ಹೆಣ್ಣುಮಕ್ಕಳ ಶರ್ಟ್ ಗಳಲ್ಲಿ ಜೇಬು ಯಾಕೆ ಇರುವುದಿಲ್ಲ ಗೊತ್ತಾ? ಅಕಸ್ಮಾತ್ ಜೇಬು ಇದ್ದರೆ ಏನು ತೊಂದರೆ ಆಗುತ್ತೆ ನೋಡಿ!!

ಇದು ಸಮಾನತೆಯ ಕಾಲ. ಹಿಂದಿನ‌ ಕಾಲದಲ್ಲಿ ಹೆಣ್ಣನ್ನು ಕೀಳಾಗಿ ನೋಡಲಾಗುತ್ತಿತ್ತು.‌ ಹೆಣ್ಣು ಹೆತ್ತರೆ ಅಯ್ಯೋ ಹೆಣ್ಣಾ ಎಂದು ಜರಿಯಲಾಗುತ್ತಿತ್ತು.‌ ಅ ಹೆಣ್ಣಿಗೆ ವಿದ್ಯಾಭ್ಯಾಸ ಅನ್ನುವುದನ್ನೇ ಕೊಡಲಾಗುತ್ತಿರಲಿಲ್ಲ.‌ ಅವಳು ಬೆಳೆಯುತ್ತಿದ್ದಂತೆ ಮನೆಯ ನಾಲ್ಕು ಗೋಡೆಗಳ ನಡುವೆ ಕೂತು ಮನೆ ಕೆಲಸ ಮಾಡಬೇಕಿತ್ತು, ವಯಸ್ಸಿಗೆ ಬಂದ ಕೂಡಲೇ ಮದುವೆ ಮಾಡಿಸಿಕೊಡಲಾಗುತ್ತಿತ್ತು. ಆಕೆ ಮದುವೆ ಆದ ಮೇಲೆ ಸಂಸಾರ ತೂಗಿಸುವುದರಲ್ಲಿ, ಮಕ್ಕಳನ್ನು ಸಾಕುವುದರಲ್ಲಿಯೇ ಜೀವನ ಸವೆಸಬೇಕಾಗಿತ್ತು. ಹೊರಗಿ‌ನ ಪ್ರಪಂಚ ಅನ್ನುವುದೇ ಹೆಣ್ಣಿಗೆ ಗೊತ್ತಿರಲಿಲ್ಲ. ಆದರೆ ಈಗ ಹಾಗಲ್ಲ.

ಹೆಣ್ಣು ಯಾರಿಗೂ ಕಡಿಮೆ ಇಲ್ಲದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧಿಸಿ ತೋರಿಸಿದ್ದಾಳೆ. ಹೆಣ್ಣು ಹುಟ್ಟಿತೆಂದು ಮೂಗು ಜರೆಯುತ್ತಿದ್ದ ಹೆತ್ತವರು ಇದೀಗ ಹೆಣ್ಣು ಹುಟ್ಟಿದ ಕೂಡಲೇ ಧನ್ಯರು ಅಂತ ಭಾವಿಸುತ್ತಾರೆ. ಹೆಣ್ಣಿಗೂ ವಿದ್ಯಾಭ್ಯಾಸ ಕೊಟ್ಟು ಆಕೆಯನ್ನು ತನ್ನ‌ ಕಾಲ ಮೇಲೆ ತಾನು ನಿಲ್ಲುವಂತೆ ಮಾಡಲು ಸಹಕಾರ ಕೊಡುತ್ತಾರೆ. ಇದೀಗ ನಾವು ನೋಡಬಹುದು ಯಾವುದೇ ಶಾಲಾ ಕಾಲೇಜು ಗಳನ್ನು ನೋಡಿದರೂ ಅಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಜಾಸ್ತಿ ಇರುತ್ತದೆ. ಇನ್ನು ರಿಕ್ಷಾ ಡ್ರೈವರ್ ಆಗಿ ಕೆಲಸ ಮಾಡುವುದರಿಂದ ಹಿಡಿದು, ಪೈಲೆಟ್ ಆಗಿಯೂ ಹೆಣ್ಣು ತನ್ನ ಕಾರ್ಯ ಕ್ಷಮತೆ ಪ್ರದರ್ಶಿಸಿದ್ದಾಳೆ.

Hot Police Woman Twitter

ಕೃಷಿಗೂ ಸೈ, ಸೈನಿಕಳಾಗಿಯೂ ಸೈ ಎಂದು ತೋರಿಸಿಕೊಟ್ಟಿದ್ದಾಳೆ. ತಾನು ಚೆನ್ನಾಗಿ ಓದಿ, ನಂತರ ಪದವಿ ಪಡೆದು ಖಾಸಗಿ ಕೆಲಸ, ಸರ್ಕಾರಿ ಕೆಲಸ ಸಿಗಬೇಕು ಎಂದು ಬಯಸುವ ಹೆಣ್ಣು ಮಕ್ಕಳು ಒಂದು ಕಡೆಯಾದರೆ, ಇನ್ನು ಕೆಲವರಿಗೆ ಸಿವಿಲ್ ಸರ್ವಿಸ್ ಪರೀಕ್ಷೆ ಕ್ಲಿಯರ್ ಮಾಡಿ, ಸಮಾಜ ಸೇವೆ ಅದೇ ರೀತಿ ಸಾಮಾನ್ಯ ಜನರಿಗೆ ಸಹಾಯ ಆಗುವಂತಹ ಕೆಲಸಗಳನ್ನು ಮಾಡಬೇಕು ಎಂದು ಬಹು ದೊಡ್ಡ ಆಸೆ ಇಟ್ಟು ಕೊಂಡಿರುತ್ತಾರೆ. ಅದಕ್ಕಾಗಿ. ಸಿವಿಲ್ ಸರ್ವಿಸ್ ನಲ್ಲಿ ಸೇರಬೇಕು ಎಂದುಕೊಳ್ಳುವ ವಿದ್ಯಾರ್ಥಿಗಳು ಯು.ಪಿ.ಎಸ್.ಸಿ ಪರೀಕ್ಷೆ ಬರೆಯಲೇಬೇಕು. ಆದರೆ ಈ ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡುವುದು ಹೇಳಿದಷ್ಟು ಸುಲಭವಲ್ಲ.

Pin on Salwar suits

ಇದರಲ್ಲಿ ಕೇಳುವ ಪ್ರಶ್ನೆ ಎಷ್ಟು ಕಷ್ಟಕರವಾಗಿರುತ್ತದೆ ಎನ್ನುವುದು ನಿಮಗೆ ತಿಳಿದಿರುತ್ತದೆ. ಸಾಮಾನ್ಯವಾಗಿ ಯಾರಿಗೂ ಉತ್ತರಿಸಲು ಸಾಧ್ಯವಾಗದಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಇಂತಹ ಕೆಲವು ಪ್ರಶ್ನೆಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ಪ್ರಶ್ನೆ ಕೇಳಲಾಗಿತ್ತು. ಹೆಣ್ಣು ಮಕ್ಕಳ ಶರ್ಟ್ ಗಳಿಗೆ ಪಾಕೆಟ್ ಯಾಕೆ ಇಡಲ್ಲ ಅನ್ನುವ ಪ್ರಶ್ನೆ. ಇದಕ್ಕೆ ಅಭ್ಯರ್ಥಿಯು ಸಾವಧಾನವಾಗಿಯೇ ಉತ್ತರಿಸಿದ್ದು, ಹೆಣ್ಣು ಮಕ್ಕಳ ಶರ್ಟ್ ನಲ್ಲಿ ಕಿಸೆ ಇಟ್ಟರೆ ಅದರಲ್ಲಿ ಏನಾದರೂ ಇಡುವ ಹಾಗೆ ಇಲ್ಲ,ಆಗ ಹೆಣ್ಣಿನ ಸೌಂದರ್ಯ ಹಾಳಾಗುತ್ತದೆ ಎಂದು ಹೆಣ್ಣು ಅಭ್ಯರ್ಥಿನಿ ಉತ್ತರಿಸಿದ್ದಾಳೆ. ಈ ಮಾಹಿತಿಯ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

You might also like

Comments are closed.