Post-Office-scheme

Post Office: ಪೋಸ್ಟ್ ಆಫೀಸಿನಲ್ಲಿ 399 ರೂ ಕಟ್ಟಿ 10 ಲಕ್ಷ ರೂ ಪಡೆಯಿರಿ, ಮುಗಿಬಿದ್ದ ಜನತೆ ಹೊಸ ಯೋಜನೆ ಜಾರಿ

Free Govt Schemes/ಸರ್ಕಾರಿ ಉಚಿತ ಯೋಜನೆಗಳು

Post Office Rs 399 Insurance Scheme: ಅಂಚೆ ಇಲಾಖೆ ಯಾವುದೇ ಹೊಸ ಯೋಜನೆ ಪರಿಚಯಿಸಿದ್ರೂ ಅದಕ್ಕೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗೋದು ಸಾಮಾನ್ಯ. ಅಂತೆಯೇ ಇತ್ತೀಚೆಗೆ ಅಂಚೆ ಇಲಾಖೆ ತನ್ನ ಗ್ರಾಹಕರ ಸುರಕ್ಷತೆಗಾಗಿ ಅತೀ ಕಡಿಮೆ ಹಣಕ್ಕೆ ದೊಡ್ಡ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ.

ಅಂಚೆ ಇಲಾಖೆಯ ಅಂಗಸಂಸ್ಥೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಅಪಘಾತ ವಿಮಾ ಪಾಲಿಸಿಯನ್ನು ಕೇವಲ 399ರೂ  ಹಾಗೂ 299ರೂ ಗೆ ಪರಿಚಯಿಸಿದೆ. ಈ ಯೋಜನೆಗೆ ಸೇರ್ಪಡೆಗೊಂಡರೆ 10ಲಕ್ಷ ರೂ (offering Rs 10 lakh cover) ಅಪಘಾತ ವಿಮೆ ಪಡೆಯಲು ನೀವು ಅರ್ಹತೆ ಗಳಿಸುತ್ತೀರಿ.

ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಗ್ರಾಹಕರಿಗೆ ಈ ಅಪಘಾತ ವಿಮಾ ಯೋಜನೆಯ ಪ್ರೀಮಿಯಂ ಪ್ಲ್ಯಾನ್ ವಾರ್ಷಿಕ 399ರೂ ಗೆ ಹಾಗೂ ಮೂಲ ಯೋಜನೆ ವಾರ್ಷಿಕ 299ರೂ.ಗೆ ಲಭ್ಯವಿದೆ.

Post Office Scheme: Big news! Post office is giving you a chance to earn 1  crore by just Rs 417 from this scheme, know how - Business League

ತುರ್ತು ಸಮಯಕ್ಕೆ ಲಾಭ

ಅಂಚೆ ಇಲಾಖೆಯ ಈ ವಿಮಾ ಯೋಜನೆಯ ಫಲಾನುಭವಿಗಳು ಆಕಸ್ಮಿಕವಾಗಿ ಅಪಘಾತದಲ್ಲಿ ಸಾವನ್ನಪ್ಪಿದ್ರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದ್ರೆ ಅಥವಾ ಇತರ ಅವಘಡಗಳಿಗೆ ತುತ್ತಾದ್ರೆ ಅವರಿಗೆ ಆರ್ಥಿಕ ನೆರವು ಸಿಗಲಿದೆ.

ಬದುಕಿನಲ್ಲಿ ಯಾವಾಗ ಏನು ಸಂಭವಿಸುತ್ತದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಅಪಘಾತಗಳು ಕೂಡ ಹಾಗೆಯೇ. ಹೀಗಾಗಿ ಅಪಘಾತಗಳನ್ನು ನಮ್ಮ ಯೋಚನೆಗೆ ನಿಲುಕದೇ ಇರಬಹುದು. ಹೀಗಾಗಿ ನೀವು ಇನ್ನೂ ಅಪಘಾತ ವಿಮೆ ಮಾಡಿಸಿಲ್ಲವೆಂದ್ರೆ ಆದಷ್ಟು ಬೇಗ ಅಂಚೆ ಇಲಾಖೆಯ ಈ ಅಪಘಾತ ವಿಮೆ ಮಾಡಿಸುವ ಬಗ್ಗೆ ಯೋಚಿಸಿ.

ಪೋಸ್ಟ್ ಆಫೀಸ್ ಖಾತೆ ಹೊಂದಿದವರಿಗೆ ಅವಕಾಶ

ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಈ ಎರಡು ವಿಮಾ ಯೋಜನೆಗಳ ಪ್ರಯೋಜನ ಪಡೆಯಬಹುದು. ಆದರೆ, ಈ ವಿಮೆ ಮಾಡಿಸುವ ಗ್ರಾಹಕರ ವಯಸ್ಸು 18-65 ವರ್ಷಗಳ ನಡುವೆ ಇರಬೇಕು.

ಈಗಾಗಲೇ ಐಪಿಪಿಬಿಯಲ್ಲಿ ನೀವು ಖಾತೆ ಹೊಂದಿದ್ರೆ 299ರೂ.ಅಥವಾ 399ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಬಹುದು. ಒಂದು ವೇಳೆ ನೀವು ಇನ್ನೂ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರದಿದ್ರೆ 100ರೂ. ಪಾವತಿಸಿ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆ ತೆರೆಯಿರಿ.

ಐಪಿಪಿಬಿಯಲ್ಲಿ ಖಾತೆ ತೆರೆಯಲು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು. ಆ ಬಳಿಕ ಖಾತೆಯಲ್ಲಿ ಕನಿಷ್ಠ 500 ರೂ. ಹಣ ಇಡಬೇಕು. ಆ ಬಳಿಕ 299ರೂ.ಅಥವಾ 399ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಬಹುದು.

Post Office Savings Account ओपनिंग है फायदे का इंस्ट्रूमेंट, अकाउंट खोलने  से पहले जान लें नियम

399ರೂ ಪ್ರೀಮಿಯಂ ಪ್ಲ್ಯಾನ್

399ರೂ ಪ್ರೀಮಿಯಂ ಪ್ಲ್ಯಾನ್ ಅಡಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ರೆ ಅಥವಾ ಸಂಪೂರ್ಣವಾಗಿ ಅಂಗವೈಕಲ್ಯ ಹೊಂದಿದ್ರೆ, ಪಾರ್ಶ್ವವಾಯುಗೆ ತುತ್ತಾದರೆ 10ಲಕ್ಷ ರೂ. ಅಪಘಾತ ವಿಮೆ ಒದಗಿಸಲಾಗುತ್ತದೆ. ಇನ್ನು ಐಪಿಡಿಯಲ್ಲಿ 60,000ರೂ. ತನಕ ವೈದ್ಯಕೀಯ ವೆಚ್ಚ ಗಳನ್ನು ಕ್ಲೈಮ್ ಮಾಡಬಹುದು. ಹಾಗೆಯೇ ಒಪಿಡಿಯಲ್ಲಿ 30,000ರೂ.

ಅಪಘಾತ ವೈದ್ಯಕೀಯ ವೆಚ್ಚಗಳನ್ನು ಕ್ಲೈಮ್ ಮಾಡಬಹುದು. ಒಂದು ವೇಳೆ ಆಸ್ಪತ್ರೆಗೆ ದಾಖಲಾಗಿದ್ರೆ 10 ದಿನಗಳ ಕಾಲ ದಿನಕ್ಕೆ 1000ರೂ. ಪಾವತಿಸಲಾಗುತ್ತದೆ. ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ ರೂ.1 ಲಕ್ಷ ವರೆಗೆ ಸಹಾಯ ಧನ ನೀಡಲಾಗುತ್ತದೆ. ವಾಹನ ಅಪಘಾತಗಳು, ಹಾವು ಕಡಿತ, ವಿದ್ಯುತ್ ಆಘಾತ. ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ರೆ 10ಲಕ್ಷ ರೂ. ವಿಮಾ ಪರಿಹಾರ ಪಡೆಯಲು ಅವಕಾಶವಿದೆ.

299ರೂ. ಬೇಸಿಕ್ ವಿಮಾ ಯೋಜನೆಯಲ್ಲಿ ಅಪಘಾತದಲ್ಲಿ ಮರಣ ಹೊಂದಿದ್ರೆ ಅಥವಾ ಕಾಯಂ ಅಂಗವೈಕಲ್ಯ, ಕಾಯಂ ಭಾಗಶಃ ಅಂಗವೈಕಲ್ಯ ಹಾಗೂ ಪಾರ್ಶ್ವವಾಯು ಉಂಟಾದ್ರೆ 10ಲಕ್ಷ ರೂ. ವಿಮಾ ಕವರೇಜ್ ಪಡೆಯಬಹುದು.ಆದರೆ, ಈ ಪಾಲಿಸಿಯಲ್ಲಿ 399ರೂ. ಪ್ರೀಮಿಯಂ ಪ್ಲ್ಯಾನ್ ಅಡಿಯಲ್ಲಿ ದೊರಕುವ ಶೈಕ್ಷಣಿಕ ಪ್ರಯೋಜನ, ಆಸ್ಪತ್ರೆ ನಿತ್ಯದ ನಗದು, ಕುಟುಂಬ ಪ್ರಯಾಣ ಪ್ರಯೋಜನಗಳು ಹಾಗೂ ಅಂತಿಮ ವಿಧಿ ವಿಧಾನಗಳ ಪ್ರಯೋಜನಗಳು ಲಭಿಸೋದಿಲ್ಲ. ಆದರೆ, 299ರೂ. ಪ್ಲ್ಯಾನ್ ನಲ್ಲಿ ಐಪಿಡಿಯಲ್ಲಿ 60,000ರೂ. ತನಕ ವೈದ್ಯಕೀಯ ವೆಚ್ಚ ಗಳನ್ನು ಕ್ಲೈಮ್ ಮಾಡಬಹುದು. ಹಾಗೆಯೇ ಒಪಿಡಿಯಲ್ಲಿ 30,000ರೂ. ಅಪಘಾತ ವೈದ್ಯಕೀಯ ವೆಚ್ಚಗಳನ್ನು ಕ್ಲೈಮ್ ಮಾಡಲು ಅವಕಾಶ ನೀಡಲಾಗಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.