ಕಂಪ್ಲೇಂಟ್ ಕೊಡಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಇನ್ಸಪೆಕ್ಟರ್! ವಿಡಿಯೊ ವೈರಲ್…

Today News / ಕನ್ನಡ ಸುದ್ದಿಗಳು

ಪೊಲೀಸರು ಅಂದರೆ ನಮಗೆ ಸಂರಕ್ಷಣೆಯನ್ನು ಒದಗಿಸುವಂತಹ ಅಧಿಕಾರಿ ಅಂತ ನಾವಂದುಕೊಳ್ಳುತ್ತೇವೆ ಅಷ್ಟೇ, ಅಲ್ಲದೆ ಸಮಾಜದಲ್ಲಿ ಯಾವುದೇ ರೀತಿಯಾದಂತಹ ಸಮಾಜ ಘಾ’ ತುಕ ಕೃತ್ಯ ನಡೆದರು ಕೂಡ ಪೊಲೀಸರು ನಮ್ಮ ಬೆಂಗಾವಲಾಗಿ ನಿಂತುಕೊಳ್ಳುತ್ತಾರೆ, ನಮಗೆ ರಕ್ಷಣೆ ನೀಡುತ್ತಾರೆ ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪೋಲೀಸ್ ಅಧಿಕಾರಿಗಳು ನಮಗೆ ರಕ್ಷಣೆ ನೀಡುವುದರ ಬದಲಾಗಿ ನಮ್ಮನ್ನೆ ಕಾಡುವಂತಹ ದುರ್ಮಾರ್ಗಿಗಳು ಆಗುತ್ತಾರೆ.

ಹೌದು ಈಗ ಸದ್ಯಕ್ಕೆ ಅಂತಹ ಒಂದು ಘಟನೆ ನಡೆದಿದೆ, ಮಹಿಳೆಯೊಬ್ಬಳು ತನಗಾದ ಅನ್ಯಾಯದ ಬಗ್ಗೆ ದೂರನ್ನು ನೀಡಲು ಪೋಲಿಸ್ ಸ್ಟೇಷನ್ ಗೆ ಬರುತ್ತಾಳೆ. ಆದರೆ ಪೊಲೀಸ್ ಅಧಿಕಾರಿ ಮಹಿಳೆಯ ದೂರನ್ನು ವಿಚಾರಿಸಿ ಆಕೆಗೆ ಸೂಕ್ತ ನ್ಯಾಯವನ್ನು ಒದಗಿಸುವುದರ ಬದಲಾಗಿ ಆಕೆಯನ್ನು ಪೊಲೀಸ್ ಅಧಿಕಾರಿ ತನಗಿಷ್ಟಬಂದಂತೆ ಬಳಸಿಕೊಂಡಿದ್ದಾನೆ. ಹೌದು! ದೂರು ನೀಡಲು ಬಂದಂತಹ ಮಹಿಳೆಯನ್ನು ಪೊಲೀಸ್ ಅಧಿಕಾರಿ ತನಗೆ ಮಸಾಜ್ ಮಾಡುವಂತೆ ಕೇಳಿದ್ದಾನೆ, ಇದನ್ನು ಕೇಳಿದಂತಹ ಮಹಿಳೆಗೆ ಬೇರೆ ಯಾವುದೇ ದಾರಿ ಇಲ್ಲದೆ ಕಂಗೆಟ್ಟು ವಿಧಿ ಇಲ್ಲದೆ ಪೊಲೀಸ್ ಅಧಿಕಾರಿಗೆ ಮಸಾಜ್ ಮಾಡುತ್ತಾಳೆ.

WATCH | Bihar woman, whose son was in jail, massages cop inside police station | Latest News India - Hindustan Times

ಸದ್ಯಕ್ಕೆ ಮಹಿಳೆಯು ಪೊಲೀಸ್ ಅಧಿಕಾರಿಗೆ ಮಸಾಜ್ ಮಾಡುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದಂತಹ ವ್ಯಕ್ತಿಗಳು ಪೊಲೀಸ್ ಅಧಿಕಾರಿಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲದೆ ಸಮಾಜವನ್ನು ರಕ್ಷಿಸಬೇಕಾದಂತಹ ಅಧಿಕಾರಿಗಳು ಈ ರೀತಿಯಾಗಿ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಕೂಡ ಘೋರ ತಪ್ಪು ಅಂತ ಹೇಳುತ್ತಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂತಹ ಕೃತ್ಯವನ್ನು ಮಾಡಿದ್ದಾರೆ, ನಿಜಕ್ಕೂ ಕೂಡ ಈತ ಮಾಡಿರುವಂತಹ ಕೆಲಸದಿಂದಾಗಿ ಪೊಲೀಸ್ ಇಲಾಖೆಯ ತಲೆ ತಗ್ಗಿಸುವಂತಾಗಿದೆ. ಈ ವಿಚಾರ ಹಿರಿಯ ಅಧಿಕಾರಿಗಳಿಗೆ ತಿಳಿಯುತ್ತಿದ್ದ ಹಾಗೆ ಈತನನ್ನು ಕೆಲಸದಿಂದ ಅ’ ಮಾ’ ನ’ ತು ಮಾಡಲಾಗಿದೆ. ಅಷ್ಟಕ್ಕೂ ಮಹಿಳೆಯ ಬಳಿ ಮಸಾಜ್ ಮಾಡಿಸಿಕೊಂಡಂತಹ ವ್ಯಕ್ತಿ ಯಾರು ಯಾವ ಸ್ಟೇಷನ್ ಗೆ ಸಂಬಂಧಪಟ್ಟಂತಹ ವ್ಯಕ್ತಿ ಎಂಬುದನ್ನು ನೋಡುವುದಾದರೆ…

Watch: Woman, seeking bail for her son, made to give massage to Bihar cop inside police station | India News | Zee News

ಈ ಘಟನೆ ಬಿಹಾರದ ಸಹಾರ್ಸ ಎಂಬ ಜಿಲ್ಲೆಯಲ್ಲಿ ನಡೆದಿದೆ. ನೌಹಟ್ಟ ಪೊಲೀಸ್ ಠಾಣೆಯ ದರ್ಬಾರ್ ಹೊರಠಾಣೆಯ ಹಿರಿಯ ಅಧಿಕಾರಿ ಆದಂತಹ ಶಶಿಭೂಷಣ್ ಸಿನ್ಹಾ ಎಂಬ ಹಿರಿಯ ಪೊಲೀಸ್ ಅಧಿಕಾರಿ ತಮ್ಮ ಮೈಮೇಲೆ ಇರುವಂತಹ ಪೊಲೀಸ್ ಸಮವಸ್ತ್ರವನ್ನು ತೆಗೆದು ತದನಂತರ ಮಹಿಳೆಯಿಂದ ಮಸಾಜ್ ಮಾಡಿಸಿಕೊಳ್ಳುವಂತಹ ದೃಶ್ಯ ವಿಡಿಯೊದಲ್ಲಿ ಕಾಣುತ್ತದೆ. ಮಹಿಳೆಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವಂತಹ ಈ ಪೊಲೀಸ್ ಅಧಿಕಾರಿ ಫೋನ್ ನಲ್ಲಿ ಮಾತನಾಡುವಂತಹ ದೃಶ್ಯವನ್ನು ಕೂಡ ನಾವು ಇಲ್ಲಿ ನೋಡಬಹುದಾಗಿದೆ‌.

ಈ ವಿಷಯ ಇದೆ ಸ್ಟೇಷನ್ ಹಿರಿಯ ಅಧಿಕಾರಿ ಆದತಂಹ ಲಿಪಿ ಸಿಂಗ್ ಅವರಿಗೆ ತಿಳಿಯುತ್ತದೆ, ತದನಂತರ ಶಶಿಭೂಷಣ್ ಸಿನ್ಹಾ ಅವರನ್ನು ಈ ಹುದ್ದೆಯಿಂದ ಅ’ ಮಾ’ ನ’ ತು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಕಾರಣ ಎಲ್ಲರೂ ಕೂಡ ವಿಡಿಯೋವನ್ನು ನೋಡಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯ ಅಸಾಯಕತೆ ಪೊಲೀಸ್ ಅಧಿಕಾರಿಯ ದರ್ಪ ಎರಡನ್ನು ಕೂಡ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ >>>  ದೇಶ ಕಾಯಲು ಹೋರಟ ಕನ್ನಡತಿಯರು ಇವರಿಗೆ ಬಿಗ್ ಸಲ್ಯೂಟ್

ಆ ವಿಡಿಯೊ ಕೆಳಗಿದೆ ನೋಡಿ…




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...