ ಎಂದು ಗೆರೆ ಎಳೆದುಕೊಂಡು ಸಮುದ್ರವನ್ನು ನೋಡುವ ಮನಸ್ಸು ಮಾಡದೆ ಬಾವಿಯಲ್ಲಿಯೇ ಬದುಕನ್ನು ಕೊನೆ ಮಾಡುತ್ತೇವೆ.ಇದಾ ಜೀವನ ?ಇಷ್ಟಕ್ಕೇನಾ ನಾವು ಹುಟ್ಟಿರೋದು?ಗೆರೆಗಳನ್ನು ದಾಟಿ ಸಮುದ್ರಗಳನ್ನು ಮುಟ್ಟಿ ಆಕಾಶಕ್ಕೆ ಕೈ ಹಾಕಿ ಪ್ರತಿ ಕ್ಷಣವನ್ನು ಕುತೂಹಲಕಾರಿಯಾಗಿ ಮಾಡಿಕೊಂಡು ಜೀವಿಸುವುದು ಜೀವನ ಅಲ್ವೆ…
